ಮೆಟಾ-ಮಾಲೀಕತ್ವದ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ WhatsApp ಹೊಸ ಫೀಚರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಬಳಕೆದಾರರು ತಮ್ಮ ರೆಸಲ್ಯೂಶನ್ ಅನ್ನು ಉಳಿಸಿಕೊಂಡು ಒರಿಜಿನಲ್ ಕ್ವಾಲಿಟಿ ಫೋಟೋಗಳನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ಅಂತಿಮವಾಗಿ ಫೋಟೋಗಳನ್ನು ಅವುಗಳ ಒರಿಜಿನಲ್ ಕ್ವಾಲಿಟಿಯಲ್ಲಿ ಕಳುಹಿಸುವುದಕ್ಕೆ ಈ ಹೊಸ ಫೀಚರ್‌ನ ಸಹಾಯದಿಂದ ಸಾಧ್ಯವಾಗುತ್ತದೆ. WABetaInfo ಪ್ರಕಾರ ಈ ಹೊಸ ಫೀಚರ್ ಖಂಡಿತವಾಗಿಯೂ ಪ್ರಮುಖ ಅಪ್‌ಡೇಟ್ ಎಂದು ಪರಿಗಣಿಸಲಾಗುವುದು. ಇದು WhatsApp ಡೆಸ್ಕ್‌ಟಾಪ್ ಬೀಟಾದ ಭವಿಷ್ಯದ ವರ್ಷನ್ಗಾಗಿ ಫೋಟೋಗಳನ್ನು ಕಳುಹಿಸುವಾಗ ಬಳಕೆದಾರರ ಅನುಭವವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.
ಮೆಟಾ-ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗೂ ಸಹ ಅದೇ ಫೀಚರ್ ಅನ್ನು ಪಡೆಯುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಳಕೆದಾರರು ತಮ್ಮ ಒರಿಜಿನಲ್ ಕ್ವಾಲಿಟಿ ಫೋಟೋಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಅವರ ರೆಸಲ್ಯೂಶನ್ ಮತ್ತು ಕ್ಲಾರಿಟಿಯನ್ನು ಕಾಪಾಡಿಕೊಳ್ಳಬಹುದು. ಫೋಟೋಗಳನ್ನು ಕಳುಹಿಸುವಾಗ ಆಗುವ ಇಮೇಜ್ ಕಂಪ್ರೆಷನ್‌ಗೆ ಹೋಲಿಸಿದರೆ ಇದು ಗಮನಾರ್ಹ ಸುಧಾರಣೆಯಾಗಿದೆ. ಜನರು ತಮ್ಮ ಫೋಟೋಗಳನ್ನು ಕಳುಹಿಸುವಾಗ ರೆಸಲ್ಯೂಶನ್ ಅಥವಾ ಕ್ವಾಲಿಟಿ ಅನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿಸಬೇಕಾಗಿಲ್ಲ. ಈ ಫೀಚರ್‌ನ ಪರಿಚಯದೊಂದಿಗೆ ಫೋಟೋಗಳನ್ನು ಕಳುಹಿಸುವುದರ ಮೇಲೆ ನೀವು ಇನ್ನೂ ನಿಯಂತ್ರಣವನ್ನು ಹೊಂದಿರುತ್ತೀರಿ.
ಈ ಫೀಚರ್ ಬೀಟಾ ಪರೀಕ್ಷಕರಿಗೆ ಲಭ್ಯವಾದಾಗ ಅವರು ಸ್ಟ್ಯಾಂಡರ್ಡ್ ಕಂಪ್ರೆಷನ್ ವಿಧಾನದ ಮೂಲಕ ಫೋಟೋಗಳನ್ನು ಕಳುಹಿಸುವುದನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಮತ್ತು ಸ್ಟೋರೇಜ್ ಸ್ಪೇಸ್ ಅನ್ನು ಸಂರಕ್ಷಿಸಲು ಬಯಸುವವರಿಗೆ ಸೂಕ್ತವಾಗಿದ್ದು ಇದು ಯಾವಾಗಲೂ ಡೀಫಾಲ್ಟ್ ಆಯ್ಕೆಯಾಗಿದೆ. ಫೋಟೋಗಳನ್ನು ಅವುಗಳ ಒರಿಜಿನಲ್ ಕ್ವಾಲಿಟಿಯಲ್ಲಿ ಕಳುಹಿಸುವ ಫೀಚರ್ ಪ್ರಸ್ತುತ ಅಭಿವೃದ್ಧಿಯಲ್ಲಿದೆ. ಇದನ್ನು WhatsApp ಅಪ್ಲಿಕೇಶನ್‌ನ ಫ್ಯೂಚರ್ ಅಪ್ಡೇಟ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆಂಡ್ರಾಯ್ಡ್ ಅಪ್‌ಡೇಟ್‌ಗಾಗಿ ಹಿಂದಿನ WhatsApp ಬೀಟಾ ಪ್ಲಾಟ್‌ಫಾರ್ಮ್ ನಲ್ಲಿ HD ಫೋಟೋಗಳು ಎಂಬ ಹೊಸ ಫೀಚರ್ ಅನ್ನು ಪರಿಚಯಿಸಲಾಯಿತು.
WhatsApp ನ ಸೆಟ್ಟಿಂಗ್‌ಗಳಲ್ಲಿ ಕಂಡುಬರುವ ಈ ಆಯ್ಕೆಯನ್ನು ಬಳಸಿಕೊಂಡು ಬಳಕೆದಾರರು ಕಳುಹಿಸುವ ಫೋಟೋಗಳ ಕ್ವಾಲಿಟಿಗಾಗಿ ಆಟೋಮ್ಯಾಟಿಕ್ , ಬೆಸ್ಟ್ ಕ್ವಾಲಿಟಿ ಮತ್ತು ಡೇಟಾ ಸೇವರ್ ನಡುವೆ ಕಳುಹಿಸುವ ಫೋಟೋಗಳಿಗೆ ಕ್ವಾಲಿಟಿ ಕಾನ್ಫಿಗರೇಶನ್ ಅನ್ನು ಆಯ್ಕೆ ಮಾಡಬಹುದು. ಆದರೆ ಅವುಗಳು ಸರಳವಾಗಿ ಕಡಿಮೆ ಕಂಪ್ರೆಸ್ಸ್ಡ್ ಆಗಿರುವುದರಿಂದ ಬೆಸ್ಟ್ ಕ್ವಾಲಿಟಿ ಕಾನ್ಫಿಗರೇಶನ್ ಬಳಕೆದಾರರಿಗೆ ತಮ್ಮ ಒರಿಜಿನಲ್ ಕ್ವಾಲಿಟಿ ಫೋಟೋಗಳನ್ನು ಕಳುಹಿಸಲು ಅನುಮತಿಸಲಿಲ್ಲ. Whatsapp ತನ್ನ ಇತ್ತೀಚಿನ ಅಪ್ಡೇಟ್ ಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಇತ್ತೀಚೆಗೆ WhatsApp ios ಬೀಟಾ ಬಳಕೆದಾರರಿಗೆ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ 100 ಮೀಡಿಯಾ ಫೈಲ್‌ಗಳನ್ನು ಕಳುಹಿಸಲು ಅನುಮತಿಸುವ ಫೀಚರ್ ಅನ್ನು ಪರಿಚಯಿಸುವುದಾಗಿ ಹೇಳಿದೆ.