WhatsApp ಚಾನಲ್‌ನ ಫೀಚರ್‌ಗೆ ಶೀಘ್ರದಲ್ಲೇ New ಅಪ್ಡೇಟ್ ಬರಲಿದೆ! ನಿಮಗೂ ಲಭ್ಯವಿದ್ಯಾ ಈ ವೈಶಿಷ್ಟ್ಯ | High Tech

Updated on 27-Sep-2023
HIGHLIGHTS

WhatsApp ಚಾನಲ್ ಇದು ಅತ್ಯಂತ ಸರಳ, ವಿಶ್ವಾಸಾರ್ಹ ಮತ್ತು ಖಾಸಗಿ ಮಾರ್ಗಗಳಲ್ಲಿ ಒಂದಾಗಿದೆ.

ಈ WhatsApp ಚಾನಲ್ ಸೋಶಿಯಲ್ ಮೀಡಿಯಾ ಅಕೌಂಟ್ ಅಂತೆಯೇ ಕಾರ್ಯನಿರ್ವಹಿಸುತ್ತದೆ.

WhatsApp ಚಾನಲ್ ಕೆಲವು ಪ್ರದೇಶಗಳಲ್ಲಿ ಕೆಲವು ವಿಷಯವನ್ನು ನಿಷೇಧಿಸುವ ಸೌಲಭ್ಯವನ್ನು ಪ್ಲಾಟ್‌ಫಾರ್ಮ್ ಪಡೆಯಬಹುದು.

ವಾಟ್ಸಾಪ್ ಚಾನೆಲ್‌ (WhatsApp Channels) ನಿಮ್ಮ ಮೆಚ್ಚಿನ ಸೆಲೆಬ್ರಿಟಿಗಳು, ಕ್ರೀಡಾ ತಂಡಗಳು ವಿವಿಧ ಜನರಿಂದ ಲೈವ್ ಅಪ್ಡೇಟ್ ಇತ್ಯಾದಿಗಳನ್ನು ಪಡೆಯಲು ಈ ಫೀಚರ್ ಪರಿಚಯಿಸಿದೆ. WhatsApp ಅಪ್ಲಿಕೇಶನ್ ಇದೇ ತಿಂಗಳ 13ನೇ ಸೆಪ್ಟೆಂಬರ್ 2023 ರಂದು ಭಾರತದಲ್ಲಿ ಚಾನೆಲ್‌ಗಳ ಎಂಬ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿತು. ಇದು ಅತ್ಯಂತ ಸರಳ, ವಿಶ್ವಾಸಾರ್ಹ ಮತ್ತು ಖಾಸಗಿ ಮಾರ್ಗಗಳಲ್ಲಿ ಒಂದಾಗಿದೆ. ಅಂದ್ರೆ ವಾಟ್ಸಾಪ್ ಈಗಾಗಲೇ ಭಾರತದಲ್ಲಿ Instagram ಅಲ್ಲಿ ಲಭ್ಯವಿರುವಂತೆ ಚಾನಲ್‌ಗಳ ವೈಶಿಷ್ಟ್ಯವನ್ನು ಪರಿಚಯಿಸಿದೆ.

ನೀವು ನಿಮ್ಮ ನೆಚ್ಚಿನ ಚಾನಲ್‌ಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು ಮತ್ತು ನೋಟಿಫಿಕೇಶನ್ ಆನ್ ಮಾಡಬಹುದು ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿಯೊಂದು ಅಪ್ಡೇಟ್ ಅನ್ನು ನಿಮ್ಮ ಮೊಬೈಲ್‌ನಲ್ಲಿ ನೇರವಾಗಿ ಪಡೆಯಬಹುದು. ಈ ವೈಶಿಷ್ಟ್ಯವು ನೀವು WhatsApp ನಲ್ಲಿ ನೇರವಾಗಿ ಅನುಸರಿಸಲು ಇಷ್ಟಪಡುವ ಸಂಸ್ಥೆಗಳು, ಕ್ರೀಡಾ ತಂಡಗಳು, ಕಲಾವಿದರು ಮತ್ತು ಆಲೋಚನೆಗಳಿಂದ ಅಪ್ಡೇಟ್ ಅನ್ನು ಸ್ವೀಕರಿಸಲು ನಿಮಗೆ ಅನುಮತಿಸುತ್ತದೆ.

WhatsApp channel feature

WhatsApp ಚಾನೆಲ್‌ನಲ್ಲಿ ಈ ಬದಲಾವಣೆ

ವಾಟ್ಸಾಪ್ ವೈಶಿಷ್ಟ್ಯವನ್ನು ಹೊರತಂದ ನಂತರ ಕಂಪನಿಯು ಶೀಘ್ರದಲ್ಲೇ ಅದರಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಿದೆ. ಕಂಪನಿಯು ಈ ವೈಶಿಷ್ಟ್ಯವನ್ನು ಇನ್ನಷ್ಟು ಸುಧಾರಿಸುತ್ತಿದೆ ಎಂದು ವರದಿಗಳು ಹೇಳುತ್ತವೆ. ಮೆಟಾದ ಸ್ವಾಮ್ಯದ ಮೆಸೇಜ್ ರವಾನೆ ವೇದಿಕೆಯು ಚಾನಲ್ ರಚನೆಕಾರರಿಗೆ ಆಂಡ್ರಾಯ್ಡ್ ಮತ್ತು iOS ಡಿವೈಸ್‌ಗಳ ಬಳಕೆದಾರರೊಂದಿಗೆ ನೇರವಾಗಿ ಸಂಪರ್ಕಿಸಲು ಅನುಮತಿಸುತ್ತದೆ.

WhatsApp ಚಾನೆಲ್‌ನ ಬಳಕೆದಾರರಿಗೆ ಈ ಸೌಲಭ್ಯ

ಅದೇ ಸಮಯದಲ್ಲಿ ಕಂಪನಿಯು ಅದರಲ್ಲಿ ಭದ್ರತಾ ವೈಶಿಷ್ಟ್ಯವನ್ನು ಕೂಡ ಸೇರಿಸಿದೆ. ಇದು ಇತ್ತೀಚಿನ WABetaInfo ವರದಿಯಲ್ಲಿ ಕಂಡುಬಂದಿದೆ. ಸ್ಥಳೀಯ ಕಾನೂನುಗಳನ್ನು ಗಮನದಲ್ಲಿಟ್ಟುಕೊಂಡು ಈ ಅಪ್ಡೇಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಕೆಲವು ಪ್ರದೇಶಗಳಲ್ಲಿ ಕೆಲವು ವಿಷಯವನ್ನು ನಿಷೇಧಿಸುವ ಸೌಲಭ್ಯವನ್ನು ಪ್ಲಾಟ್‌ಫಾರ್ಮ್ ಪಡೆಯಬಹುದು. ಪ್ರಸ್ತುತ ಈ ವೈಶಿಷ್ಟ್ಯವು ಕೆಲವು ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಎಲ್ಲರಿಗು ಲಭ್ಯವಾಗಲಿದೆ.

WhatsApp ಚಾನೆಲ್‌ಗೆ ಸೇರುವುದು ಹೇಗೆ?

➥ಇದಕ್ಕಾಗಿ ನೀವು ಮೊದಲು ವಾಟ್ಸಾಪ್ ಅನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಿಕೊಳ್ಳಬೇಕು.

➥ಇದರ ನಂತರ ನೀವು ಸ್ಕ್ರೀನ್ ಕೆಳಗೆ ಸ್ಕ್ರಾಲ್ ಮಾಡಬೇಕಾಗುತ್ತದೆ ಮತ್ತು ಚಾನಲ್‌ಗಳ ಆಯ್ಕೆಗೆ ಹೋಗಬೇಕು.

➥ಕೆಳಗೆ ನೀವು ಫಂಡ್ ಚಾನೆಲ್‌ಗಳ (Find Channels) ಆಯ್ಕೆಯನ್ನು ನೋಡುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ.

➥ಇದರ ನಂತರ ನೀವು ನಿಮ್ಮ ನೆಚ್ಚಿನ ಚಾನಲ್‌ ಟೈಪ್ ಮಾಡಿ ಫಾಲೋ ಮಾಡಿಕೊಳ್ಳಿ ಅಷ್ಟೇ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :