Pushpa 2 OTT Confirmed! ಅಲ್ಲು ಅರ್ಜುನ್ ಅಭಿನಯದ ಬ್ಲಾಕ್ ಬಾಸ್ಟರ್ ಸಿನಿಮಾ ಎಲ್ಲಿ ಮತ್ತು ಯಾವಾಗ ವೀಕ್ಷಿಸಬಹುದು?

Pushpa 2 OTT Confirmed! ಅಲ್ಲು ಅರ್ಜುನ್ ಅಭಿನಯದ ಬ್ಲಾಕ್ ಬಾಸ್ಟರ್ ಸಿನಿಮಾ ಎಲ್ಲಿ ಮತ್ತು ಯಾವಾಗ ವೀಕ್ಷಿಸಬಹುದು?
HIGHLIGHTS

ಈವರಗೆ Pushpa 2: The Rule ವೀಕ್ಷಿಸಲು ಸಮಯವಿಲ್ಲದೆ ಮಿಸ್ ಮಾಡಿಕೊಂಡವರಿಗೆ Netflix ಸಿಹಿಸುದ್ದಿ

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸೂಪರ್ ಹಿಟ್ ಬ್ಲಾಕ್ ಬಾಸ್ಟರ್ ಸಿನಿಮಾ ಪುಷ್ಪ (Pushpa).

Pushpa 2: The Rule ನಾಳೆ ಅಂದ್ರೆ 30ನೇ ಜನವರಿ 2025 ರಂದು ಪ್ರತ್ಯೇಕವಾಗಿ Netflix ಮೂಲಕ ಸ್ಟ್ರೀಮಿಂಗ್ ಆಗಲು ಸಜ್ಜಾಗಿದೆ.

Pushpa 2 OTT Confirmed: ಭಾರತದಲ್ಲಿ ಪ್ರಸ್ತುತ ಸಿಕ್ಕಾಪಟ್ಟೆ ಸದ್ದು ಮಾಡಿದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸೂಪರ್ ಹಿಟ್ ಬ್ಲಾಕ್ ಬಾಸ್ಟರ್ ಸಿನಿಮಾ ಪುಷ್ಪ (Pushpa) ಸೌಥ್ ಇಂಡಿಯನ್ ತೆಲುಗು ಸಿನಿಮಾಕ್ಕಾಗಿ ಕಾಯುವಿಕೆ ಕೊನೆಗೂ ಕೊನೆಗೊಂಡಿದೆ. ಇದರ ಎರಡನೇ ಭಾಗ Pushpa 2: The Rule ಕಳೆದ ತಿಂಗಳು ಅಂದ್ರೆ 5ನೇ ಡಿಸೆಂಬರ್ 2024 ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಿತ್ತು ಈವರಗೆ ವೀಕ್ಷಿಸಲು ಸಮಯವಿಲ್ಲದೆ ಮಿಸ್ ಮಾಡಿಕೊಂಡವರಿಗೆ Netflix ಸಿಹಿಸುದ್ದಿಯೊಂದನ್ನು ನಿಡುದ್ದು Pushpa 2: The Rule ನಾಳೆ ಅಂದ್ರೆ 30ನೇ ಜನವರಿ 2025 ರಂದು ಸ್ಟ್ರೀಮಿಂಗ್ ಆಗಲು ಸಜ್ಜಾಗಿದೆ.

Pushpa 2: The Rule OTT Confirmed in Kannada

ಹೌದು, ಕೊನೆಗೂ ಅತಿ ನಿರೀಕ್ಷಿತ ಸೌಥ್ ಇಂಡಿಯನ್ ತೆಲುಗು ಸಿನಿಮಾ Pushpa 2: The Rule ಈಗ ಮನೆಯಲ್ಲೇ ಕುಳಿತು ಫ್ಯಾಮಿಲಿ ಟೈಮ್ ಎಂಜಾಯ್ ಮಾಡಲು ಬರೋಬ್ಬರಿ 56 ದಿನಗಳ ನಂತರ ಅಧಿಕೃತವಾಗಿ ಜನ ಸಾಮಾನ್ಯರಿಗೆ ಅವಕಾಶವನ್ನು ನೀಡುತ್ತಿದೆ. ಪ್ರಸ್ತುತ ನೆಟ್‌ಫ್ಲಿಕ್ಸ್‌ನ ಎಕ್ಸ್‌ನಲ್ಲಿ ಪೋಸ್ಟ್‌ನ ಪ್ರಕಾರ ಈ ಸಿನಿಮಾ ಕೇವಲ 4 ಭಾಷೆಗಳಲ್ಲಿ ಅಂದ್ರೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಮಾತ್ರ ಬಿಡುಗಡೆಗೊಳಿಸಲಿದ್ದು ನಾರ್ಥ್ ಇಂಡಿಯನ್ ಹಿಂದಿ ವೀಕ್ಷಕರಿಗೆ ಕೊಂಚ ಬೇಸರಗೊಳಿಸಿದೆ.

Also Read: CMF Phone 1 Price Cut: ಕೇವಲ ₹14,343 ರೂಗಳಿಗೆ ಸಿಎಂಎಫ್ ಫೋನ್ ಖರೀದಿಸುವ ಸುವರ್ಣವಕಾಶ! ಇದು ಲಿಮಿಟೆಡ್ ಟೈಮ್ ಆಫರ್!

ಅಲ್ಲದೆ Pushpa 2: The Rule ಪ್ರತ್ಯೇಕವಾಗಿ Netflix ಮೂಲಕ ಮಾತ್ರ ಲಭ್ಯವಾಗಲಿದ್ದು ಹಿಂದಿ ಭಾಷೆಯಲ್ಲಿ ಯಾವಾಗ ಬರುತ್ತದೆ ಎನ್ನುವುದರ ಬಗ್ಗೆ ನೆಟ್‍ಫ್ಲಿಕ್ಸ್ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಅಷ್ಟೇಯಲ್ಲದೆ ಡೇಟ್ ಫಿಕ್ಸ್ ಮಾಡಿದೆ ಆದರೆ Netflix ಮೂಲಕ ನಾಳೆ ಯಾವ ಸಮಯಕ್ಕೆ ಸ್ಟ್ರೀಮಿಂಗ್ ಆರಂಭವಾಗುತ್ತೆ ಅನ್ನುವುದರ ಬಗ್ಗೆಯೂ ಯಾವುದೇ ಅಪ್ಡೇಟ್ ನೀಡಿಲ್ಲ. ಅಲ್ಲದೆ ಈ ಸಿನಿಮಾ ರನ್ನಿಂಗ್ ಸಮಯ 3 ಗಂಟೆ ಮತ್ತು 22 ನಿಮಿಷಗಳ ಕಾಲ ನಡೆಯುತ್ತಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo