WhatsApp ಶೀಘ್ರದಲ್ಲೇ ಸ್ಟೇಟಸ್ ಅಪ್‌ಡೇಟ್‌ಗಳಿಗೆ ಉತ್ತರಿಸಲು Reply bar ಫೀಚರ್ ಪರಿಚಯಿಸಲಿದೆ

WhatsApp ಶೀಘ್ರದಲ್ಲೇ ಸ್ಟೇಟಸ್ ಅಪ್‌ಡೇಟ್‌ಗಳಿಗೆ ಉತ್ತರಿಸಲು Reply bar ಫೀಚರ್ ಪರಿಚಯಿಸಲಿದೆ
HIGHLIGHTS

WhatsApp ತಮ್ಮ ಬಳಕೆದಾರರಿಗೆ ಹೊಸ ಪ್ರತ್ಯುತ್ತರ ಪಟ್ಟಿ (Reply Bar) ಎಂಬ ಹೊಸ ಫೀಚರ್ ತರಲು ಕಾರ್ಯನಿರ್ವಹಿಸುತ್ತಿ

ವಾಟ್ಸಾಪ್ ಫೀಚರ್ ಪ್ರಸ್ತುತ ಬೀಟಾ ಪರೀಕ್ಷೆಯಲ್ಲಿದ್ದು ಡೆವಲಪರ್‌ಗಳು ಮತ್ತು ಪರೀಕ್ಷಕರಿಗೆ ಲಭ್ಯವಿದೆ.

ಜಗತ್ತಿನ ಅತಿದೊಡ್ಡ ಮತ್ತು ಜನಪ್ರಿಯ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತಮ್ಮ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಹೊಸ ಅಪ್ಡೇಟ್ ಮತ್ತು ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈಗ ನಿಮ್ಮ ವಾಟ್ಸಾಪ್ ಸ್ಟೇಟಸ್‌ಗಳ ಅಪ್‌ಡೇಟ್‌ಗಳಿಗೆ ಉತ್ತರಿಸಲು ಹೊಸ ಪ್ರತ್ಯುತ್ತರ ಪಟ್ಟಿ (Reply bar) ಎಂಬ ಹೊಸ ಫೀಚರ್ ಆಪಲ್ ಮತ್ತು ಆಂಡ್ರಾಯ್ಡ್ ಡಿವೈಸ್‌ಗಳಿಗೆ ತರಲು ಕಾರ್ಯನಿರ್ವಹಿಸುತ್ತಿದೆ. ಫೀಚರ್ ಪ್ರಸ್ತುತ ಬೀಟಾ ಪರೀಕ್ಷೆಯಲ್ಲಿದ್ದು ಡೆವಲಪರ್‌ಗಳು ಮತ್ತು ಪರೀಕ್ಷಕರಿಗೆ ಲಭ್ಯವಿದೆ.

Also Read: Jio Plan: ಜಿಯೋದ ಈ ಹೊಸ ₹909 ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಉಚಿತ OTT ಸೇವೆಯೊಂದಿಗೆ Unlimited ಡೇಟಾ ಲಭ್ಯ

ಶೀಘ್ರದಲ್ಲೇ ಸ್ಟೇಟಸ್ ಅಪ್‌ಡೇಟ್‌ಗಳಿಗೆ Reply bar ಫೀಚರ್

ಪ್ರತ್ಯುತ್ತರ ಆಯ್ಕೆಯನ್ನು ಪ್ರವೇಶಿಸಲು ಸ್ವೈಪ್-ಅಪ್ ಗೆಸ್ಚರ್‌ನ ಅಗತ್ಯವನ್ನು ತೆಗೆದುಹಾಕುವ ಪ್ರತ್ಯುತ್ತರ ಪಟ್ಟಿಯ ಹೊಸ ವಿನ್ಯಾಸವು ಬಳಕೆದಾರರ ನಡುವೆ ಹೆಚ್ಚು ಕ್ರಿಯೇಟಿವ್ ಚಾಟ್ ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂದು ವಾಟ್ಸಾಪ್ ಸುದ್ದಿ ಮತ್ತು ಫೀಚರ್ ಅಪ್ಡೇಟ್ ನೀಡುವ ವೆಬ್‌ಸೈಟ್ WaBetaInfo ತಿಳಿಸಿದೆ. ಇದರ ಪ್ರತ್ಯುತ್ತರ ಪಟ್ಟಿಯು ಯಾವಾಗಲೂ ಗೋಚರಿಸುವುದರಿಂದ ಬಳಕೆದಾರರು ಸ್ಟೇಟಸ್ ಅಪ್ಡೇಟ್ಗಳೊಂದಿಗೆ ಹೆಚ್ಚು ಸುಲಭವಾಗಿ ಚಾಟಿಂಗ್ ಮಾಡಲು ಸಾಧ್ಯವಾಗುತ್ತದೆ. ವಾಟ್ಸಾಪ್ ಇತ್ತೀಚೆಗೆ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದ ನಂತರ ಬದಲಾವಣೆಯಾಗಿದೆ.

WhatsApp Reply bar

ಉದಾಹರಣೆಗೆ ಉನ್ನತ ಗುಣಮಟ್ಟದ ಇಮೇಜ್ ಮತ್ತು ವೀಡಿಯೊಗಳನ್ನು ಸ್ಟೇಟಸ್ ಅಪ್‌ಡೇಟ್‌ಗಳಾಗಿ ಪೋಸ್ಟ್ ಮಾಡುವ ಸಾಮರ್ಥ್ಯದೊಂದಿಗೆ ಬಳಕೆದಾರರಿಗೆ ವೀಡಿಯೊ ಸ್ಟೇಟಸ್ ಆಪ್ಡೇಟ್ಗಳನ್ನು ಫಾರ್ಮ್ಯಾಟ್‌ನಲ್ಲಿ ಲಂಬವಾಗಿರುವ ಪಟ್ಟಿಯಲ್ಲಿ ಫಿಲ್ಟರ್ ಮಾಡುವ ಮತ್ತು ವ್ಯವಸ್ಥೆ ಮಾಡುವ ಆಯ್ಕೆಯೊಂದಿಗೆ ಅಪ್ಡೇಟ್ ಮಾಡಿದ ಪ್ರತ್ಯುತ್ತರ ಪಟ್ಟಿಯ (Reply bar) ವರದಿಗಳ ಸ್ಕ್ರೀನ್‌ಶಾಟ್ಗಳು ಪ್ರಸ್ತುತ ಆಪಲ್ ವಾಟ್ಸಾಪ್ ಬೀಟಾದಿಂದ ಬಂದಿದ್ದರೂ ಆಂಡ್ರಾಯ್ಡ್ ಬೀಟಾ ಪರೀಕ್ಷಕರು ಸಹ ಈ ಫೀಚರ್ ಅನ್ನು ಪ್ರವೇಶಿಸಬಹುದು.

ಹೊಸ ರಿಪ್ಲೇ ಬಾರ್ ಬಳಸುವುದು ಹೇಗೆ?

ಈ ಹೊಸ ಅಪ್‌ಗ್ರೇಡ್ ಮಾಡಲಾದ ಫೀಚರ್ ಅನ್ನು ಪಡೆಯಲು ಬಯಸುವ ಬಳಕೆದಾರರು ಡಿವೈಸ್‌ಗಳಿಗೆ ಲೇಟೆಸ್ಟ್ ವಾಟ್ಸಾಪ್ ಬೀಟಾ ಆವೃತ್ತಿಗಳನ್ನು ಡೌನ್‌ಲೋಡ್ ಮಾಡಿಕೊಂಡಿರಬೇಕು. ಏಕೆಂದರೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಜನರು ಈ ಹೊಸ ಪ್ರತ್ಯುತ್ತರ ಪಟ್ಟಿಯನ್ನು ಬಳಸಲು ಸಾಧ್ಯವಾಗುತ್ತದೆ. ಇದು ಸುಧಾರಿತ ಇಂಟರ್ಫೇಸ್‌ನಿಂದ ಹೆಚ್ಚಿನ ಪ್ರೇಕ್ಷಕರಿಗೆ ಪ್ರಯೋಜನವನ್ನು ನೀಡುತ್ತದೆ. ವಾಟ್ಸಾಪ್ ಆಡಿಯೊ ಮೆಸೇಜ್ಗಳನ್ನು ಒಮ್ಮೆ ವೀಕ್ಷಿಸುವುದನ್ನು ಸಹ ಪರಿಚಯಿಸುತ್ತಿದೆ. ಇಮೇಜ್ ಮತ್ತು ವೀಡಿಯೊಗಳನ್ನು ಒಮ್ಮೆ ವೀಕ್ಷಿಸಿದಂತೆ ಬಳಕೆದಾರರು ಆಡಿಯೊವನ್ನು ಒಮ್ಮೆ ಮಾತ್ರ ಕೇಳಿಸಿ ಕಣ್ಮರೆಯಾಗುವಂತಹ ಫೀಚರ್ ಸಹ ತರಲು ಯೋಚಿಸುತ್ತಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo