WhatsApp Scam: ಅಂತರಾಷ್ಟ್ರೀಯ ಸಂಖ್ಯೆಗಳಿಂದ ಬರುತ್ತಿರುವ ನಿರಂತರ ಸ್ಪ್ಯಾಮ್ ಕರೆಗಳ ಪರಿಣಾಮವಾಗಿ ಭಾರತದಲ್ಲಿನ ಬಳಕೆದಾರರು ಪ್ರಮುಖವಾಗಿ WhatsApp ನಲ್ಲಿ ಬರುವ ಸ್ಪ್ಯಾಮ್ಬ ಕರೆಗಳ ಬಗ್ಗೆ ದೂರುತ್ತಿದ್ದಾರೆ. Twitter ನಲ್ಲಿ ಹಲವಾರು ಬಳಕೆದಾರರು ಅಂತರಾಷ್ಟ್ರೀಯ ಕರೆ ID ಬಳಸಿ ಪಡೆದ ಕರೆ ದಾಖಲೆಗಳ ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ವರದಿಗಳ ಪ್ರಕಾರ ಆಡಿಯೋ ಮತ್ತು ವಿಡಿಯೋ ಎರಡರಲ್ಲೂ ಈ ಕರೆಗಳನ್ನು ಮಾಡುವ ದೇಶಗಳಲ್ಲಿ ಮಲೇಷ್ಯಾ, ಕೀನ್ಯಾ, ವಿಯೆಟ್ನಾಂ, ಇಥಿಯೋಪಿಯಾ ಇತ್ಯಾದಿ ಸೇರಿವೆ.
WhatsApp ನಲ್ಲಿ ಬಳಕೆದಾರರ ಸುರಕ್ಷತೆಯು ಬಹಳ ಮುಖ್ಯವಾಗಿದ್ದು ವಂಚನೆಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಗತ್ಯವಿರುವ ಮಾಹಿತಿ ಮತ್ತು ಸಾಧನಗಳನ್ನು ಬಳಕೆದಾರರಿಗೆ ಒದಗಿಸಲಾಗುತ್ತಿದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್ ಮೆಸೇಜಿಂಗ್ ಸೇವೆಗಳಲ್ಲಿ ದುರುಪಯೋಗವನ್ನು ತಡೆಗಟ್ಟುವಲ್ಲಿ WhatsApp ಮೊದಲ ಸ್ಥಾನದಲ್ಲಿದೆ. ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ವಾಟ್ಸಾಪ್ ಅನುಮಾನಾಸ್ಪದ ಮೆಸೇಜ್‌ಗಳು ಮತ್ತು ಕರೆಗಳನ್ನು ಬ್ಲಾಕ್ ಮತ್ತು ರಿಪೋರ್ಟ್ ಮಾಡುವುದು ಪ್ರಮುಖ ಹಂತವಾಗಿದೆ ಎಂದು ತಿಳಿಸಲಾಗಿದೆ.
ವಿಶೇಷವಾಗಿ ಅಂತರರಾಷ್ಟ್ರೀಯ ನಂಬರ್‌ಗಳಿಂದ ಬರುವ ಕರೆಗಳಿಗೆ ಉತ್ತರಿಸುವಾಗ ಎಚ್ಚರಿಕೆ ವಹಿಸುವಂತೆ ಬಳಕೆದಾರರಿಗೆ ಸಲಹೆ ನೀಡಲಾಗಿದೆ. ಬಳಕೆದಾರರನ್ನು WhatsApp ನಲ್ಲಿ ಸುರಕ್ಷಿತವಾಗಿರಿಸಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಇತರ ಅತ್ಯಾಧುನಿಕ ತಂತ್ರಜ್ಞಾನಗಳನ್ನು ನಿರಂತರವಾಗಿ ಬಳಕೆ ಮಾಡಲಾಗುತ್ತಿದೆ. ಐಟಿ ನಿಯಮಗಳು 2021 ರ ಅನುಸಾರವಾಗಿ WhatsApp ಸ್ವೀಕರಿಸಿದ ಬಳಕೆದಾರರ ದೂರುಗಳು ಮತ್ತು ದುರ್ಬಳಕೆಯ ವಿರುದ್ಧ ಕ್ರಮಗಳ ಮಾಹಿತಿಯನ್ನು ಗಮನಿಸಿ ಇತ್ತೀಚಿನ ವರದಿ ಪ್ರಕಾರ ಮಾರ್ಚ್‌ನಲ್ಲಿಯೇ WhatsApp ನಲ್ಲಿ ಸುಮಾರು 4.7 ಮಿಲಿಯನ್ ಖಾತೆಗಳನ್ನು ನಿಷೇಧಿಸಲಾಗಿದೆ.
WhatsApp ನಲ್ಲಿ ನಂಬರ್‌ಗಳನ್ನು ಬ್ಲಾಕ್ ಮಾಡುವುದು ಸುಲಭವಾದ ವಿಧಾನವಾಗಿದೆ.
ನೀವು ಬ್ಲಾಕ್ ಮಾಡಲು ಬಯಸುವ ವ್ಯಕ್ತಿಯ ಚಾಟ್ ತೆರೆಯುವ ಮೂಲಕ ಪ್ರಾರಂಭಿಸಿ.
ಕರೆ ಆಯ್ಕೆಯ ಪಕ್ಕದಲ್ಲಿರುವ ಮೂರು ಚುಕ್ಕೆಗಳನ್ನು ಕ್ಲಿಕ್ ಮಾಡುವ ಮೂಲಕ ಆಯ್ಕೆಮಾಡಿ. ಆ ಸಂಖ್ಯೆಯಿಂದ ಬರುವ ಕರೆಗಳು ಮತ್ತು ಮೆಸೇಜ್‌ಗಳನ್ನು ನಿಲ್ಲಿಸಲು "More" ಟ್ಯಾಪ್ ಮಾಡಿ ಮತ್ತು "ಬ್ಲಾಕ್" ಆಯ್ಕೆಮಾಡಿ.
ನೀವು ಬ್ಲಾಕ್ ಮಾಡಿದ ನಂಬರ್‌ಗೆ ಇನ್ನು ಮುಂದೆ ಕರೆ ಅಥವಾ ಮೆಸೇಜ್ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚುವರಿಯಾಗಿ ನೀವು ಬ್ಲಾಕ್
ಮಾಡಿದ ನಂಬರ್ ನವರು ನಿಮ್ಮ "Last Seen, "ಆನ್‌ಲೈನ್" ಅಥವಾ "ಸ್ಟೇಟಸ್ ಅಪ್ಡೇಟ್ಗಳನ್ನು" ನೋಡಲು ಸಾಧ್ಯವಾಗುವುದಿಲ್ಲ ಮತ್ತು ನೀವು ಮಾಡಿದ ಯಾವುದೇ ಪ್ರೊಫೈಲ್ ಫೋಟೋ ಬದಲಾವಣೆಗಳನ್ನು ಸಹ ನೋಡಲು ಸಾಧ್ಯವಾಗುವುದಿಲ್ಲ.
ವಾಟ್ಸಾಪ್‌ನಲ್ಲಿ ಕಿರಿಕಿರಿಗೊಳಿಸುವ ನಂಬರ್‌ಗಳನ್ನು ಬ್ಲಾಕ್ ಮಾಡುವ ಈ ಸೂಚನೆಗಳು ನಿಮಗೆ ಉಪಯುಕ್ತವಾಗಲಿದೆ.