digit zero1 awards

WhatsApp Update: ಈಗ ಈ ಹೊಸ ಫೀಚರ್ ಪಡೆಯಲು ಯಾವುದೇ ಚಾರ್ಜ್ ನೀಡಬೇಕಿಲ್ಲ

WhatsApp Update: ಈಗ ಈ ಹೊಸ ಫೀಚರ್ ಪಡೆಯಲು ಯಾವುದೇ ಚಾರ್ಜ್ ನೀಡಬೇಕಿಲ್ಲ
HIGHLIGHTS

ಈ ಫೀಚರ್ iOS ಗಳಿಗಾಗಿದ್ದು ಆಂಡ್ರಾಯ್ಡ್‌ ಫೋನ್ಗಳಿಗೆ ಅಧಿಕೃತವಾಗಿ ಯಾವಾಗ ರೋಲ್ಔಟ್ ಆಗುತ್ತೆ ಅನ್ನೋ ಮಾಹಿತಿ ಇನ್ನು ನೀಡಿಲ್ಲ.

ನಿಮ್ಮ ಗ್ರೂಪ್'ಗೆ ಯಾರ್ಯಾರ್ನ ಸೇರಿಸಬೇಕೋ ಯಾರ್ಯಾರ್ನ ಸೇರಿಸಬಾರದು ಎಂಬುದನ್ನು ನಿರ್ಧರಿಸಬಹುದು.

ಈಗಾಗಲೇ ನಿಮಗೆ ತಿಳಿದಿರುವಂತೆ ಕಾಲ್ ವೈಟಿಂಗ್ ಫೀಚರ್ ಸಾಮಾನ್ಯವಾಗಿ ಮಾಸಿಕ ಶುಲ್ಕವನ್ನು ತೆಕ್ಲೆಕಂ ಆಪರೇಟರ್ಗಳು ವಸೂಲಿ ಮಾಡುತ್ತವೆ. ಆದರೆ ಸದ್ಯಕ್ಕೆ iOS ಫೋನ್ಗಳಿಗೆ ಲಭ್ಯವಿರುವ ಈ ಈ ಹೊಸ ಫೀಚರ್ ಕಾಲ್ ವೈಟಿಂಗ್ ಪಡೆಯಲು ಯಾವುದೇ ಚಾರ್ಜ್ ನೀಡಬೇಕಿಲ್ಲ. ಆಂಡ್ರಾಯ್ಡ್ ಬಳಕೆದಾರರಿಗೆ ಶೀಘ್ರದಲ್ಲೇ ಸಿಗಲಿದೆ ಆದರೆ ಇದು ಇನ್ನು ಬೀಟಾ ವರ್ಷನಲ್ಲಿದೆ. ಇದನ್ನು ಇತ್ತೀಚಿನ ಈ ಅಪ್ಡೇಟ್ 2.19.120 ಆವೃತ್ತಿಗಳಿಂದ  ಹೊರತರಲಾಗುತ್ತಿದೆ. ಇದರೊಂದಿಗೆ ಅಪ್ಡೇಟೆಡ್ ಚಾಟ್ ಸ್ಕ್ರೀನ್ ಅನ್ನು ಸಹ ಸುಧಾರಿಸಲಾಗಿದೆ ಇದರಿಂದ ನೀವೊಂದು ಕರೆಯಲ್ಲಿದ್ದಾಗಲು ಸಹ ವಾಟ್ಸಾಪ್ ಚಾಟ್ ಮೆಸೇಜ್ಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.

WhatsApp ಕರೆಗಳನ್ನು ಮಾಡುವ ಬಳಕೆದಾರರಿಗೆ ಲಾಭ: 

ಐಒಎಸ್ನಲ್ಲಿ ವಾಟ್ಸಾಪ್ ಚಾಲನೆಯಲ್ಲಿರುವಾಗ ಬಳಕೆದಾರರು ಕಾಲ್ ವೈಟಿಂಗ್ ಕರೆಗಳ ನಡುವೆ ನಡೆಯುತ್ತಿರುವ ಆಡಿಯೊ ಕರೆಯನ್ನು ಆಲಿಸಬವುದು. ಕರೆ ಮಾಡಲು ಹೆಚ್ಚಾಗಿ ವಾಟ್ಸಾಪ್ ಕರೆಗಳನ್ನು ಆದ್ಯತೆ ನೀಡುವ ಬಳಕೆದಾರರಿಗೆ ವಾಟ್ಸಾಪ್ನ ಈ ವೈಶಿಷ್ಟ್ಯದ ಪ್ರಯೋಜನವನ್ನು ನೀಡಿದೆ. ಈ ಫೀಚರ್ ಬಳಕೆದಾರರಿಗೆ ಕಾಲ್ ವೈಟಿಂಗ್ ಕರೆಗಳನ್ನು ