ಇನ್ಮುಂದೆ ವಾಟ್ಸಾಪ್ ಮತ್ತು ಫೇಸ್ಬುಕ್ ಎರಡಕ್ಕೂ ಒಟ್ಟಿಗೆ ನಿಮ್ಮ ಸ್ಟೇಟಸ್ ಅನ್ನು ಶೇರ್ ಮಾಡಬಹುದಾದರೆ ನಿಮಗೆ ಎಷ್ಟು ಉಪಯುಕ್ತವೆಂದು ಯಾವಾಗಾದರೂ ಯೋಜನೆ ಮಾಡಿದ್ರ? ಈಗ ಇದೇ ಯೋಚನೆಯನ್ನು ಗಮನದಲ್ಲಿಟ್ಟುಕೊಂಡು ವಾಟ್ಸಾಪ್ ಈ ರೀತಿಯ ಫೀಚರ್ ತರಲು ಕಾರ್ಯನಿರ್ವಹಿಸುತ್ತಿದೆ. ಬಳಕೆದಾರರ WhatsApp ಸ್ಟೇಟಸ್ ಅಪ್ಡೇಟ್ ಗಳನ್ನು ಫೇಸ್‌ಬುಕ್ ಸ್ಟೋರಿಗಳಿಗೆ ಶೇರ್ ಮಾಡಲು ಈ ಫೀಚರ್ ಅನುವು ಮಾಡಿಕೊಡುತ್ತದೆ. ಈ ಹೊಸ ಫೀಚರ್‌ನಿಂದ ಬಳಕೆದಾರರು ತಮ್ಮ ಸ್ಟೇಟಸ್ ಅಪ್‌ಡೇಟ್‌ಗಳನ್ನು ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲು ಸುಲಭವಾಗಿಸುತ್ತದೆ.
ಬಳಕೆದಾರರು ಈ ಹಿಂದೆ ಫೇಸ್‌ಬುಕ್ ಸ್ಟೋರಿಗಳಿಗೆ ಸ್ಟೇಟಸ್ ಅಪ್ಡೇಟ್ಗಳನ್ನು ಶೇರ್ ಮಾಡಲು ಸಾಧ್ಯವಿತ್ತು. ಆದರೆ ಅವರು ಹೊಸ ಪೋಸ್ಟ್ ಮಾಡಿದಾಗಲೆಲ್ಲಾ ಅಪ್‌ಡೇಟ್ ಅನ್ನು ಮ್ಯಾನುವಲ್ ಆಗಿ ಶೇರ್ ಮಾಡಲು ಹೆಚ್ಚಿನ ಹಂತವನ್ನು ತೆಗೆದುಕೊಳ್ಳಬೇಕಾಗಿತ್ತು. ಈ ಹೊಸ ಫೀಚರ್‌ನೊಂದಿಗೆ ಆಯ್ಕೆಯನ್ನು ಆನ್ ಮಾಡಿದಾಗ ಬಳಕೆದಾರರು ಆಯ್ಕೆ ಮಾಡುವ ಕೆಲವು ಸ್ಟೇಟಸ್ ಅಪ್ಡೇಟ್ಗಳಿಗಾಗಿ ಕಾರ್ಯವಿಧಾನವು ಆಟೋಮ್ಯಾಟಿಕ್ ಆಗಿರುತ್ತದೆ. ವರದಿಯ ಪ್ರಕಾರ WhatsApp ನ ಸ್ಟೇಟಸ್ ಪ್ರೈವಸಿ ಸೆಟ್ಟಿಂಗ್‌ನಲ್ಲಿ ಹೊಸ ಆಯ್ಕೆಯನ್ನು ಕಾಣಬಹುದು.
ಇಲ್ಲಿ ಆಯ್ಕೆಯು Disabled ಆಗಿರುತ್ತದೆ. ಬಳಕೆದಾರರು ತಮ್ಮ ಸ್ಟೇಟಸ್ ಅಪ್ಡೇಟ್ಗಳನ್ನು ಫೇಸ್‌ಬುಕ್ ಸ್ಟೋರಿಗಳಿಗೆ ಶೇರ್ ಮಾಡಲು ಬಯಸಿದರೆ ಅದನ್ನು ಸ್ವತಃ Enable ಮಾಡಬೇಕಾಗುತ್ತದೆ. ಈ ಹೊಸ ಫೀಚರ್‌ನ ಮೂಲಕ ಬಳಕೆದಾರರು WhatsApp ನಿಂದಲೆ ನೇರವಾಗಿ ಫೇಸ್‌ಬುಕ್ ಸ್ಟೋರಿಗಳೊಂದಿಗೆ ಮ್ಯಾನುವಲ್ ಆಗಿ ಸ್ಟೇಟಸ್ ಅಪ್ಡೇಟ್ಗಳನ್ನು ಶೇರ್ ಮಾಡಿಕೊಂಡಾಗ ಸಮಯ ಮತ್ತು ಶ್ರಮವನ್ನು ಉಳಿಸಲು ಸಾಧ್ಯವಾಗುತ್ತದೆ.
ಇದರೊಂದಿಗೆ WhatsApp "ಆಡಿಯೋ ಚಾಟ್‌ಗಳು" ಎಂಬ ಹೊಸ ಫೀಚರ್ ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಇದು Android ಅಪ್ಲಿಕೇಶನ್‌ನ ಮುಂಬರುವ ಅಪ್ಡೇಟ್ನಲ್ಲಿ ಲಭ್ಯವಿರುತ್ತದೆ. ಈ ಫೀಚರ್ ಚಾಟ್ ಹೆಡರ್‌ನಲ್ಲಿ ಹೊಸ ವ್ಯಾವ್ ಫಾರ್ಮ್ಸ್ ಐಕಾನ್ ಅನ್ನು ಒಳಗೊಂಡಿರುತ್ತದೆ. ಇದು ಬಳಕೆದಾರರಿಗೆ ಆಡಿಯೊ ಚಾಟ್‌ಗಳನ್ನು ಪ್ರಾರಂಭಿಸಲು ಅನುಮತಿಸುತ್ತದೆ ಮತ್ತು ಸಕ್ರಿಯ ಕರೆಗಳನ್ನು ಕೊನೆಗೊಳಿಸಲು ಕೆಂಪು ಬಟನ್ ಅನ್ನು ಒಳಗೊಂಡಿರುತ್ತದೆ.
ಒಟ್ಟಾರೆಯಾಗಿ WhatsApp ಈ ಹೆಚ್ಚುವರಿ ಫೀಚರ್‌ಗಳ ಮೂಲಕ ತನ್ನ ಬಳಕೆದಾರರಿಗೆ ಸಾಧ್ಯವಾದಷ್ಟು ಉತ್ತಮವಾದ ಪ್ಲಾಟ್‌ಫಾರ್ಮ್ ಅನುಭವವನ್ನು ನೀಡಲು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. WhatsApp ನ ಮೂಲಕ ಫೇಸ್‌ಬುಕ್ ಸ್ಟೋರಿಗಳಿಗೆ ತಮ್ಮ ಸ್ಟೇಟಸ್ ಅಪ್ಡೇಟ್ಗಳನ್ನು ಶೇರ್ ಮಾಡಲು ಅವಕಾಶ ನೀಡುವ ಈ ಹೊಸ ಫೀಚರ್‌ನೊಂದಿಗೆ ಬಳಕೆದಾರರು ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಇದು ಇನ್ನಷ್ಟು ಸುಲಭಗೊಳಿಸುತ್ತಿದೆ.