Whatsapp ಬಳಕೆದಾರರ ಪ್ರಮುಖ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಿದೆ.
ಬಳಕೆದಾರರು ಈಗ 100 ಮೀಡಿಯಾ ಫೈಲ್‌ಗಳನ್ನು ಏಕಕಾಲದಲ್ಲಿ ಕಳುಹಿಸಬಹುದು.
ಅಪ್ಲಿಕೇಶನ್‌ನ ವರ್ಷನ್ 2.23.4.3 ಅನ್ನು ಅಪ್ಡೇಟ್ ಮಾಡುವ ಮೂಲಕ ಇದನ್ನು ಬಳಸಬಹುದು.
WhatsApp Update: ವಾಟ್ಸಾಪ್ ಬಳಕೆದಾರರ ಪ್ರಮುಖ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಿದೆ. WhatsApp ನೊಂದಿಗೆ ಬಳಕೆದಾರರು ಶೀಘ್ರದಲ್ಲೇ 100 ಮೀಡಿಯಾ ಫೈಲ್‌ಗಳನ್ನು ಏಕಕಾಲದಲ್ಲಿ ಕಳುಹಿಸಲು ಸಾಧ್ಯವಾಗುತ್ತದೆ. ಈ ಹಿಂದೆ ಕೇವಲ 30 ಫೋಟೋಗಳನ್ನು ಮಾತ್ರ ಚಾಟ್‌ನಲ್ಲಿ ಕಳುಹಿಸಬಹುದಾಗಿತ್ತು ಆದರೆ 100 ಮೀಡಿಯಾ ಫೈಲ್‌ಗಳು ಅಥವಾ ಫೋಟೋಗಳನ್ನು ಈಗ ಒಂದೇ ಬಾರಿಗೆ ಹಂಚಿಕೊಳ್ಳಬಹುದು. ಈ ಫೀಚರ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವ ಬಳಕೆದಾರರಿಗೆ ಇದು ಮೊದಲು ಸಿಗಲಿದೆ ಎನ್ನುವುದರ ಫುಲ್ ಡಿಟೈಲ್ಸ್ ಇಲ್ಲಿದೆ ನೋಡಿ.
100 ಮೀಡಿಯಾ ಫೈಲ್‌ಗಳನ್ನು ಏಕಕಾಲದಲ್ಲಿ ಕಳುಹಿಸಲು ಸಾಧ್ಯ
Whatsapp ಬಳಕೆದಾರರಿಗಾಗಿ ತನ್ನ ಫೀಚರ್‌ಗಳನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡುತ್ತಿರುತ್ತದೆ. ಭಾರತದಲ್ಲಿ ಪ್ರಸ್ತುತ ಈ ಮೆಸೇಜಿಂಗ್ ಅಪ್ಲಿಕೇಶನ್ ಲಕ್ಷಾಂತರ ಬಳಕೆದಾರರನ್ನು ಹೊಂದಿದೆ ಮತ್ತು ಈಗ ಈ ಪ್ಲಾಟ್‌ಫಾರ್ಮ್ ಮೀಡಿಯಾ ಫೈಲ್ ಹಂಚಿಕೆಯೊಂದಿಗೆ ಮಹತ್ವದ ಸಮಸ್ಯೆಯನ್ನು ಪರಿಹರಿಸಿದೆ. WABetaInfo ನ ವರದಿಯ ಪ್ರಕಾರ WhatsApp ಬಳಕೆದಾರರು ಈಗ ಚಾಟ್‌ನಲ್ಲಿ ಏಕಕಾಲದಲ್ಲಿ 100 ಮೀಡಿಯಾ ಫೈಲ್‌ಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಈ ಸೌಲಭ್ಯವು ಕೇವಲ 30 ಮೀಡಿಯಾ ಫೈಲ್‌ಗಳಿಗೆ ಸೀಮಿತವಾಗಿತ್ತು. ಹೊಸ ರೋಲ್‌ಔಟ್ ಮೂಲಕ ಶೀಘ್ರದಲ್ಲೇ ಈ ಫೀಚರ್ ಬಳಕೆದಾರರಿಗೆ ಸಿಗಲಿದೆ.
WhatsApp brings new features to improve the user experience on WhatsApp for Android!
WhatsApp has just announced four new features for everyone: document caption, longer group subjects and descriptions, the ability to share up to 100 media, and avatars.https://t.co/Yni1OuCxQB
— WABetaInfo (@WABetaInfo) February 14, 2023
WhatsApp ಶೀಘ್ರದಲ್ಲೇ ಈ 3 ಫೀಚರ್‌ಗಳನ್ನು ತರಲಿದೆ
ಇಲ್ಲಿಯವರೆಗಿನ ಮಾಹಿತಿಯ ಪ್ರಕಾರ ಬೀಟಾ ಪ್ರೋಗ್ರಾಂಗಾಗಿ ಈ ಫೀಚರ್ ಅನ್ನು ಪ್ರಾರಂಭಿಸಲಿದೆ ಎಂದು ವರದಿಯಾಗಿದೆ. Google Play ಬೀಟಾ ಪ್ರೋಗ್ರಾಂನ ಸದಸ್ಯರಾಗಿರುವ ಬೀಟಾ ಪರೀಕ್ಷಕರಿಗೆ ಈ ಫೀಚರ್ ಅನ್ನು ಪರಿಚಯಿಸಲಿದೆ. ಅಪ್ಲಿಕೇಶನ್‌ನ ವರ್ಷನ್ 2.23.4.3 ಗೆ ಅಪ್ಡೇಟ್ ಮಾಡುವ ಮೂಲಕ ಇದನ್ನು ಬಳಸಬಹುದು. ಆಂಡ್ರಾಯ್ಡ್ ಬಳಕೆದಾರರು ಆರಂಭದಲ್ಲಿ ಇದನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಇದನ್ನು ಯಾವಾಗ iOS ಬೀಟಾ ಪ್ರೋಗ್ರಾಂಗೆ ಹೊರತರಲಾಗುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಲಾಗಿಲ್ಲ.
ಇದಲ್ಲದೇ ಈ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಶೀಘ್ರದಲ್ಲೇ ಬಳಕೆದಾರರಿಗೆ ಮತ್ತೊಂದು ಫೀಚರ್ ಅನ್ನು ಪ್ರಾರಂಭಿಸಲಿದೆ. ಇದರಲ್ಲಿ ಚಾಟ್ ಹಿಸ್ಟರಿ ಅನ್ನು QR ಕೋಡ್ ಮೂಲಕ ವರ್ಗಾಯಿಸಬಹುದು. ನಿಮ್ಮ ಹಳೆಯ ಫೋನ್‌ನಿಂದ ಹೊಸ ಫೋನ್‌ಗೆ ನಿಮ್ಮ WhatsApp ಅಕೌಂಟ್ ವರ್ಗಾಯಿಸುವಾಗ ಈ ಫೀಚರ್ ತುಂಬಾ ಉಪಯುಕ್ತವಾಗಿರುತ್ತದೆ. ಇದಕ್ಕಾಗಿ ಈ ಹಿಂದೆ ಬಳಕೆದಾರರು Google ಡ್ರೈವ್ ಅನ್ನು ಬಳಸಬೇಕಿತ್ತು. ಆದರೆ ಶೀಘ್ರದಲ್ಲೇ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಈ ಫೀಚರ್ ಬರುತ್ತಿದ್ದು QR ಕೋಡ್ ಬಳಕೆಯಿಂದ ಹಳೆಯ ಫೋನ್‌ನ ಚಾಟ್ ಹಿಸ್ಟರಿ ಅನ್ನು ವರ್ಗಾಯಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile