digit zero1 awards

ವಾಟ್ಸಾಪ್ ಈಗ ‘ಸ್ಟೇಟಸ್ ಆರ್ಕೈವ್’ ಫೀಚರ್ ಪರಿಚಯಿಸಲಿದೆ! ಆದರೆ ಈ ಫೀಚರ್​ನ ಪ್ರಯೋಜನಗಳೇನು?

ವಾಟ್ಸಾಪ್ ಈಗ ‘ಸ್ಟೇಟಸ್ ಆರ್ಕೈವ್’ ಫೀಚರ್ ಪರಿಚಯಿಸಲಿದೆ! ಆದರೆ ಈ ಫೀಚರ್​ನ ಪ್ರಯೋಜನಗಳೇನು?
HIGHLIGHTS

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ WhatsApp ಈಗ ಮತ್ತೊಂದು ಹೊಸ ಫೀಚರ್ ಮೇಲೆ ಕಾರ್ಯನಿರ್ವಹಿಸುತ್ತಿದೆ.

Status Archive ಎಂದು ಗುರುತಿಸಿದ್ದು ಈಗಾಗಲೇ ಇದರ ಬಗ್ಗೆ ಸಾಕಷ್ಟು ಮಾಹಿತಿಗಳು ಇಂಟರ್ನೆಟ್ ಒಳಗೆ ಹರಿದಾಡುತ್ತಿವೆ.

ಎಲ್ಲ ರೀತಿಯ ನೋಟಿಫಿಕೇಷನ್‌ಗಳಿಂದ ಎದುರಾಗುವ ಸಮಸ್ಯೆಯನ್ನು ಪೂರ್ತಿಯಾಗಿ ತಪ್ಪಿಸಲು ಈ ವಿಶೇಷ ಫೀಚರ್ ಈ ಸ್ಟೇಟಸ್ ಆರ್ಕೈವ್ (Status Archive) ಆಗಿದೆ.

ಈಗಾಗಲೇ ನಿಮಗೆ ತಿಳಿದಿರುವಂತೆ ಜಗತ್ತಿನ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ WhatsApp ಈಗ ಮತ್ತೊಂದು ಹೊಸ ಫೀಚರ್ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇದನ್ನು ಕಂಪನಿ Status Archive ಎಂದು ಗುರುತಿಸಿದ್ದು ಈಗಾಗಲೇ ಇದರ ಬಗ್ಗೆ ಸಾಕಷ್ಟು ಮಾಹಿತಿಗಳು ಇಂಟರ್ನೆಟ್ ಒಳಗೆ ಹರಿದಾಡುತ್ತಿವೆ. ಅಂದ್ರೆ ನೀವು ಯಾವುದೇ ಗ್ರೂಪ್ ಅಥವಾ ಪರ್ಸನಲ್ ಖಾತೆಯಲ್ಲಿ ಬರುವ ಎಲ್ಲ ರೀತಿಯ ನೋಟಿಫಿಕೇಷನ್‌ಗಳಿಂದ ಎದುರಾಗುವ ಸಮಸ್ಯೆಯನ್ನು ಪೂರ್ತಿಯಾಗಿ ತಪ್ಪಿಸಲು ಈ ವಿಶೇಷ ಫೀಚರ್ ಈ  ಸ್ಟೇಟಸ್ ಆರ್ಕೈವ್ (Status Archive) ಆಗಿದೆ. 

ವಾಟ್ಸಾಪ್ ಚಾಟ್‌ಗಳನ್ನು ಆರ್ಕೈವ್ ವಿಶೇಷತೆಗಳೇನು?  

ಈ ಫೀಚರ್​ನ ವಿಶೇಷತೆ ಅಂದ್ರೆ ಈ ನಿಮ್ಮ ಸ್ಟೇಟಸ್ ಅನ್ನು ಡಿಲೀಟ್ ಮಾಡದೆಯೇ ಗ್ರೂಪ್ ಮತ್ತು ಪರ್ಸನಲ್ ಚಾಟ್ಗಳಿಂದ ಮರೆ ಮಾಚಬಹುದು. ಅಲ್ಲದೆ ಇದು ಕೇವಲ ಸ್ಟೇಟಸ್ ಮಾತ್ರವಲ್ಲ ನಿಮಗಿಷ್ಟ ಬಂದ ಚಾಟ್ ಅನ್ನು ಸಹ ಮರೆ ಮಾಚಬಹುದು. ಮತ್ತೊಂದು ಅಂಶವೆಂದರೆ ನಿಮಗೆ ಯಾವುದೇ ಹೊಸ ಮೆಸೇಜ್ ಪಡೆದರೆ ಅದರ ಯಾವುದೇ ಸೂಚನೆ ಬರದಂತೆ ತಡೆಯುವ ಈ ಫೀಚರ್ ಪೂರ್ತಿಯಾಗಿ ಬಳಕೆಗೆ ಬಂದ ನಂತರವಷ್ಟೇ ಎಷ್ಟು ಪ್ರಯೋಜನಕಾರಿ ಎಂದು ತಿಳಿಯಬಹುದು. ಈ ಫೀಚರ್ ಅನ್ನು ವಾಟ್ಸಾಪ್ ಮುಖ್ಯವಾಗಿ ನಿಮಗೆ ಯಾವುದೇ ರೀತಿಯ ನೋಟಿಫಿಕೇಷನ್ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಇದನ್ನು ಗುರಿಯಾಗಿಸಲಾಗಿದೆ.

WhatsApp ಚಾಟ್‌ಗಳನ್ನು ಆರ್ಕೈವ್ ಮಾಡುವುದು ಹೇಗೆ?

ಹಂತ 1: ಮೊದಲಿಗೆ ಈ ಫೀಚರ್ ಸದ್ಯಕ್ಕೆ ಆಂಡ್ರಾಯ್ಡ್ ಫೋನ್ಗಳಿಗೆ ಲಭ್ಯವಿರುವ ಕಾರಣ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ WhatsApp ಅಪ್ಡೇಟ್ ಮಾಡಿ ತೆರೆಯಿರಿ.

ಹಂತ 2: ಇದರ ನಂತರ ನೀವು ಆರ್ಕೈವ್ ಮಾಡಲು / ಮರೆಮಾಡಲು ಬಯಸುವ ಯಾವುದೇ ನಿಮ್ಮ ಪೆರ್ಸನಲ್ ಅಥವಾ ಗ್ರೂಪ್ ಚಾಟ್ ಮೇಲೆ  ಟ್ಯಾಪ್ ಮಾಡಿ ಬೇಕಿದ್ದರೆ ನೀವು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಚಾಟ್‌ಗಳನ್ನು ಒಟ್ಟಿಗೆ ಆಯ್ಕೆ ಮಾಡಬಹುದು. 

ಹಂತ 3: ಚಾಟ್ ಅನ್ನು ಆಯ್ಕೆ ಮಾಡಿದ ನಂತರ ಡಿಲೀಟ್, ಪಿನ್, ಮ್ಯೂಟ್ ಮತ್ತು ಆರ್ಕೈವ್ ನಂತಹ ಆಯ್ಕೆಗಳನ್ನು ನೀವು ವಾಟ್ಸಾಪ್‌ನ ಮೇಲ್ಭಾಗದಲ್ಲಿ ಕಾಣಬಹುದು.

ಹಂತ 4: ಇದರ ನಂತರ ನಿಮಗೆ ಕಾಣಿಸುವ ಆರ್ಕೈವ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಚಾಟ್ ಪಟ್ಟಿಯ ಮೇಲ್ಭಾಗದಲ್ಲಿ (Archived) ಕಾಣಿಸಿಕೊಳ್ಳುತ್ತದೆ. 

ಹಂತ 4: ಕೊನೆಯದಾಗಿ ನಿಮ್ಮೆಲ್ಲ ಮರೆ ಮಾಚಿದ ಚಾಟ್‌ಗಳನ್ನು ಪರಿಶೀಲಿಸಲು ನೀವು ಆರ್ಕೈವ್ (Archive) ಬಟನ್ ಅನ್ನು ಕ್ಲಿಕ್ ಮಾಡಿ ನೋಡಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo