digit zero1 awards

ಭಾರತೀಯರು ಅತಿ ಹೆಚ್ಚಾಗಿ ಅನಗತ್ಯ WhatsApp ಕರೆ ಮತ್ತು ಮೆಸೇಜ್ ಪಡೆಯುತ್ತಾರೆ! ಇದಕ್ಕೆ ಕಾರಣವೇನು?

ಭಾರತೀಯರು ಅತಿ ಹೆಚ್ಚಾಗಿ ಅನಗತ್ಯ WhatsApp ಕರೆ ಮತ್ತು ಮೆಸೇಜ್ ಪಡೆಯುತ್ತಾರೆ! ಇದಕ್ಕೆ ಕಾರಣವೇನು?
HIGHLIGHTS

ಲೋಕಲ್ ಸರ್ಕಲ್ಸ್ ನಡೆಸಿದ ಆನ್‌ಲೈನ್ ಸಮೀಕ್ಷೆಯ ಪ್ರಕಾರ ಸರಿಸುಮಾರು 76% ಪ್ರತಿಶತದಷ್ಟು ಭಾರತೀಯರು ಕರೆ ಪಡೆಯುತ್ತಾರೆ.

ಇದಕ್ಕೆ ಕಾರಣ Facebook ಅಥವಾ Instagram ನಲ್ಲಿ ನಿಮ್ಮ ಖಾತೆಯನ್ನು ತೊಡಗಿಸಿಕೊಳ್ಳುವ ಪರಿಣಾಮವಾಗಿದೆ ಎಂದು ಹೇಳಲಾಗಿದೆ.

ಹೆಚ್ಚಿನ WhatsApp ಬಳಕೆದಾರರು ಬ್ಲಾಕ್ ಮಾಡುವ ಅಥವಾ ಆರ್ಕೈವ್ ಮಾಡುವಂತಹ ಟೂಲ್ಗಳನ್ನು ಬಳಸುತ್ತಿದ್ದಾರೆ

Whatsapp Business: ಸಾವಿರಾರು ಭಾರತೀಯರು ತಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಚಾಟ್ ನಡೆಸಲು WhatsApp ಅನ್ನು ಬಳಸುತ್ತಾರೆ. ಇದರ ಜೊತೆಗೆ WhatsApp ಅತಿ ಹೆಚ್ಚಾಗಿ ಅನೇಕ ಫೀಚರ್‌ಗಳನ್ನು ಹೊಂದಿದ್ದು ನಿಮಗೆ ಸಹಾಯಕವು ಆಗಿದೆ. ಆದರೆ ಕೆಲವೊಮ್ಮೆ ಈ ಆಪ್ ನಿಂದ ನಮಗೆ ಹೆಚ್ಚು ತೊಂದರೆಯು ಆಗಬಹುದು. ಇತ್ತೀಚಿನ ಸಮೀಕ್ಷೆಯಲ್ಲಿ ಇದೇ ಸಂಗತಿಯನ್ನು ಬಹಿರಂಗಪಡಿಸಲಾಗಿದೆ. ಲೋಕಲ್ ಸರ್ಕಲ್ಸ್ ನಡೆಸಿದ ಆನ್‌ಲೈನ್ ಸಮೀಕ್ಷೆಯ ಪ್ರಕಾರ ಸರಿಸುಮಾರು 76% ಪ್ರತಿಶತದಷ್ಟು ಭಾರತೀಯರು ಅತಿ ಹೆಚ್ಚಾಗಿ ಅನಗತ್ಯ WhatsApp ಬಿಸಿನೆಸ್ ಕರೆ ಮತ್ತು ಮೆಸೇಜ್ ಪಡೆಯುತ್ತಾರೆ! ಇದಕ್ಕೆ ಕಾರಣ Facebook ಅಥವಾ Instagram ನಲ್ಲಿ ನಿಮ್ಮ ಖಾತೆಯನ್ನು ತೊಡಗಿಸಿಕೊಳ್ಳುವ ಪರಿಣಾಮವಾಗಿದೆ ಎಂದು ಹೇಳಲಾಗಿದೆ.

ಫೆಬ್ರವರಿ 1 ರಿಂದ 20 ರವರೆಗಿನ ಸಮೀಕ್ಷೆ

ಭಾರತದಲ್ಲಿ ಫೆಬ್ರವರಿ 1 ರಿಂದ ಫೆಬ್ರವರಿ 20 ರ ನಡುವೆ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ 95% WhatsApp ಬಳಕೆದಾರರು ದಿನಕ್ಕೆ ಒಂದು ಅಥವಾ ಹೆಚ್ಚು ಕಿರುಕುಳದ ಮೆಸೇಜ್ಗಳನ್ನು ಪಡೆಯುತ್ತಿದ್ದಾರೆ. 41 ಪ್ರತಿಶತದಷ್ಟು ಜನರು ಅವುಗಳನ್ನು ಪ್ರತಿದಿನ ಸ್ವೀಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಂತಹ ನಾಲ್ಕು ಅಥವಾ ಹೆಚ್ಚಿನ ಮೆಸೇಜ್ಗಳನ್ನು ಸ್ವೀಕರಿಸಲಾಗಿದೆ.

ಅನಗತ್ಯ WhatsApp ಕರೆ ಮತ್ತು ಮೆಸೇಜ್ಗಳಿಗೆ ಕಾರಣಗಳೇನು?

ಲೋಕಲ್ ಸರ್ಕಲ್ಸ್ ಪ್ರಕಾರ ಪ್ರೈವಸಿ ಪಾಲಿಸಿಯ ಆಧಾರದ ಮೇಲೆ ಬಳಕೆದಾರರು ಈ ಅನುಭವವನ್ನು ಹೊಂದಿದ್ದಾರೆಯೇ ಎಂದು ನಿರ್ಧರಿಸಲು ಮತ್ತು ಅಂತಹ ಪ್ರಕರಣಗಳ ಪ್ರಮಾಣವನ್ನು ಅಂದಾಜು ಮಾಡಲು WhatsApp ನಲ್ಲಿ ಅನಗತ್ಯ ವಾಣಿಜ್ಯ ಮೆಸೇಜ್ಗಳ ಹೆಚ್ಚಳವನ್ನು ನೋಡಿದ್ದೀರಾ ಎಂದು ಪ್ರತಿಕ್ರಿಯಿಸಿದವರನ್ನು ಕೇಳಲಾಗಿದೆ. ಇದು ಅವರ WhatsApp ಬಿಸಿನೆಸ್ ಚಾಟ್ ಮತ್ತು ಅವರ Facebook ಅಥವಾ Instagram ಚಟುವಟಿಕೆಯನ್ನು ಆಧರಿಸಿರುತ್ತದೆ.

ಲೋಕಲ್ ಸರ್ಕಲ್ಸ್ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿರುವ ಹೆಚ್ಚಿನ WhatsApp ಬಳಕೆದಾರರು ಬ್ಲಾಕ್ ಮಾಡುವ ಅಥವಾ ಆರ್ಕೈವ್ ಮಾಡುವಂತಹ ಟೂಲ್ಗಳನ್ನು ಬಳಸುತ್ತಿದ್ದಾರೆ ಎಂದು ತೋರಿಸುತ್ತದೆ. ಆದರೆ ಕಳುಹಿಸುವವರು ತಮ್ಮ ಸಂಖ್ಯೆಯನ್ನು ಬಳಸುತ್ತಿದ್ದಾರೆ ಎಂದು ಸಾಬೀತುಪಡಿಸುವ ಸ್ಪ್ಯಾಮ್ ಮೆಸೇಜ್ಗಳು ಇನ್ನೂ ಬರುತ್ತಿರುತ್ತವೆ ಮತ್ತು ಬದಲಾಗುತ್ತಿರುತ್ತವೆ.

WhatsApp ನೀಡುವ ಪರಿಹಾರವೇನು?

ಇದಕ್ಕೆ ಮೆಟಾ ಪ್ರವಾಕ್ತರೊಬ್ಬರು ತ್ವರಿತವಾಗಿ ಮೆಸೇಜ್ಗಳನ್ನ WhatsApp ನಲ್ಲಿ ಕಳುಹಿಸುವುದರಿಂದ ವ್ಯವಹಾರಗಳನ್ನು ನಿಷೇಧಗೊಳಿಸುವ ಕ್ರಮವನ್ನು WhatsApp ಜಾರಿಗೆ ತಂದಿದೆ. ಬಳಕೆದಾರರು ಕಡಿಮೆ ಗುಣಮಟ್ಟದ ಅನುಭವವಾಗುತ್ತದೆ ಎಂದು ದೂರಿದಾಗ ಇದು ಸಂಭವಿಸುತ್ತದೆ. ಈ ಸಂದರ್ಭದಲ್ಲಿ ನೀವು ಬಿಸಿನೆಸ್ ಖಾತೆಯಲ್ಲಿ ಕಾಮೆಂಟ್ ಮಾಡಬಹುದು. ಅಷ್ಟೇ ಅಲ್ಲದೆ ಬಿಸಿನೆಸ್ ಹೆಚ್ಚು ನಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆದರೆ ನಾವು WhatsApp ಗೆ ಬಿಸಿನೆಸ್ ಪ್ರವೇಶವನ್ನು ಮಿತಿಗೊಳಿಸಬಹುದು ಅಥವಾ ಕೊನೆಗೊಳಿಸಬಹುದು. 

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo