OnePlus Buds Pro 3 ಭಾರತದಲ್ಲಿ ಬಿಡುಗಡೆಯಾಗಿದೆ! ಆಫರ್ ಬೆಲೆಯೊಂದಿಗೆ ಫೀಚರ್ಗಳೇನು ತಿಳಿಯಿರಿ

OnePlus Buds Pro 3 ಭಾರತದಲ್ಲಿ ಬಿಡುಗಡೆಯಾಗಿದೆ! ಆಫರ್ ಬೆಲೆಯೊಂದಿಗೆ ಫೀಚರ್ಗಳೇನು ತಿಳಿಯಿರಿ
HIGHLIGHTS

ಒನ್ ಪ್ಲಸ್ ಹೊಸ ಪ್ರೀಮಿಯಂ ವಿನ್ಯಾಸದೊಂದಿಗೆ OnePlus Buds Pro 3 ಬಿಡುಗಡೆಗೊಳಿಸಿದೆ.

OnePlus 13 Series ಅಡಿಯಲ್ಲಿ ಇಯರ್ ಬಡ್ಸ್‌ಗಳನ್ನು 11,999 ರೂಗಳಿಗೆ ಅನಾವರಣಗೊಳಿಸಿದೆ.

OnePlus Buds Pro 3 ಒಮ್ಮೆ ಚಾರ್ಜ್ ಮಾಡಿದ್ರೆ ಬರೋಬ್ಬರಿ 47 ಗಂಟೆಗಳ ಬ್ಯಾಟರಿ ಲೈಫ್ ನೀಡುತ್ತದೆ.

OnePlus Buds Pro 3 in India: ಚೀನೀ ಸ್ಮಾರ್ಟ್ಫೋನ್ ಉತ್ಪಾದಕರಾಗಿರುವ ಒನ್ ಪ್ಲಸ್ (OnePlus) ಕಂಪನಿ ಭಾರತದಲ್ಲಿ 7ನೇ ಜನವರಿ 2025 ರಂದು ಈ ಹೊಸ ಪ್ರೀಮಿಯಂ ವಿನ್ಯಾಸದೊಂದಿಗೆ OnePlus Buds Pro 3 TWS ಇಯರ್‌ಬಡ್‌ಗಳ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ OnePlus 13 Series ಅಡಿಯಲ್ಲಿ TWS ಇಯರ್‌ಬಡ್‌ಗಳ 11,999 ರೂಗಳಿಗೆ ಅನಾವರಣಗೊಳಿಸಿದೆ. OnePlus Buds Pro 3 ಒಮ್ಮೆ ಚಾರ್ಜ್ ಮಾಡಿದ್ರೆ ಬರೋಬ್ಬರಿ 43 ಗಂಟೆಗಳ ಬ್ಯಾಟರಿ ಲೈಫ್ ನೀಡುತ್ತದೆ. ಈ ಹೊಸ TWS ಇಯರ್‌ಬಡ್‌ಗಳ ಬಗ್ಗೆ ಆಫರ್ ಬೆಲೆ ಮತ್ತು ಫೀಚರ್, ವಿಶೇಷಣಗಳನ್ನು ಈ ಕೆಳಗೆ ತಿಳಿಯಿರಿ.

ಭಾರತದಲ್ಲಿ OnePlus Buds Pro 3 ಆಫರ್ ಬೆಲೆ ಮತ್ತು ಲಭ್ಯತೆ

ಪ್ರಸ್ತುತ ಈ OnePlus Buds Pro 3 ಕೇವಲ ಒಂದೇ ಒಂದು ಬಣ್ಣದಲ್ಲಿ ಮಾತ್ರ Sapphire Blue ಬಣ್ಣದ ರೂಪಾಂತರವು ಇತರ ರೂಪಾಂತರಗಳಂತೆಯೇ ಬರೋಬ್ಬರಿ 11,999 ರೂಗಳ ಬೆಲೆಯೊಂದಿಗೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಆದರೆ ಗ್ರಾಹಕರು 26ನೇ ಜನವರಿ 20205 ರವರೆಗೆ ರೂ 1,000 ರಿಯಾಯಿತಿ ಪಡೆಯಬಹುದು.

OnePlus Buds Pro 3 in India
OnePlus Buds Pro 3 in India

ಅಲ್ಲದೆ ಹೆಚ್ಚುವರಿಯಾಗಿ ICICI ಬ್ಯಾಂಕ್ ಕಾರ್ಡ್ ಹೊಂದಿರುವವರು ಹೆಚ್ಚುವರಿ ರೂ 1,000 ತ್ವರಿತ ಬ್ಯಾಂಕ್ ರಿಯಾಯಿತಿಯನ್ನು ಪಡೆಯುತ್ತಾರೆ. ಈ ಹೊಸ OnePlus Buds Pro 3 ಅನ್ನು ಆಸಕ್ತ ಬಳಕೆದಾರರು 10ನೇ ಜನವರಿ 2025 ರಿಂದ ಮಧ್ಯಾಹ್ನ 12:00 ಗಂಟೆಗೆ ಅಮೆಜಾನ್, ಫ್ಲಿಪ್‌ಕಾರ್ಟ್, ಮಿಂತ್ರಾ ಮತ್ತು ಒನ್ ಪ್ಲಸ್ ಅಧಿಕೃತ ವೆಬ್‌ಸೈಟ್ ಮತ್ತು ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಿಂದ ಖರೀದಿಸಲು ಲಭ್ಯವಿರುತ್ತದೆ.

Also Read: ಬಜೆಟ್ ಬೆಲೆಗೆ ಧೂಳೆಬ್ಬಿಸಿದ itel A70 ಸ್ಮಾರ್ಟ್‌ಫೋನ್‌! 12GB RAM ಮತ್ತು 5000mAh ಬ್ಯಾಟರಿ ಕೇವಲ…

OnePlus Buds Pro 3 ವಿಶೇಷಣ ಮತ್ತು ಫೀಚರ್ಗಳೇನು?

OnePlus Buds Pro 3 ಡ್ಯಾನಿಶ್ ಆಡಿಯೊ ಪರಿಣಿತ ಡೈನಾಡಿಯೊ ಟ್ಯೂನ್ ಮಾಡಿದೆ ಮತ್ತು 11mm ವೂಫರ್ ಮತ್ತು 6mm ಟ್ವೀಟರ್‌ನೊಂದಿಗೆ ಡ್ಯುಯಲ್ ಡ್ರೈವರ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದು ಉತ್ತಮ ವಾಯ್ಸ್ ಕ್ವಾಲಿಟಿಗಾಗಿ ಡ್ಯುಯಲ್ DAC ಗಳನ್ನು ಪ್ಯಾಕ್ ಮಾಡುತ್ತದೆ ಮತ್ತು ಸೌಮ್ಯ, ಮಧ್ಯಮ ಮತ್ತು ಗರಿಷ್ಠ ವಿಧಾನಗಳೊಂದಿಗೆ 50dB ANC ವರೆಗೆ ಬೆಂಬಲಿಸುತ್ತದೆ. ಜೊತೆಗೆ ಸುತ್ತುವರಿದ ಸೌಂಡ್ ಮಟ್ಟವನ್ನು ಆಧರಿಸಿ ANC ಅನ್ನು ಸರಿಹೊಂದಿಸುವ ಸ್ಮಾರ್ಟ್ ANC ಮೋಡ್ ಜೊತೆಗೆ ಈಕ್ವಲೈಜರ್ ಮತ್ತು ಇತರ ಮೋಡ್‌ಗಳ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ HeyMelody ಅಪ್ಲಿಕೇಶನ್‌ನೊಂದಿಗೆ OnePlus Buds Pro 3 ಅನ್ನು ಸಂಪರ್ಕಿಸಬಹುದು.

OnePlus Buds Pro 3 in India
OnePlus Buds Pro 3 in India

OnePlus Buds Pro 3 ಒಂದೇ ಚಾರ್ಜ್‌ನಲ್ಲಿ 10 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ ಮತ್ತು ಚಾರ್ಜಿಂಗ್ ಕೇಸ್‌ನೊಂದಿಗೆ 43 ಗಂಟೆಗಳವರೆಗೆ ಬ್ಯಾಟರಿ ನೀಡುತ್ತದೆ. ಹೆಚ್ಚುವರಿಯಾಗಿ ಇದು 90ms, ಡ್ಯುಯಲ್-ಡಿವೈಸ್ ಸಂಪರ್ಕ ಮತ್ತು SBC, AAC ಮತ್ತು LHDC 5.0 ಆಡಿಯೊ ಕೊಡೆಕ್‌ಗಳ ಕಡಿಮೆ ಲೇಟೆನ್ಸಿ ಗೇಮ್ ಮೋಡ್ ಅನ್ನು ಹೊಂದಿದೆ. ಡಿವೈಸ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP55 ರೇಟಿಂಗ್‌ನೊಂದಿಗೆ ಬರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo