digit zero1 awards

WhatsApp: ನಂಬರ್ ಸೇವ್ ಮಾಡದೇ ಮೆಸೇಜ್ ಸೆಂಡ್ ಮಾಡುವ ಸುಲಭ ವಿಧಾನ

WhatsApp: ನಂಬರ್ ಸೇವ್ ಮಾಡದೇ ಮೆಸೇಜ್ ಸೆಂಡ್ ಮಾಡುವ ಸುಲಭ ವಿಧಾನ
HIGHLIGHTS

ಅನೇಕ ಸಂದರ್ಭಗಳಲ್ಲಿ ಸಾಮಾನ್ಯವಾಗಿ WhatsApp ಮೆಸೇಜ್ಗಳನ್ನು ಕಳುಹಿಸಲು ಈ ಟ್ರಿಕ್ ನಿಮಗೆ ಹೆಚ್ಚು ಸಹಕಾರಿ

ಸ್ನೇಹಿತರೇ ಇಂದಿನ ದಿನಗಳಲ್ಲಿ WhatsApp ಬಳಸದ ಫೋನ್ಗಳು ಮರಿಚಿಕ್ಕೆಯಾಗಿವೆ. ಏಕೆಂದರೆ ಈ WhatsApp ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ತ್ವರಿತ ಮೆಸೇಜ್ ಕಳುಹಿಸಲು ಹೆಚ್ಚು ಜನಪ್ರಿಯತೆ ಮತ್ತು ಹೆಚ್ಚು ಸುಲಭವಾಗಿದೆ. ಇದರ ಮೂಲಕ ನಾವು ನಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ (ಡೇಟಾ ಇದ್ದರೆ ಮಾತ್ರ) 24×7 ಕಾಲ ಅವರ ಸಂಪರ್ಕದಲ್ಲಿರುವುದರಲ್ಲಿ ನಮಗೆ ತುಂಬಾ ಸುಲಭಗೊಳಿಸಿದೆ. ಆದಾಗ್ಯೂ ಫೋನ್‌ ನಂಬರ್ಗಳನ್ನು ಸೇವ್ ಮಾಡದೇ ನೇರವಾಗಿ ಕಾಂಟೆಕ್ಟ್ ನಂಬರ್ಗೆ ಮೆಸೇಜ್ಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ಸುಲಭವಾಗಿ ಕಳುಹಿಸಬವುದು. ಇಂತಹ ಅನೇಕ ಸಂದರ್ಭಗಳಲ್ಲಿ ಸಾಮಾನ್ಯವಾಗಿ ವಾಟ್ಸಾಪ್ ಮೆಸೇಜ್ಗಳನ್ನು ಕಳುಹಿಸಲು ಈ ಟ್ರಿಕ್ ನಿಮಗೆ ಹೆಚ್ಚು ಸಹಕಾರಿಯಾಗುತ್ತದೆ.

ಮೊದಲಿಗೆ ನಂಬರ್ ಸಂಖ್ಯೆಯನ್ನು ಉಳಿಸದೆ WhatsApp ಮೆಸೇಜ್ಗಳನ್ನು ಕಳುಹಿಸಲು ಮೊದಲು ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ ಇಂಟರ್ನೆಟ್ ಬ್ರೌಸರ್ ತೆರೆಯಬೇಕಾಗುತ್ತದೆ. ನಂತರ ಆ ಬ್ರೌಸರ್‌ URL ಸ್ಥಳದಲ್ಲಿ ಈ ಲಿಂಕ್ https://api.whatsapp.com/send?phone=XXXXXXXXXXX ಎಂದು ಟೈಪ್ ಮಾಡಬೇಕಾಗುತ್ತದೆ. 

ನಂತರ ಈ ಲಿಂಕ್‌ ಕೋನೆಯಲ್ಲಿ XXXXXXXXXXX ಬದಲಿಗೆ ನೀವು ಆ ದೇಶದ ಕೋಡ್‌ನೊಂದಿಗೆ ಮೊಬೈಲ್ ನಂಬರ್ ನಮೂದಿಸಬೇಕಾಗುತ್ತದೆ. ಉದಾಹರಣೆಗೆ ನೀವು ಭಾರತೀಯ ನಂಬರ್ಗಳಿಗೆ ಮೆಸೇಜ್ ಮಾಡಲು ಬಯಸಿದರೆ XXXXXXXXXXX ಬದಲಿಗೆ 919876543210 ಹೀಗೆ ನಂಬರ್ ಸೇರಿಸಬೇಕಾಗುತ್ತದೆ ಅಷ್ಟೇ. 

ಈ ಬ್ರೌಸರ್‌ನಲ್ಲಿ ಲಿಂಕ್ ಅನ್ನು ನಮೂದಿಸಿದ ನಂತರ ನಿಮ್ಮ ಸ್ಕ್ರೀನ್ ಚಾಟ್ ಬಾಕ್ಸ್ ತೆರೆದು ನೀವು ಮೆಸೇಜ್ ಬಟನ್ ಕ್ಲಿಕ್ ಮಾಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಫೋನ್‌ನಲ್ಲಿ ನಂಬರ್ ಸೇವ್ ಮಾಡದೇ WhatsApp ಮೆಸೇಜ್ಗಳನ್ನು ಕಳುಹಿಸಬಹುದು. ಅಲ್ಲದೆ ಮೆಸೇಜ್ಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ಸುಲಭವಾಗಿ ಕಳುಹಿಸಬವುದು. 

ಇದರಲ್ಲಿ ಇದರ ವಿಶೇಷ ಲಕ್ಷಣವೆಂದರೆ ಇದನ್ನು ಇತರ ವಾಟ್ಸಾಪ್ ಚಾಟ್‌ಗಳಂತೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ರಕ್ಷಿಸಲಾಗುತ್ತದೆ.
ಸಂಖ್ಯೆಯನ್ನು ಉಳಿಸದೆ ನೀವು ಒಂದೇ ಬಳಕೆದಾರರೊಂದಿಗೆ ಒಂದೇ ಸಮಯದಲ್ಲಿ ಚಾಟ್ ಮಾಡಬಹುದು. ನೀವು ಸಂದೇಶಗಳನ್ನು ಕಳುಹಿಸುತ್ತಿರುವ ಆ ಕಾಂಟೆಕ್ಟ್ ನಂಬರ್ ವಾಟ್ಸಾಪ್ ಅನ್ನು ಬಳಸುತ್ತದೆಯೆ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬೇಕಾಗುತ್ತದೆ. 

ಹೀಗೆ ನೀವು ಪ್ರತಿ ಬಾರಿ ನೀವು WhatsApp ಬಳಸಲು ಬೇರೆಯವರೊಂದಿಗೆ ಸಂಪರ್ಕದಲ್ಲಿರಲು ಬಯಸದಿದ್ದರೆ ಇದು ನಿಮಗೆ ಹೆಚ್ಚು ಸಹಕಾರಿ.  ಹಲವು ಬರಿ ಸಣ್ಣ ಸಣ್ಣ ಪ್ರಶ್ನೆಯನ್ನು ಕೇಳುವುದು ಅಥವಾ ಸಂಭಾಷಣೆಯನ್ನು ಪ್ರಾರಂಭಿಸುವುದು ಎದರಿನ್ದ ಮಾಡಬವುದು. ನೀವು ನಿಜವಾಗಿಯೂ ಅವರನ್ನು ನಿಮ್ಮ ಸಂಪರ್ಕಗಳಿಗೆ ಸೇರಿಸಲು ಬಯಸುವಿರಾದರೆ ಸಾಮಾನ್ಯ ರೀತಿಯಲ್ಲಿ ಸೇವ್ ಮಾಡಬವುದು. ಈ ಸಲಹೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇದು ಸಹಾಯಕವಾಗಿದೆಯೇ? ಅಥವಾ ನೀವು ಇನ್ನೊಂದು ಬೇರೆ ಮೆಸೆಂಜರ್ ಅಪ್ಲಿಕೇಶನ್ ಬಳಸಲು ಬಯಸುತ್ತೀರಾ? ಕಾಮೆಂಟ್ಗಳಲ್ಲಿ ನಮಗೆ ತಿಳಿಸಿರಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo