WhatsApp Customize Chats: ವಾಟ್ಸಾಪ್ ಈಗ ಹೊಚ್ಚ ಫೀಚರ್ ಮೇಲೆ ಶೀಘ್ರದಲ್ಲೇ ಮುಂಬರುವ ಅಪ್ಡೇಟ್ ಮೂಲಕ ಶೀಘ್ರದಲ್ಲೇ ಈ ಹೊಸ ಫೀಚರ್ ಲಭ್ಯವಾಗಲಿದೆ. ಪ್ರತಿದಿನ ಜನಪ್ರಯ ಇನ್‌ಸ್ಟಂಟ್ ಮೆಸೇಜಿಂಗ್ ಅಪ್ಲಿಕೇಶನ್ WHATSAPP ಉತ್ತಮಗೊಳ್ಳುತ್ತಲೇ ಇರುತ್ತದೆ. ನಿಮ್ಮ ಚಾಟ್‌ಗಳನ್ನು ಎಡಿಟ್ ಮಾಡಲು ಅವಕಾಶ ನೀಡುವ ಹೊಸ ಮುಂಬರುವ ಫೀಚರ್‌ನೊಂದಿಗೆ WhatsApp ಈಗ ಇನ್ನಷ್ಟು ಉತ್ತಮಗೊಳ್ಳಲಿದೆ. ಈ ಫೀಚರ್‌ನೊಂದಿಗೆ ಬಳಕೆದಾರರು ತಮ್ಮ ಅಭಿರುಚಿಗೆ ತಕ್ಕಂತೆ ಪಠ್ಯಗಳನ್ನು ಎಡಿಟ್ ಮಾಡಲು ನಿಮಗೆ ಅನುಮತಿಸುತ್ತದೆ.
ಈ ಫೀಚರ್ ಗ್ರಾಹಕರಿಗೆ ಹೊಸ ಟೆಕ್ಸ್ಟ್ ಎಡಿಟಿಂಗ್ ಅನುಭವವನ್ನು ನೀಡುತ್ತದೆ ಎಂದು WABetainfo.com ಹೇಳುತ್ತದೆ. WhatsApp ಈಗಾಗಲೇ ಬೀಟಾ ಪರೀಕ್ಷಕರಿಗೆ ಈ ಟೆಕ್ಸ್ಟ್ ಎಡಿಟಿಂಗ್ ಫೀಚರ್ ಲಭ್ಯವಾಗುವಂತೆ ಮಾಡಿರುವುದರಿಂದ ಅವರು ಪ್ರಸ್ತುತ ಇದನ್ನು ಪ್ರಯತ್ನಿಸಬಹುದು. ಮುಂಬರುವ ಅಪ್ಡೇಟ್ ಮೂಲಕ ಶೀಘ್ರದಲ್ಲೇ ಈ ಹೊಸ ಫೀಚರ್ ಲಭ್ಯವಾಗುತ್ತದೆ ಎಂದು ಹೇಳಲಾಗಿದೆ.
ಇದು ಟೆಕ್ಸ್ಟ್ ಎಡಿಟಿಂಗ್ ಫೀಚರ್ ಆದರೂ ಅದಕ್ಕು ಮೀರಿದ ವಿಶೇಷತೆಗಳನ್ನು ಒಳಗೊಂಡಿದೆ ಎಂದು ವರದಿಗಳು ಹೇಳುತ್ತವೆ. ಈ ಫೀಚರ್ ಸಂಪೂರ್ಣ ಹೊಸ ಎಡಿಟಿಂಗ್ ಟೂಲ್ ಆಗಿದ್ದು ಇದರಿಂದ ಬಳಕೆದಾರರು WhatsApp ಮೂಲಕ ಹೆಚ್ಚಿನ ಫೈಲ್‌ಗಳನ್ನು ಎಡಿಟ್ ಮಾಡಲು ಸಾಧ್ಯವಾಗುತ್ತದೆ. ಟೆಕ್ಸ್ಟ್ ಗಳು, GIF ಗಳು, ಇಮೇಜ್ಗಳು ಮತ್ತು ವೀಡಿಯೊ ಫೈಲ್‌ಗಳು ಸೇರಿದಂತೆ ಎಲ್ಲಾ ಫೈಲ್‌ಗಳನ್ನು ಬಳಕೆದಾರರಿಗೆ ಎಡಿಟ್ ಮಾಡಲು ಸಾಧ್ಯವಾಗುತ್ತದೆ.
ಬೀಟಾ ಆವೃತ್ತಿಯು ಪ್ರಸ್ತುತ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಾಗಿ ಎಂದು ಸ್ಕ್ರೀನ್‌ಶಾಟ್ ನಲ್ಲಿ ತಿಳಿಸಲಾಗಿದೆ. ಮತ್ತೊಂದೆಡೆ IOS ಆವೃತ್ತಿಯನ್ನು ಪ್ರಸ್ತುತ ಅಭಿವೃದ್ಧಿಪಡಿಸಲಾಗುತ್ತಿದೆ. ಫಾಂಟ್‌ಗಳ ಪಟ್ಟಿಯು ಬಳಕೆದಾರರಿಗೆ ವಿವಿಧ ಫಾಂಟ್ ಸ್ಟೈಲ್ಗಳಿಂದ ಆಯ್ಕೆ ಮಾಡುವ ಅವಕಾಶವನ್ನು ನೀಡುತ್ತದೆ. ಅವರು ಪೂರ್ವನಿಗದಿಗಳನ್ನು ಬಳಸಲು ಬಯಸದಿದ್ದರೆ ಅವರು ತಮ್ಮ ಸ್ವಂತ ಸ್ಟೈಲ್ನಲ್ಲೆ ಫಾಂಟ್‌ಗಳನ್ನು ಎಡಿಟ್ ಮಾಡಬಹುದು.
ಎಡಿಟ್ ಮಾಡುವ ಆಯ್ಕೆಗಳ ಮೂಲಕ ಬಳಕೆದಾರರು ವೀಡಿಯೊಗಳು, ಇಮೇಜ್ಗಳು ಮತ್ತು GIF ಗಳಿಗೆ ಟೆಕ್ಸ್ಟ್ ಗಳನ್ನು ಸೇರಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ನೀವು ಶೀಘ್ರದಲ್ಲೇ ನಿಮ್ಮ ಸ್ವಂತ ಟೆಕ್ಸ್ಟ್ ಗಳನ್ನು ಎಡಿಟ್ ಮಾಡಲು ಮತ್ತು ಹಂಚಿಕೊಳ್ಳುವ ಮೊದಲು ಅವುಗಳನ್ನು ನಿಮ್ಮ ಮೀಡಿಯಾ ಫೈಲ್‌ಗಳಿಗೆ ಸೇರಿಸಲು ಸಾಧ್ಯವಾಗುತ್ತದೆ ಎಂದು ಇದು ಸೂಚಿಸುತ್ತದೆ.