ಜನಪ್ರಿಯ ತ್ವರಿತ ಸಂದೇಶ ಅಪ್ಲಿಕೇಶನ್ WhatsApp ಮೂಲಕ ಬಳಕೆದಾರರು ಫೋಟೋಗಳು ಮತ್ತು ವೀಡಿಯೊಗಳನ್ನು ಪರಸ್ಪರ ಶೇರ್ ಮಾಡಲಬಹುದು. ಆದರೆ ಆಗಾಗ್ಗೆ ಈ ಮೂಲಕ ಫೋಟೋ ಶೇರ್ ಮಾಡುವುದರಿಂದ ಅದರ ಗುಣಮಟ್ಟ ಹಾಳಾಗುವ ಸಾಧ್ಯತೆ ಹೆಚ್ಚು. ಈ ಸಮಸ್ಯೆಯಿಂದಾಗಿ ಬಳಕೆದಾರರು ಅಪ್ಲಿಕೇಶನ್ ಮೂಲಕ ಫೋಟೋಗಳನ್ನು ಶೇರ್ ಮಾಡಲು ಸಾಧ್ಯವಿಲ್ಲ. WhatsApp ನೀವು iPhone ಮತ್ತು ಆಂಡ್ರಾಯ್ಡ್ ಫೋನ್‌ಗಳಿಂದ ಕಳುಹಿಸುವ ಮತ್ತು ಸ್ವೀಕರಿಸುವ ಫೋಟೋಗಳ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.
ಡೀಫಾಲ್ಟ್ ಆಗಿ ಫಾಸ್ಟ್ ಡೇಟಾ ಶೇರ್ ಉದ್ದೇಶಗಳಿಗಾಗಿ WhatsApp ಫೋಟೋ ಗುಣಮಟ್ಟವನ್ನು 70% ಕಡಿಮೆ ಮಾಡುತ್ತದೆ. ಆದರೆ ಕೆಲವೊಮ್ಮೆ ಇದು ತುಂಬಾ ನಿರಾಶಾದಾಯಕವಾಗಿರುತ್ತದೆ. ಆದರೆ ಈಗ ಚಿಂತಿಸಬೇಕಾಗಿಲ್ಲ ಫೋಟೋ ಶೇರ್ ಅನುಭವವನ್ನು ಇನ್ನಷ್ಟು ಮೋಜಿನ ಮಾಡಲು ಕಂಪನಿಯು Android ಮತ್ತು iOS ಬಳಕೆದಾರರಿಗೆ HD ಫೋಟೋಗಳನ್ನು ಶೇರ್ ಮಾಡಲು ಅವಕಾಶ ನೀಡುತ್ತಿದೆ. WhatsApp ತನ್ನ ಬಳಕೆದಾರರಿಗೆ HD ಫೋಟೋ ವೈಶಿಷ್ಟ್ಯವನ್ನು ಪರಿಚಯಿಸಿದೆ. ಆದರೆ ಪ್ರಸ್ತುತ ಈ ವೈಶಿಷ್ಟ್ಯವು ಆಯ್ದ ಬೀಟಾ ಬಳಕೆದಾರರಿಗೆ ಮಾತ್ರ ಹೊರಹೊಮ್ಮುತ್ತಿದೆ.
https://twitter.com/WABetaInfo/status/1666221155961692163?ref_src=twsrc%5Etfw
ವಾಟ್ಸಾಪ್ HD ಫೋಟೋಗಳ ವೈಶಿಷ್ಟ್ಯದ ರೋಲ್ ಔಟ್ ಕುರಿತು WABetainfo ವರದಿ ಮಾಡಿದೆ. ಬಳಕೆದಾರರು ಹೊಸ ಆಯ್ಕೆಯನ್ನು ಪಡೆಯುತ್ತಾರೆ ಇದು ಫೋಟೋ ಗುಣಮಟ್ಟವನ್ನು ನಿರ್ವಹಿಸಲು ಅವರಿಗೆ ಅನುಮತಿಸುತ್ತದೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ ಬಳಕೆದಾರರು WhatsApp ನಿಂದ ಫೋಟೋಗಳನ್ನು ಕಳುಹಿಸುವಾಗ ಗುಣಮಟ್ಟದ ಆಯ್ಕೆಗಳನ್ನು ಪಡೆಯುತ್ತಾರೆ. ವಾಸ್ತವವಾಗಿ ಫೋಟೋವನ್ನು ಆಯ್ಕೆ ಮಾಡಿದ ನಂತರ ಸ್ಕ್ರೀನ್ ಮೇಲ್ಭಾಗದಲ್ಲಿರುವ ಕ್ರಾಪ್ ಚಿಹ್ನೆಯ ಬಳಿ HD ಸೆಟ್ಟಿಂಗ್ ಬಟನ್ ಲಭ್ಯವಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಸ್ಟ್ಯಾಂಡರ್ಡ್ ಕ್ವಾಲಿಟಿ ಮತ್ತು HD ಕ್ವಾಲಿಟಿ ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ.
ನಿಮಗೊತ್ತಾ ನಿಮ್ಮ ಪ್ರತಿಯೊಯೊಂದು ಫೋಟೋದ ಪಿಕ್ಸೆಲ್ ರೆಸಲ್ಯೂಶನ್ ಪ್ರಮಾಣಿತ ಗುಣಮಟ್ಟದಲ್ಲಿ 1600×1052 ಮತ್ತು HD ಗುಣಮಟ್ಟದಲ್ಲಿ 4096×2692 ಎಂದು ಹೇಳಲಾಗುತ್ತದೆ. ಬಳಕೆದಾರರು HD ಫೋಟೋಗಳನ್ನು ಕಳುಹಿಸಲು ಬಯಸಿದರೆ HD ಗುಣಮಟ್ಟದ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಇದರ ನಂತರ ಫೋಟೋದಲ್ಲಿ HD ಲೋಗೋ ಸಹ ಕಾಣಿಸಿಕೊಳ್ಳುತ್ತದೆ. ಈ ವೈಶಿಷ್ಟ್ಯವನ್ನು ಮುಂದಿನ ದಿನಗಳಲ್ಲಿ ಎಲ್ಲರಿಗೂ ಪರಿಚಯಿಸಲಾಗುವುದು. ಸದ್ಯಕ್ಕೆ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ.