ಮೆಸೇಜಿಂಗ್ ದೈತ್ಯ ವಾಟ್ಸಾಪ್ (WhatsApp) ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಫೈಲ್ ಗಾತ್ರದ ಮಿತಿಯನ್ನು 100MB ಯಿಂದ 2GB ವರೆಗೆ ಹೆಚ್ಚಿಸುವುದನ್ನು ಪರೀಕ್ಷಿಸುತ್ತಿದೆ. ಏಕೆಂದರೆ ಅದು ಟೆಲಿಗ್ರಾಮ್‌ಗೆ ಸ್ಪರ್ಧಿಸಲು ಈ ಹೊಸ ವೈಶಿಷ್ಟ್ಯಗಳನ್ನು ಸೇರಿಸುವುದನ್ನು ಮುಂದುವರೆಸಿದೆ. ವಾಟ್ಸಾಪ್ (WhatsApp) ಟ್ರ್ಯಾಕರ್ WABetaInfo ನ ವರದಿಯ ಪ್ರಕಾರ ಈ ಮೆಸೇಜ್ ಸೇವೆಯು ಅರ್ಜೆಂಟೀನಾದಲ್ಲಿ ಸೀಮಿತ ಪರೀಕ್ಷೆಯನ್ನು ನಡೆಸುತ್ತಿದೆ. ಅಪ್ಲಿಕೇಶನ್‌ನ ಇತ್ತೀಚಿನ ಬೀಟಾ ಆವೃತ್ತಿಯಲ್ಲಿ ಆಯ್ದ ಬಳಕೆದಾರರಿಗೆ 2GB ಗಾತ್ರದ ಫೈಲ್‌ಗಳನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ಇದು Android ಮತ್ತು iOS ಬಳಕೆದಾರರಿಗಾಗಿ ಕಾರ್ಯನಿರ್ವಹಿಸುತ್ತದೆ.
https://twitter.com/WABetaInfo/status/1507784431976787969?ref_src=twsrc%5Etfw
ವಾಟ್ಸಾಪ್ (WhatsApp) ಇದರ ರೋಲ್‌ಔಟ್‌ನ ಟೈಮ್‌ಲೈನ್ ಕೆಲ ವಾರಗಳಲ್ಲಿ ನಿರೀಕ್ಷಿಸಲಾಗಿದೆ. ವಾಟ್ಸಾಪ್ (WhatsApp) ಫೈಲ್ ಗಾತ್ರದ ಮಿತಿಯನ್ನು ಹೆಚ್ಚಿಸಿದರೆ ಅದು ಎರಡನೇ ಉದಾಹರಣೆಯಾಗಿದೆ. ಮೊದಲು ಈ ಮಿತಿಯು ಕೇವಲ 16MB ಆಗಿತ್ತು ನಂತರ ಅದನ್ನು 100MB ಗೆ ಹೆಚ್ಚಿಸಲಾಯಿತು. ಮಿತಿಗಳು ಪ್ಲಾಟ್‌ಫಾರ್ಮ್‌ನಿಂದ ಬದಲಾಗುತ್ತವೆ. ಉದಾಹರಣೆಗೆ ಇದು Android ಗಾಗಿ 100MB ಮತ್ತು iOS ಗಾಗಿ 128MB ಆಗಿದೆ. ಈ ಮಿತಿಯನ್ನು 2GB ಗೆ ಹೆಚ್ಚಿಸುವುದರಿಂದ ಟೆಲಿಗ್ರಾಮ್‌ಗೆ ಸ್ಪರ್ಧಿಸುವ ಸಾಧ್ಯತೆಯಿದೆ. ಇದು ಬಳಕೆದಾರರಿಗೆ 2GB ಗಾತ್ರದ ದೊಡ್ಡ ಫೈಲ್‌ಗಳನ್ನು ದೀರ್ಘಕಾಲದವರೆಗೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.
ಈ ವೈಶಿಷ್ಟ್ಯವು ವಾಟ್ಸಾಪ್ (WhatsApp) ಆಪ್ಟ್-ಇನ್ ಬೀಟಾ ಟೆಸ್ಟಿಂಗ್ ಪ್ರೋಗ್ರಾಂ ಅಡಿಯಲ್ಲಿ ಆಯ್ದ ಕೆಲ ಬಳಕೆದಾರರಿಗೆ ಲಭ್ಯವಿದೆ. ಈಗ WABetainfo ಪ್ರಕಾರ ಅಪ್ಡೇಟ್ ಮೊದಲಿಗೆ ಈ ತಿಂಗಳು iOS ಬಳಕೆದಾರರಿಗೆ ಹೊರಹೊಮ್ಮುತ್ತದೆ. ನಂತರ ಮುಂದಿನ ತಿಂಗಳು Android ಬಳಕೆದಾರರಿಗೆ ಬಿಡುಗಡೆಯಾಗುತ್ತದೆ. ಈ ಹೊಸ ಅಪ್‌ಡೇಟ್‌ನೊಂದಿಗೆ ಪ್ಲಾಟ್‌ಫಾರ್ಮ್ ಅನ್ನು ಪ್ರವೇಶಿಸಲು ನಿಮ್ಮ ಪ್ರೈಮರಿ ಫೋನ್ ಆನ್‌ಲೈನ್‌ನಲ್ಲಿ ಇಡಬೇಕಾಗುತ್ತದೆ. ಜೋಡಿಯಾಗಿರುವ ಸಾಧನಗಳಲ್ಲಿ ಲೈವ್ ಸ್ಥಳವನ್ನು ವೀಕ್ಷಿಸಲು ಸಾಧ್ಯವಿರುವುದಿಲ್ಲ.