Kannada Movies: ಭಾರತದಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಬಿಡುಗಡೆಯಾಗುವ ಹೆಚ್ಚಿನ ಚಲನಚಿತ್ರಗಳು ಅಥವಾ ವೆಬ್ ಸಿರೀಸ್ ಆನ್‌ಲೈನ್ OTT ಪ್ಲಾಟ್ಫಾರಂಗಳಿಗೆ ಹೋಗೋದು ಸಿಕ್ಕಾಪಟ್ಟೆ ಕಡಿಮೆಯಾಗಿದೆ. ಇದಕ್ಕೆ ಕಾರಣವೆಂದರೆ ವಾರ್ಷಿಕವಾಗಿ ನೋಡುವುದಾದರೆ ಕನ್ನಡದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ ಬಿಡುಗಡೆಯಾಗುತ್ತದೆ. ಅದರಲ್ಲೂ ಒಂದೋ ಎರಡೋ ಸಿನಿಮಾ ಮಾತ್ರ ದೊಡ್ಡ ಮತ್ತು ದೇಶದದ್ಯಹ್ನ ತಲೆ ಎತ್ತಿ ಎಲ್ಲ ರಾಜ್ಯಗಳಲ್ಲಿ ಬಿಡುಗಡೆಯಾಗಿ ಪ್ಯಾನ್ ಇಂಡಿಯಾಕ್ಕೆ ಗುರಿಯಾಗುತ್ತದೆ. ಪ್ರಸ್ತುತ 3 ಲೇಟೆಸ್ಟ್ ಕನ್ನಡ ಸಿನಿಮಾಗಳು ಸದ್ದಿಲ್ಲದೇ OTT ಮೂಲಕ ಬಿಡುಗಡೆಗೆ ಸಜ್ಜಾಗಿವೆ.
ಆದರೆ ಯಾಕೆ ಕನ್ನಡದಲ್ಲಿ ಹೆಚ್ಚಾಗಿ ವೆಬ್ ಸೀರಿಸ್‌ಗಲಿಲ್ಲ ಅಥವಾ ಯಾವ ಕಾರಣಕ್ಕಾಗಿ ಕನ್ನಡ ಸಿನಿಮಾಗಳು OTT ಸೆಟ್ ಏರುತ್ತಿಲ್ಲ ಅನ್ನುವ ಪ್ರಶ್ನೆಗೆ ಉತ್ತರ ನೋಡಿವುದಾದರೆ ಪ್ರತಿಯೊಂದು ಕನ್ನಡ ಸಿನಿಮಾವನ್ನು ಸಿನಿಮಾ ಮಂದಿರಗಳಿಗೆ ಬಂದು ನೋಡಲಿ ಎನ್ನುವುದು ಹಲವಾರು ಕಲಾವಿದರ ಅಭಿಪ್ರಾಯವಾಗಿದೆ. ಇದರ ಬಗ್ಗೆ ಇತ್ತೀಚಿಗೆ ದುನಿಯಾ ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಪ್ರಸ್ತುತ 3 ಲೇಟೆಸ್ಟ್ ಕನ್ನಡ ಸಿನಿಮಾಗಳು OTT ಮೂಲಕ ಬಿಡುಗದೆಗಳು ಸಜ್ಜಾಗಿವೆ.
ನವರಸ ನಾಯಕ ಜಗ್ಗೇಶ್ ನಟನೆಯ ‘ರಂಗನಾಯಕ’ ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ಅನೂಪ್ ಸಿಳೀನ್ ಸಂಗೀತದ ಎರಡು ಹಾಡುಗಳು ಚೆನ್ನಾಗಿದೆ. ಜಗ್ಗೇಶ್, ಗುರುಪ್ರಸಾದ್ ಜೊತೆಗೆ ಚೈತ್ರಾ ಕೋಟೂರು, ಯೋಗರಾಜ್ ಭಟ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಂದಹಾಗೆ ರಂಗನಾಯಕ (Ranganayaka) ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಜೀ ಸಂಸ್ಥೆಯ ಪಾಲಾಗಿದ್ದು ZEE5 ಮೂಲಕ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಈ ಕನ್ನಡ ಚಿತ್ರ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕಹಾನಿಗೆ ಒಂದಷ್ಟು ಸಿನಿಮೀಯ ಅಂಶಗಳನ್ನು ಸೇರಿಸಿ ‘ಸ್ಕ್ಯಾಮ್ 1770’ ಚಿತ್ರವನ್ನು ಮಾಡಲಾಗಿದೆ. ಹಣ ಇದೆ ಎಂದಮಾತ್ರಕ್ಕೆ ತಮ್ಮ ಮಕ್ಕಳಿಗೆ ಮೆಡಿಕಲ್ ಸೀಟ್ ಕೊಡಿಸಲು ಮುಂದಾಗುವ ಪೋಷಕರಿಗೆ ಈ ಸಿನಿಮಾದಲ್ಲಿ ಮುಖ್ಯವಾದ ಸಂದೇಶ ನೀಡಲಾಗಿದೆ. ತಮ್ಮ ಮಕ್ಕಳ ಭವಿಷ್ಯ ಕಟ್ಟಲು ಪ್ರಯತ್ನಿಸುವ ತಂದೆ-ತಾಯಿ ಇನ್ನೊಬ್ಬರ ಮಕ್ಕಳ ಜೀವನವನ್ನು ಹೇಗೆ ಹಾಳು ಮಾಡುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ವಿವರಿಸಲಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
ಅಮೆಜಾನ್ ಪ್ರೈಮ್ ವಿಡಿಯೋ ಮೂಲಕ ಮತ್ತೊಂದು ಸಿನಿಮಾ ಸ್ಟ್ರೀಮಿಂಗ್ ಅಂದ್ರೆ ಚಿಲ್ಲಿ ಚಿಕನ್ (Chilli Chicken) ಆಗಲಿದೆ. ಇದೊಂದು ನೈಜ ಘಟನೆ ಆಧರಿತ ಈ ಚಿತ್ರದ ವೀಕ್ಷಣೆಯನ್ನು ಮನೆಯಲ್ಲೇ ಕುಳಿತು ಎಂಜಾಯ್ ಮಾಡಬಹುದು. ಈ ಸಿನಿಮಾ ನಗರದಲ್ಲಿ ನಡೆದ ನೈಜ ಘಟನೆ ಈ ಚಿತ್ರಕ್ಕೆ ಸ್ಫೂರ್ತಿ. ಉತ್ತರ ಭಾರತದಿಂದ ಬೆಂಗಳೂರಿಗೆ ಬಂದ ಐವರು ಹುಡುಗ ಕತೆ ಚಿತ್ರದಲ್ಲಿದೆ. ಅನಿರೀಕ್ಷಿತ ಘಟನೆಯೊಂದು ಹೇಗೆ ಇವರ ಜೀವನ ಬದಲಿಸುತ್ತದೆ ಎನ್ನುವುದು ಇನ್ನುಳಿದ ಕಥೆಯಾಗಿದೆ.