ವಾಟ್ಸಾಪ್‌ನಲ್ಲಿ ಟೈಪ್ ಮಾಡಿ ಕೈ ನೋವಾಗುತ್ತಾ? ಆಡಿಯೋ ಚಾಟ್ ಫೀಚರ್ ಬಗ್ಗೆ ನಿಮಗೆಷ್ಟು ಗೊತ್ತು?

ವಾಟ್ಸಾಪ್‌ನಲ್ಲಿ ಟೈಪ್ ಮಾಡಿ ಕೈ ನೋವಾಗುತ್ತಾ? ಆಡಿಯೋ ಚಾಟ್ ಫೀಚರ್ ಬಗ್ಗೆ ನಿಮಗೆಷ್ಟು ಗೊತ್ತು?
HIGHLIGHTS

ವಾಟ್ಸಾಪ್ ಆಂಡ್ರಾಯ್ಡ್ ಗಾಗಿ ಈ ಹೊಸ ಆಡಿಯೋ ಚಾಟ್ (Audio Chat) ಫೀಚರ್‌ ಅಭಿವೃದ್ಧಿಪಡಿಸುತ್ತಿದೆ.

ಆಡಿಯೋ ಚಾಟ್ (Audio Chat) ಎಂದು ಕರೆಯಲ್ಪಡುವ ಈ ಫೀಚರ್ ಅಪ್ಲಿಕೇಶನ್‌ನ ಮುಂದಿನ ಅಪ್‌ಡೇಟ್‌ ಮೂಲಕ ಲಭ್ಯವಿರುತ್ತದೆ.

WaBetaInfo ಚಾಟ್ ಹೆಡರ್‌ಗೆ ಸೇರಿಸಲಾಗುವ ಹೊಸ ವೇವ್‌ಫಾರ್ಮ್ ಐಕಾನ್‌ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದೆ.

WhatsApp Audio Chat: ಮೆಟಾ ಮಾಲೀಕತ್ವದ ಸೋಶಿಯಲ್  ಮೆಸೇಜಿಂಗ್  ಆ್ಯಪ್‌ ಆದ WhatsApp Android ಗಾಗಿ ಹೊಸ ಫೀಚರ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ. ಆಡಿಯೋ ಚಾಟ್ ಎಂದು ಕರೆಯಲ್ಪಡುವ ಈ ಫೀಚರ್ ಅಪ್ಲಿಕೇಶನ್‌ನ ಮುಂದಿನ ಅಪ್‌ಡೇಟ್‌ ಮೂಲಕ ಲಭ್ಯವಿರುತ್ತದೆ. WaBetaInfo ವರದಿಯ ಪ್ರಕಾರ WhatsApp ಆಡಿಯೋ ಚಾಟ್ ಫೀಚರ್‌ ಇತ್ತೀಚಿನ WhatsApp ಬೀಟಾ Android 2.23.7.12 ಅಪ್‌ಡೇಟ್‌ನ ಮೂಲಕ Google Play Store ನಲ್ಲಿ ಲಭ್ಯವಿದೆ ಎಂದು ಹೇಳಿದೆ. WaBetaInfo ಚಾಟ್ ಹೆಡರ್‌ಗೆ ಸೇರಿಸಲಾಗುವ ಹೊಸ ವೇವ್‌ಫಾರ್ಮ್ ಐಕಾನ್‌ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದೆ. 

ವಾಟ್ಸಾಪ್‌ ವೇವ್‌ಫಾರ್ಮ್ ಐಕಾನ್ ರಿಯಲ್-ಟೈಮ್ ಆಡಿಯೊ

WhatsApp ಬಳಕೆದಾರರು ಹೊಸ ಐಕಾನ್ ಅನ್ನು ಬಳಸಿಕೊಂಡು ಆಡಿಯೋ ಚಾಟ್‌ಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ವೇವ್‌ಫಾರ್ಮ್ ಐಕಾನ್ ರಿಯಲ್-ಟೈಮ್ ಆಡಿಯೊವನ್ನು ವಿಶುವಲೈಸೆಷನ್ ಮಾಡುವ ಸಾಮರ್ಥ್ಯವನ್ನು ಸೂಚಿಸುತ್ತದೆ. ಚಾಟ್ ಹೆಡರ್‌ನ ಮೇಲಿನ ಜಾಗವನ್ನು ಆಡಿಯೊ ವೇವ್‌ಫಾರ್ಮ್ ಗಳ ಮೂಲಕ  ಡಿಸ್ಪ್ಲೇಗಾಗಿ ಮೀಸಲಿಡಲಾಗುವುದು ಎಂದು ಊಹಿಸಬಹುದಾಗಿದೆ. ಇದು ಕನಿಷ್ಠ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಅಲ್ಲದೆ ಬಳಕೆದಾರರು ತಮ್ಮ ಚಾಟ್‌ಗಳ ನಡುವೆ ನ್ಯಾವಿಗೇಟ್ ಮಾಡುವಾಗ ಆಡಿಯೊ ವೇವ್‌ಫಾರ್ಮ್ ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

