ಈಗಾಗಲೇ ನಿಮಗೆ ತಿಳಿದಿರುವ ಹಾಗೆ WhatsApp ಅಲ್ಲಿ ಟ್ಸಾಪ್‌ನಲ್ಲಿ ಎಲ್ಲರಿಂದಲೂ ಅಳಿಸು ಅಥವಾ 'delete for everyone' ಎಂಬ ಫೀಚರ್ ಬಳಸಿರುವಿರಿ. ಇದು ನಾವು ಒಬ್ಬ ವ್ಯಕ್ತಿ ಅಥವಾ ಗುಂಪು ಚಾಟ್‌ಗಳಲ್ಲಿ ಕಳುಹಿಸಿದ ನಿರ್ದಿಷ್ಟ ಮೆಸೇಜ್ಗಳನ್ನು ಡಿಲೀಟ್ ಮಾಡಲು ಅನುಮತಿಸುತ್ತದೆ. ಕೆಲವರಿಗೆ ಇದು ವಾಟ್ಸಾಪ್ ಮೂಲಕ ದೊರೆತ ಅತ್ಯಂತ ಉಪಯುಕ್ತ ಫೀಚರ್ ಸಹ ಆಗಿದೆ. ಸಾಮಾನ್ಯವಾಗಿ ನಾವು ತಪ್ಪು ತಪ್ಪಾಗಿ ಚಾಟ್ ಮಾಡೋದು ನಮ್ಮನ್ನು ಮುಜುಗರ ಉಂಟು ಮಾಡುತ್ತದೆ. ಆದರೆ ಈ ಫೀಚರ್ ಮೂಲಕ ಅಂತಹ ಮುಜುಗರ ಸಂಧರ್ಭಗಳಿಂದ ಹೊರ ತರಲು ಹೆಚ್ಚು ಸಹಕಾರಿಯಾಗಿದೆ. ಆದರೆ ಇದರ ನಂತರವು ಈ ಫೀಚರ್ ಬಳಸುವ ಮುನ್ನ ತಿಳಿಯಲೇ ಬೇಕು ಈ ಮಾಹಿತಿ ಬಗ್ಗೆ ನೀವು ಹೆಚ್ಚು ಗಮನವರಿಸಬೇಕಾಗುತ್ತದೆ.
ಮೊದಲಿಗೆ ಗಮನದಲ್ಲಿಡಿ ಈ ಫೀಚರ್ ಎರಡು ಕಡೆಯಿಂದ ಮೆಸೇಜ್ ಯಶಸ್ವಿಯಾಗಿ ಅಳಿಸಲು ನೀವು ಮೆಸೇಜ್ ಕಳುಹಿಸಿದ ವ್ಯಕ್ತಿಯು ವಾಟ್ಸಾಪ್‌ನ ಇತ್ತೀಚಿನ ಆವೃತ್ತಿಯನ್ನು ಬಳಸುತ್ತಿರಬೇಕು. ನಿಮ್ಮಲ್ಲಿ ಒಬ್ಬರು ನೀವು ಅಥವಾ ಬೇರೆಯವರು ಹಳೆಯ ಆವೃತ್ತಿಯಲ್ಲಿದ್ದರೆ ಈ ಫೀಚರ್ ಕಾರ್ಯನಿರ್ವಹಿಸುವುದಿಲ್ಲ. ಅಲ್ಲದೆ ಈ ಫೀಚರ್ ಕೇವಲ ಆಂಡ್ರಾಯ್ಡ್ ಮತ್ತು iOS ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ ವಿಂಡೋಸ್ ಫೋನ್ಗಳಿಗಲ್ಲ.
ತಮ್ಮ ಆಪಲ್ ಫೋನ್‌ಗಳಲ್ಲಿ ವಾಟ್ಸಾಪ್ ಬಳಸುವವರಿಗೆ ಮೆಸೇಜ್ ಮೂಲಕ ಕಳುಹಿಸಿದ ಮೀಡಿಯಾವನ್ನು ಚಾಟ್‌ನಿಂದ ಅಳಿಸಿದರೂ ಸಹ ಅವರ ಫೋಟೋಗಳ ಫೋಲ್ಡರ್‌ನಲ್ಲಿ ಸೇವ್ ಮಾಡಬವುದು. iOS ಬಳಕೆದಾರರಿಗಾಗಿ ಮೆಸೇಜ್ ಅಳಿಸುವುದರಿಂದ ಅವರ ಫೋಟೋಗಳ ಅಪ್ಲಿಕೇಶನ್‌ನಿಂದ ಕಳುಹಿಸಲಾದ ಮೀಡಿಯಾವನ್ನು ಸ್ವಯಂಚಾಲಿತವಾಗಿ ವೆಲ್ತ್ ಮಾಡೋದಿಲ್ಲ. ಆಪಲ್ ಪ್ರೈವಸಿ ಪಾಲಿಸಿ ಅನುಮತಿಯಿಲ್ಲದೆ ಫೋನಿನ ಗ್ಯಾಲರಿಯನ್ನು ಪ್ರವೇಶಿಸಲು ವಾಟ್ಸಾಪ್ ಅನ್ನು ಅನುಮತಿಸದಿರುವುದು ಇದಕ್ಕೆ ಕಾರಣ. ಹೀಗೆ ನೀವು ಕೇವಲ ಐಫೋನ್ ಬಳಕೆದಾರರಾಗಿದ್ದಾರೆ ಮಾತ್ರ ಅನ್ವಯಿಸುತ್ತದೆ.
ನೀವು ಕಳುಹಿಸಿದ ಸಂದೇಶವನ್ನು ನೀವು ತಕ್ಷಣ ಅಳಿಸಿದರೂ ಸಹ ಅದನ್ನು ಸ್ವೀಕರಿಸುವ ವ್ಯಕ್ತಿಯು ನೀವು ಡಿಲೀಟ್ ಮಾಡುವ ಮೊದಲೇ ನೋಡುವ ಸಂಧರ್ಭಗಳು ಬರುವುದು ಸಾಮಾನ್ಯವಾಗಿದೆ. ಇದು ಸ್ವೀಕರಿಸುವ ವ್ಯಕ್ತಿಯ ನೋಟಿಫಿಕೇಶನ್ ಮೇಲೆಯೂ ನಿರ್ಭರಿತವಾಗಿರುತ್ತದೆ. ನೀವು ಮೆಸೇಜ್ ಕಳುಹಿಸಿದ ವ್ಯಕ್ತಿಯು ಈಗಾಗಲೇ ಚಾಟ್ ತೆರೆದಿದ್ದರೆ ಅಥವಾ ಸ್ಮಾರ್ಟ್‌ಫೋನ್ ನೋಟಿಫಿಕೇಶನ್ ಅಥವಾ ಡೆಸ್ಕ್‌ಟಾಪ್ ನೋಟಿಫಿಕೇಶನ್ ಹೊಂದಿದ್ದರೆ ಈ ಮೂಲಕ ವಿಷಯವನ್ನು ಪರಿಶೀಲಿಸುವ ಸಂಧರ್ಬಗಳು ಸಂಭವಿಸಬಹುದು. ಎರಡನೆಯ ಸಂದರ್ಭದಲ್ಲಿ ಅವನು / ಅವಳು ಚಾಟ್ ತೆರೆದ ನಂತರವೇ ಮೆಸೇಜ್ ಡಿಲೀಟ್ ಮಾಡಲಾಗಿದೆ ಎಂದು ಸ್ವೀಕರಿಸುವ ವ್ಯಕ್ತಿ ಅರಿತುಕೊಳ್ಳಬವುದು.
ನೀವು ಎಲ್ಲರಿಗೂ ಸಂದೇಶವನ್ನು ಅಳಿಸಲು ಪ್ರಯತ್ನಿಸುತ್ತಿದ್ದರೆ ಮತ್ತು ಕೆಲವು ಕಾರಣಗಳಿಂದ ಅದು ಸಂಭವಿಸದಿದ್ದರೆ ದುರದೃಷ್ಟವಶಾತ್ ವಾಟ್ಸಾಪ್ ನಿಮಗೆ ಯಾವುದೇ ನೋಟಿಫಿಕೇಶನ್ ನೀಡಿ ತಿಳಿಸುವುದಿಲ್ಲ. ಅಂದ್ರೆ ಯಾರೇ ನಿಮಗೆ ಕಳುಯಿಸಿದ ಮೆಸೇಜ್ ಅಳಿಸಲಾದ ಸಂದೇಶಗಳ ವೈಫಲ್ಯಗಳ ಬಗ್ಗೆ ನಿಮಗೆ ಕೆಲವೊಮ್ಮೆ ಮೆಸೇಜ್ ಕಳುಹಿಸುವಿಕೆ ಅಪ್ಲಿಕೇಶನ್ ಯಾವುದೇ ಮಾಹಿತಿಯನ್ನು ಕಳುಹಿಸುವುದಿಲ್ಲ. ಇದು ಒಂದು ರೀತಿಯಲ್ಲಿ ಟೆಕ್ನಿಕಲ್ ದೋಷವೆಂದು ಅರಿಯಬೇಕಾಗುತ್ತದೆ.