ಚೀನಾದ ಕಂಪನಿ Xiaomi ತನ್ನ ಗ್ರಾಹಕ-ಆಧಾರಿತ ಅಪ್ಲಿಕೇಶನ್ Zili ಸೇವೆಯನ್ನು ಸ್ಥಗಿತಗೊಳಿಸಿದೆ.
Xiaomi ತನ್ನ ಜನಪ್ರಿಯ ಅಪ್ಲಿಕೇಶನ್ Zili ಅನ್ನು ಇನ್-ಆಪ್ ನೋಟಿಸ್ ಪೋಸ್ಟ್ ಮೂಲಕ ಬಂದ್ ಆಗುವುದಾಗಿ ಘೋಷಿಸಿದೆ.
ಕಂಪನಿಯು Zili ಬಳಕೆದಾರರಿಗೆ ತಮ್ಮ ವಿಷಯವನ್ನು (Contents) ಡೌನ್‌ಲೋಡ್ ಮಾಡಲು ಮತ್ತು ಉಳಿಸಲು ಅನುಮತಿಸುತ್ತಿದೆ.
Zili App Shut Down: ಚೀನಾದ ಕಂಪನಿ Xiaomi ತನ್ನ ಗ್ರಾಹಕ-ಆಧಾರಿತ ಅಪ್ಲಿಕೇಶನ್ Zili ಸೇವೆಯನ್ನು ಸ್ಥಗಿತಗೊಳಿಸಿದೆ. ಕಂಪನಿಯ ಜನಪ್ರಿಯ ಕಿರು ರೂಪದ ವೀಡಿಯೊ ಅಪ್ಲಿಕೇಶನ್ Zili ಟಿಕ್‌ಟಾಕ್‌ನ ಪ್ರತಿಸ್ಪರ್ಧಿ ಎಂದು ಗುರುತಿಸಲ್ಪಟ್ಟಿದೆ ಎಂದು ತಿಳಿದಿದೆ. Xiaomi ತನ್ನ ಜನಪ್ರಿಯ ಅಪ್ಲಿಕೇಶನ್ Zili ಅನ್ನು ಇನ್-ಆಪ್ ನೋಟಿಸ್ ಪೋಸ್ಟ್ ಮೂಲಕ ಬಂದ್ ಆಗುವುದಾಗಿ ಘೋಷಿಸಿದೆ. ಇದು ಮಾತ್ರವಲ್ಲದೆ ಜಿಲಿಯ ಅಧಿಕೃತ ವೆಬ್‌ಸೈಟ್ ಕೂಡ ಇನ್ನು ಮುಂದೆ ಲಭ್ಯವಿಲ್ಲ. ಇನ್-ಆಪ್ ನೋಟಿಸ್ ಪೋಸ್ಟ್ ಮೂಲಕ ಕಾರ್ಯಾಚರಣೆಯ ಹೊಂದಾಣಿಕೆಗಳಿಂದಾಗಿ ಜನಪ್ರಿಯ ಅಪ್ಲಿಕೇಶನ್ Zili ಅನ್ನು ಬಂದ್ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.
Zili ಬಂದ್ ಆಗುವ ಮೊದಲು ಈ ಸೌಲಭ್ಯ
ಜಿಲಿ ಬಂದ್ ಆಗುವ ಮೊದಲು ಸಂಪೂರ್ಣ ಸಿದ್ಧತೆ ನಡೆದಿದೆ. ಕಂಪನಿಯು Zili ಬಳಕೆದಾರರಿಗೆ ತಮ್ಮ ವಿಷಯವನ್ನು (Contents) ಡೌನ್‌ಲೋಡ್ ಮಾಡಲು ಮತ್ತು ಉಳಿಸಲು ಅನುಮತಿಸುತ್ತಿದೆ. Zili ಬಳಕೆದಾರರಿಗೆ "Z-ಪಾಯಿಂಟ್‌ಗಳು" ರಿವಾರ್ಡ್ ಪಾಯಿಂಟ್‌ಗಳನ್ನು ರಿಡೀಮ್ ಮಾಡುವ ಆಯ್ಕೆಯನ್ನು ಸಹ ನೀಡಲಾಗುತ್ತಿದೆ. ಜಿಲಿ ಸರ್ವರ್‌ನಿಂದ ಬಳಕೆದಾರರ ಡೇಟಾವನ್ನು ಅಳಿಸಲಾಗುತ್ತದೆ ಎಂದು ಕಂಪನಿಯು ಅಧಿಕೃತ ಮಾಹಿತಿಯನ್ನು ನೀಡಿದೆ. ಇಷ್ಟು ಮಾತ್ರವಲ್ಲದೆ. ಬಂದ್ ಆಗುವ ದಿನಾಂಕದ ನಂತರ ಈ ಬಳಕೆದಾರರ ಡೇಟಾವನ್ನು ಮರುಪಡೆಯಲಾಗುವುದಿಲ್ಲ.
ಜಿಲಿಯನ್ನು 2018 ರಲ್ಲಿ ಪರಿಚಯ-
ಚೀನಾದ Xiaomi ಕಂಪನಿಯು 2018 ರಲ್ಲಿ Zili ಅನ್ನು ಬಿಡುಗಡೆ ಮಾಡಿದೆ ಎಂದು ತಿಳಿದಿದೆ. ಕಂಪನಿಯ ಈ ಅಪ್ಲಿಕೇಶನ್ ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ವಿಶೇಷವಾಗಿ 2020 ರಲ್ಲಿ ಟಿಕ್‌ಟಾಕ್ ನಿಷೇಧದ ನಂತರ ಜಿಲಿ ಬಳಕೆದಾರರ ಸಂಖ್ಯೆಯಲ್ಲಿ ತ್ವರಿತ ಹೆಚ್ಚಳ ಕಂಡುಬಂದಿದೆ. ವರದಿಗಳ ಪ್ರಕಾರ ಟಿಕ್‌ಟಾಕ್ ಅನ್ನು ನಿಷೇಧಿಸಿದ ನಂತರ ಮೂರು ವಾರಗಳಲ್ಲಿ Zili ಡೌನ್‌ಲೋಡ್‌ಗಳು 8 ಮಿಲಿಯನ್ ತಲುಪಿದೆ. ಆದರೆ ಈ ಮೊದಲು ಆ್ಯಪ್‌ನ ಬಳಕೆದಾರರ ಸಂಖ್ಯೆ 3 ಮಿಲಿಯನ್ ಡೌನ್‌ಲೋಡ್ ಆಗಿತ್ತು. ಇಷ್ಟೇ ಅಲ್ಲ Xiaomi ನ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್ ಪೂರ್ವ-ಸ್ಥಾಪಿತವಾಗಿ ಬರುತ್ತಿತ್ತು.
Xiaomi ಅಪ್ಲಿಕೇಶನ್‌ಗಳು ಸಹ ಕಣ್ಮರೆ-
ನಿಮಗೊತ್ತಾ ಭಾರತದಲ್ಲಿ ಕೇವಲ ಶಾರ್ಟ್ ವಿಡಿಯೋ ಅಪ್ಲಿಕೇಶನ್ Zili ಮಾತ್ರವಲ್ಲದೆ ಇದರೊಂದಿಗೆ ಈ Xiaomi ಅಪ್ಲಿಕೇಶನ್‌ಗಳು ಸಹ ಭಾರತೀಯ ಮಾರುಕಟ್ಟೆಯಿಂದ ಕಣ್ಮರೆಯಾಯಿತು ವಾಸ್ತವವಾಗಿ ಚೈನೀಸ್ ಅಪ್ಲಿಕೇಶನ್ ಅನ್ನು ನಿಲ್ಲಿಸುವ ಸಲುವಾಗಿ ಭಾರತ ಸರ್ಕಾರವು Xiaomi ಯ Mi ಬ್ರೌಸರ್ ಮತ್ತು Mi ವೀಡಿಯೊ ಕರೆಯನ್ನು ನಿಷೇಧಿಸಿತ್ತು. ಆದಾಗ್ಯೂ ಶಾರ್ಟ್ ಫಾರ್ಮ್ ವೀಡಿಯೊ ಅಪ್ಲಿಕೇಶನ್ Zili ಅನ್ನು ಬಂದ್ ಆಗುವ ಮೊದಲು ಅಂತಹ ಯಾವುದೇ ಕಾರಣವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile