ಅ. 24 ರಿಂದ WhatsApp ಈ ಫೋನ್‌ಗಳಲ್ಲಿ ಕೆಲಸ ಮಾಡೋಲ್ಲ! ಈ ಪಟ್ಟಿಯಲ್ಲಿ ನಿಮ್ಮ ಫೋನ್ ಇದ್ಯಾ?

Updated on 13-Oct-2023

ಜಗತ್ತಿನ ಜನಪ್ರಿಯ ಮತ್ತು ಅತಿ ಹೆಚ್ಚು ಬಳಕೆಯಲ್ಲಿರುವ ಮೆಸೇಜಿಂಗ್ ಅಪ್ಲಿಕೇಶನ್ WhatsApp ಆಂಡ್ರಾಯ್ಡ್ ಬಳಕೆದಾರರಿಗೊಂದು ಹೊಸ ಸುದ್ದಿಯನ್ನು ನೀಡಿದೆ. ಅದೇನಪ್ಪ ಅಂದ್ರೆ ಈ ತಿಂಗಳಿನಿಂದ ಕೆಲವು ಆಯ್ದ ಆಂಡ್ರಾಯ್ಡ್ ಫೋನ್‌ಗಳಲ್ಲಿ ಮುಖ್ಯವಾಗಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ 5.0 ಅಥವಾ ಅದಕ್ಕಿಂತ ಕಡಿಮೆಯ ಫೋನ್‌ಗಳಲ್ಲಿ WhatsApp ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವುದಾಗಿ ತಿಳಿಸಿದೆ.

ಇದರ ಬಗ್ಗೆ ನಿಮಗೆ ಯಾವುದೇ ಮಾಹಿತಿಗಳ ಅಗತ್ಯವಿದ್ದರೆ ಇವರ FAQ ಪುಟದಲ್ಲಿನ ಟಿಪ್ಪಣಿಯಲ್ಲಿಉತ್ತರವನ್ನು ಪಡೆಯಬಹುದು. ಈ ಆಕ್ಷನ್ ಕಂಪನಿ 24ನೇ ಅಕ್ಟೋಬರ್ 2023 ರಿಂದ ಪರಿಣಮಿಸಲಿದೆ. ಪ್ರತಿ ವರ್ಷ ನಾವು ಇತರ ತಂತ್ರಜ್ಞಾನ ಕಂಪನಿಗಳಂತೆ, ಯಾವ ಸಾಧನಗಳು ಮತ್ತು ಸಾಫ್ಟ್‌ವೇರ್ ಅತ್ಯಂತ ಹಳೆಯದು ಮತ್ತು ಇನ್ನೂ ಕಡಿಮೆ ಸಂಖ್ಯೆಯ ಜನರನ್ನು ಬಳಸುತ್ತಿರುವುದನ್ನು ನೋಡುತ್ತೇವೆ. ಈ ಸಾಧನಗಳು ಇತ್ತೀಚಿನ ಸೆಕ್ಯೂರಿಟಿ ಅಪ್‌ಡೇಟ್‌ಗಳನ್ನು ಹೊಂದಿಲ್ಲದಿರಬಹುದು ಅಥವಾ WhatsApp ಅನ್ನು ಚಲಾಯಿಸಲು ಅಗತ್ಯವಿರುವ ಕಾರ್ಯವನ್ನು ಹೊಂದಿರದಿರಬಹುದು.

WhatsApp ಈ ಫೋನ್‌ಗಳಲ್ಲಿ ಕೆಲಸ ಮಾಡೋಲ್ಲ!

Samsung Galaxy S2
Nexus 7
iPhone 5
iPhone 5c
Archos 53 Platinum
Grand S Flex ZTE
Grand X Quad V987 ZTE
HTC Desire 500
Huawei Ascend D
Huawei Ascend D1
HTC One
Sony Xperia Z
LG Optimus G Pro
Samsung Galaxy Nexus
HTC Sensation
Motorola Droid Razr
Sony Xperia S2
Motorola Xoom
Samsung Galaxy Tab 10.1
Asus Eee Pad Transformer
Acer Iconia Tab A5003
Samsung Galaxy S
HTC Desire HD
LG Optimus 2X
Sony Ericsson Xperia Arc3

ಈ ಬೆಂಬಲವನ್ನು ಕೊನೆಗೊಳಿಸುವ ಮೊದಲು WhatsApp ಬಳಕೆದಾರರಿಗೆ ಸೂಚನೆ ನೀಡುತ್ತಿದೆ ಮತ್ತು WhatsApp ಬಳಸುವುದನ್ನು ಮುಂದುವರಿಸಲು ಅವರ ಸಾಧನವನ್ನು ಅಪ್‌ಗ್ರೇಡ್ ಮಾಡಲು ಅವರಿಗೆ ನೆನಪಿಸುತ್ತದೆ. ಆದರೆ 24ನೇ ಅಕ್ಟೋಬರ್ 2023 ನಂತರ WhatsApp ಡೆವಲಪರ್‌ಗಳು ತಾಂತ್ರಿಕ ಬೆಂಬಲ ಮತ್ತು ಅಪ್ಡೇಟ್ಗಳನ್ನು ನೀಡುವುದನ್ನು ನಿಲ್ಲಿಸುತ್ತಾರೆ. ಇದರರ್ಥ ಫೋನ್ OS ಇನ್ನು ಮುಂದೆ ಸ್ವಯಂಚಾಲಿತ ಅಪ್ಡೇಟ್, ಪ್ಯಾಚ್‌ಗಳು, ಸೆಕ್ಯೂರಿಟಿ ಮತ್ತು ಹೊಸ ಫೀಚರ್ಗಳನ್ನು ಸ್ವೀಕರಿಸುವುದಿಲ್ಲ.

ನಿಮ್ಮ ಫೋನಿನ ಆಪರೇಟಿಂಗ್ ಸಿಸ್ಟಮ್ ಹೇಗೆ ಪರಿಶೀಲಿಸುವುದು?

ನಿಮ್ಮ ಸ್ಮಾರ್ಟ್‌ಫೋನ್ ಚಾಲನೆಯಲ್ಲಿರುವ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆವೃತ್ತಿಯನ್ನು ಪರಿಶೀಲಿಸಲು ನೀವು ಬಯಸಿದರೆ ನಿರ್ದಿಷ್ಟವಾಗಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಆವೃತ್ತಿ 5.1 ಕ್ಕಿಂತ ಹಳೆಯದನ್ನು ಬಳಸುವ ಸಾಧನಗಳಿಗೆ ನೀವು ಈ ಮಾಹಿತಿಯನ್ನು ಸೆಟ್ಟಿಂಗ್‌ಗಳ ಮೆನುವಿನಲ್ಲಿ ಪರಿಶೀಲಿಸಬಹುದು. ಹಾಗೆ ಮಾಡಲು Settings > About phone > Software information ಆಯ್ಕೆ ಮಾಡಿ ನೋಡಬಹುದು. ಇಲ್ಲಿ ನಿಮ್ಮ್ ಫೋನ್ ಕಾಣಿಸಿದರೆ ನೀವು ಹೊಸ ಫೋನಿಗೆ ಅಪ್‌ಗ್ರೇಡ್ ಮಾಡಬೇಕು. ಏಕೆಂದರೆ ವಾಟ್ಸಾಪ್ ಸೇರಿದಂತೆ ಹಲವು ಆ್ಯಪ್‌ಗಳು ಹಳೆಯ ಆಪರೇಟಿಂಗ್ ಸಿಸ್ಟಂಗಳನ್ನು ಬೆಂಬಲಿಸುವುದನ್ನು ನಿಲ್ಲಿಸುತ್ತವೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :