Zili App Shut Down: ಚೀನಾದ ಕಂಪನಿ Xiaomi ತನ್ನ ಗ್ರಾಹಕ-ಆಧಾರಿತ ಅಪ್ಲಿಕೇಶನ್ Zili ಸೇವೆಯನ್ನು ಸ್ಥಗಿತಗೊಳಿಸಿದೆ. ಕಂಪನಿಯ ಜನಪ್ರಿಯ ಕಿರು ರೂಪದ ವೀಡಿಯೊ ಅಪ್ಲಿಕೇಶನ್ Zili ಟಿಕ್‌ಟಾಕ್‌ನ ಪ್ರತಿಸ್ಪರ್ಧಿ ಎಂದು ಗುರುತಿಸಲ್ಪಟ್ಟಿದೆ ಎಂದು ತಿಳಿದಿದೆ. Xiaomi ತನ್ನ ಜನಪ್ರಿಯ ಅಪ್ಲಿಕೇಶನ್ Zili ಅನ್ನು ಇನ್-ಆಪ್ ನೋಟಿಸ್ ಪೋಸ್ಟ್ ಮೂಲಕ ಬಂದ್ ಆಗುವುದಾಗಿ ಘೋಷಿಸಿದೆ. ಇದು ಮಾತ್ರವಲ್ಲದೆ ಜಿಲಿಯ ಅಧಿಕೃತ ವೆಬ್‌ಸೈಟ್ ಕೂಡ ಇನ್ನು ಮುಂದೆ ಲಭ್ಯವಿಲ್ಲ. ಇನ್-ಆಪ್ ನೋಟಿಸ್ ಪೋಸ್ಟ್ ಮೂಲಕ ಕಾರ್ಯಾಚರಣೆಯ ಹೊಂದಾಣಿಕೆಗಳಿಂದಾಗಿ ಜನಪ್ರಿಯ ಅಪ್ಲಿಕೇಶನ್ Zili ಅನ್ನು ಬಂದ್ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.
ಜಿಲಿ ಬಂದ್ ಆಗುವ ಮೊದಲು ಸಂಪೂರ್ಣ ಸಿದ್ಧತೆ ನಡೆದಿದೆ. ಕಂಪನಿಯು Zili ಬಳಕೆದಾರರಿಗೆ ತಮ್ಮ ವಿಷಯವನ್ನು (Contents) ಡೌನ್‌ಲೋಡ್ ಮಾಡಲು ಮತ್ತು ಉಳಿಸಲು ಅನುಮತಿಸುತ್ತಿದೆ. Zili ಬಳಕೆದಾರರಿಗೆ "Z-ಪಾಯಿಂಟ್‌ಗಳು" ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡುವ ಆಯ್ಕೆಯನ್ನು ಸಹ ನೀಡಲಾಗುತ್ತಿದೆ. ಜಿಲಿ ಸರ್ವರ್‌ನಿಂದ ಬಳಕೆದಾರರ ಡೇಟಾವನ್ನು ಅಳಿಸಲಾಗುತ್ತದೆ ಎಂದು ಕಂಪನಿಯು ಅಧಿಕೃತ ಮಾಹಿತಿಯನ್ನು ನೀಡಿದೆ. ಇಷ್ಟು ಮಾತ್ರವಲ್ಲದೆ. ಬಂದ್ ಆಗುವ ದಿನಾಂಕದ ನಂತರ ಈ ಬಳಕೆದಾರರ ಡೇಟಾವನ್ನು ಮರುಪಡೆಯಲಾಗುವುದಿಲ್ಲ.
ಚೀನಾದ Xiaomi ಕಂಪನಿಯು 2018 ರಲ್ಲಿ Zili ಅನ್ನು ಬಿಡುಗಡೆ ಮಾಡಿದೆ ಎಂದು ತಿಳಿದಿದೆ. ಕಂಪನಿಯ ಈ ಅಪ್ಲಿಕೇಶನ್ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ವಿಶೇಷವಾಗಿ 2020 ರಲ್ಲಿ ಟಿಕ್‌ಟಾಕ್ ನಿಷೇಧದ ನಂತರ ಜಿಲಿ ಬಳಕೆದಾರರ ಸಂಖ್ಯೆಯಲ್ಲಿ ತ್ವರಿತ ಹೆಚ್ಚಳ ಕಂಡುಬಂದಿದೆ. ವರದಿಗಳ ಪ್ರಕಾರ ಟಿಕ್‌ಟಾಕ್ ಅನ್ನು ನಿಷೇಧಿಸಿದ ನಂತರ ಮೂರು ವಾರಗಳಲ್ಲಿ Zili ಡೌನ್‌ಲೋಡ್‌ಗಳು 8 ಮಿಲಿಯನ್ ತಲುಪಿದೆ. ಆದರೆ ಈ ಮೊದಲು ಆ್ಯಪ್‌ನ ಬಳಕೆದಾರರ ಸಂಖ್ಯೆ 3 ಮಿಲಿಯನ್ ಡೌನ್‌ಲೋಡ್ ಆಗಿತ್ತು. ಇಷ್ಟೇ ಅಲ್ಲ Xiaomi ನ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್ ಪೂರ್ವ-ಸ್ಥಾಪಿತವಾಗಿ ಬರುತ್ತಿತ್ತು.
ನಿಮಗೊತ್ತಾ ಭಾರತದಲ್ಲಿ ಕೇವಲ ಶಾರ್ಟ್ ವಿಡಿಯೋ ಅಪ್ಲಿಕೇಶನ್ Zili ಮಾತ್ರವಲ್ಲದೆ ಇದರೊಂದಿಗೆ ಈ Xiaomi ಅಪ್ಲಿಕೇಶನ್‌ಗಳು ಸಹ ಭಾರತೀಯ ಮಾರುಕಟ್ಟೆಯಿಂದ ಕಣ್ಮರೆಯಾಯಿತು ವಾಸ್ತವವಾಗಿ ಚೈನೀಸ್ ಅಪ್ಲಿಕೇಶನ್ ಅನ್ನು ನಿಲ್ಲಿಸುವ ಸಲುವಾಗಿ ಭಾರತ ಸರ್ಕಾರವು Xiaomi ಯ Mi ಬ್ರೌಸರ್ ಮತ್ತು Mi ವೀಡಿಯೊ ಕರೆಯನ್ನು ನಿಷೇಧಿಸಿತ್ತು. ಆದಾಗ್ಯೂ ಶಾರ್ಟ್ ಫಾರ್ಮ್ ವೀಡಿಯೊ ಅಪ್ಲಿಕೇಶನ್ Zili ಅನ್ನು ಬಂದ್ ಆಗುವ ಮೊದಲು ಅಂತಹ ಯಾವುದೇ ಕಾರಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.