WhatsApp on Multiple Devices: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp 2 ಬಿಲಿಯನ್ ಬಳಕೆದಾರರನ್ನು ಹೊಂದಿದೆ. ಇದು ಅಂತಿಮವಾಗಿ ಮಲ್ಟಿ ಡಿವೈಸ್ ನಲ್ಲಿ ಲಾಗಿನ್ ಮಾಡುವುದನ್ನು ಪರಿಚಯಿಸುತ್ತಿದೆ ಎಂದು ಘೋಷಿಸಿದೆ. ಮೆಟಾದ CEO ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ನೀವು ಈಗ ಒಂದೇ WhatsApp ಖಾತೆಯನ್ನು ನಾಲ್ಕು ಫೋನ್‌ಗಳಿಂದ ಲಾಗ್ ಇನ್ ಮಾಡಬಹುದು” ಎನ್ನುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
➥ ಮುಂದಿನ ಕೆಲವು ವಾರಗಳಲ್ಲಿ ಎಲ್ಲಾ ಬಳಕೆದಾರರಿಗೆ ಈ ಫೀಚರ್ ಲಭ್ಯವಾಗುತ್ತದೆ. ನಾಲ್ಕು ಫೋನ್‌ಗಳಲ್ಲಿ ಒಂದೇ WhatsApp ಖಾತೆಯನ್ನು ಲಾಗಿನ್ ಮಾಡುಲು ಈಗ ಸಾಧ್ಯವಾಗುತ್ತದೆ. ಕೇವಲ ಒಂದು ಫೋನ್ ಮತ್ತು ಹಲವು ಕಂಪ್ಯಾನಿಯನ್ ಡೆಸ್ಕ್‌ಟಾಪ್ ಡಿವೈಸ್ ಗಳಲ್ಲಿ ಒಂದು WhatsApp ಖಾತೆಯನ್ನು ಬಳಸಲು ಸಾಧ್ಯವಾಗುವ ಹಿಂದಿನ ಮಿತಿಯು ಈಗ ಗಮನಾರ್ಹವಾಗಿ ಬದಲಾಗಿದೆ.
➥ ಈಗ ಬಳಕೆದಾರರು ತಮ್ಮ ಮೆಸೇಜ್ಗಳನ್ನು ಇತರ ಫೋನ್‌ಗಳ ಜೊತೆಗೆ ಬೇರೆ ಡಿವೈಸ್‌ಗೂ ಸಿಂಕ್ ಮಾಡಬಹುದು. ಅಂದರೆ ಒಂದು ಸ್ವಿಚ್ ಆಫ್ ಆಗಿದ್ದರೂ ಸಹ ಇತರ ಡಿವೈಸ್‌ಗಳಲ್ಲಿ ಬಳಕೆದಾರರು ಅಪ್ಲಿಕೇಶನ್ ಅನ್ನು ಬಳಸಬಹುದು. WhatsApp ನ ಹೊಸ ತಂತ್ರಜ್ಞಾನಗಳ ಅಭಿವೃದ್ಧಿಯಿಂದಾಗಿ ಮೆಸೇಜ್ಗಳನ್ನು ಈಗ ಡಿವೈಸ್‌ಗಳ ನಡುವೆ ಸಿಂಕ್ ಮಾಡಬಹುದು ಜೊತೆಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನಿಂದ ರಕ್ಷಿಸಬಹುದು.
➥ 2021 ರಿಂದ ಕಂಪನಿಯು ಬೀಟಾ ಬಳಕೆದಾರರೊಂದಿಗೆ ಮಲ್ಟಿ-ಡಿವೈಸ್ ಕಂಪ್ಯಾಟಿಬಿಲಿಟಿಯನ್ನು ಪರೀಕ್ಷಿಸುತ್ತಿದೆ. ಕರೆಗಳು ಮತ್ತು ಚಾಟ್‌ಗಳಿಗಾಗಿ WhatsApp ನ ಪೂರ್ಣ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ನ ಫೀಚರ್ ಕಾರಣದಿಂದಾಗಿ ಈ ಫೀಚರ್ ಅನ್ನು ಪೂರ್ಣಗೊಳಿಸುವುದು ಕಷ್ಟಕರವಾಗಿತ್ತು.
➥ಟೆಲಿಗ್ರಾಮ್ ಮತ್ತು ಮೆಸೆಂಜರ್‌ನಂತಹ ಮೆಸೇಜಿಂಗ್ ಅಪ್ಲಿಕೇಶನ್‌ಗಳು ಮಲ್ಟಿ-ಡಿವೈಸ್ ಮೆಸೇಜ್ ಸಿಂಕ್ರೊನೈಸೇಶನ್ ಅನ್ನು ಒದಗಿಸಿದ್ದರೂ ಅವುಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಒದಗಿಸುವುದಿಲ್ಲ. ಇದು WhatsApp ಅನ್ನು ಅದರ ಪ್ರತಿಸ್ಪರ್ಧಿಗಳಿಂದ ಪ್ರತ್ಯೇಕಿಸುವ ಪ್ರಮುಖ ಫೀಚರ್ ಆಗಿದೆ. WhatsApp ನ ಈ ಹೊಸ ಫೀಚರ್‌ನ ಸೇರ್ಪಡೆಯು ಕಂಪನಿಗೆ ಒಂದು ಮಹತ್ವದ ಹೆಜ್ಜೆಯಾಗಿದೆ.
ಹೆಚ್ಚುವರಿಯಾಗಿ WhatsApp ಶೀಘ್ರದಲ್ಲೇ ಡಿವೈಸ್‌ಗಳನ್ನು ಲಿಂಕ್ ಮಾಡಲು ಹೊಸ ಒನ್-ಟೈಮ್ ಕೋಡ್ ವ್ಯವಸ್ಥೆಯನ್ನು ಹೊರತರಲಿದೆ. ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಬದಲು WhatsApp ವೆಬ್‌ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೀವು ಈಗ ಒಂದು ಬಾರಿ-ಬಳಕೆಯ ಕೋಡ್ ಅನ್ನು ಪಡೆದುಕೊಳ್ಳಬಹುದು ಮತ್ತು ಈ ಫೀಚರ್‌ನ ಸೌಲಭ್ಯವು ಮುಂದಿನ ದಿನಗಳಲ್ಲಿ ಹೆಚ್ಚು ಲಿಂಕ್ ಮಾಡಲಾದ ಡಿವೈಸ್‌ಗಳಿಗೆ ಲಭ್ಯವಿರುತ್ತದೆ.