 

ವಾಟ್ಸಾಪ್‌ ಆಡಿಯೋ ಚಾಟ್ ಫೀಚರ್‌ 

ಆಡಿಯೋ ಚಾಟ್ ಫೀಚರ್‌ನೊಂದಿಗೆ WhatsApp ಬಳಕೆದಾರರು ವಿಶುವಲೈಸೆಷನ್ ನೊಂದಿಗೆ ರಿಯಲ್-ಟೈಮ್ ಧ್ವನಿ ಚಾಟ್ ಅನ್ನು ಕೇಳಲು ಸಾಧ್ಯವಾಗುತ್ತದೆ. ಆದರೆ ಈ ಫೀಚರ್‌ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಮಾಹಿತಿ ಹಂಚಿಕೊಳ್ಳಲು ಸಾಧ್ಯವಾಗಲಿಲ್ಲ. 
ಈ ಫೀಚರ್‌ ಅಭಿವೃದ್ಧಿ ಹಂತದಲ್ಲಿದ್ದು WhatsApp ನ ಮುಂದಿನ ಅಪ್ಡೇಟ್ ನೊಂದಿಗೆ ಇದು ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. WhatsApp ಬಳಕೆದಾರರಿಗೆ ಅಧಿಕೃತ ಚಾಟ್ ಅನ್ನು ಪ್ರಾರಂಭಿಸಿದೆ. ಅಧಿಕೃತ WhatsApp ಚಾಟ್ ಮೂಲಕ ಬಳಕೆದಾರರು ಅದರ ಅಪ್‌ಡೇಟ್‌ಗಳು ಮತ್ತು ಇದನ್ನು ಹೇಗೆ ಬಳಸುವುದು ಎಂಬುದರ ಕುರಿತು ಸಲಹೆಗಳು ಸೇರಿದಂತೆ ಇತ್ತೀಚಿನ ಮಾಹಿತಿಯನ್ನು ಪಡೆಯುತ್ತಾರೆ. 

ವರದಿಯ ಪ್ರಕಾರ iOS ಮತ್ತು Android ನಲ್ಲಿ ಕೆಲವು ರ‍್ಯಾಂಡಮ್ ಬಳಕೆದಾರರು ಚಾಟ್‌ನಲ್ಲಿ ತಮ್ಮ ಮೊದಲ ಮೆಸೇಜ್ ಅನ್ನು ಸ್ವೀಕರಿಸಿದ ನಂತರ ಮೆಸೇಜ್ಗಳು ಕಣ್ಮರೆಯಾಗುತ್ತಿರುವ ಬಗ್ಗೆ ಅವರಿಗೆ ತಿಳಿಸುತ್ತದೆ. WhatsApp ಅಧಿಕೃತ ಚಾಟ್ ಕೆಲವು ಸಮಯದಿಂದ ಅಭಿವೃದ್ಧಿಯಲ್ಲಿದೆ. ಅಧಿಕೃತ WhatsApp ಚಾಟ್ ಅನ್ನು ಗ್ರೀನ್ ವೆರಿಫೈಡ್ ಬ್ಯಾಡ್ಜ್‌ನಿಂದ ಗುರುತಿಸಲಾಗಿದೆ ಎಂದು ವರದಿ ಹೇಳುತ್ತದೆ. ಇದು ಹೊಸ ಫೀಚರ್‌ಗಳು ಮತ್ತು ಅಪ್ಡೇಟ್ಗಳ ಮಾಹಿತಿಯೊಂದಿಗೆ ಅಪ್ಲಿಕೇಶನ್ ಅನ್ನು ಹೇಗೆ ಬಳಸುವುದು ಎಂಬುದರ ಕುರಿತು ಟಿಪ್ಸ್ ಮತ್ತು ಟ್ರಿಕ್ಸ್ ಅನ್ನು ಒಳಗೊಂಡಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo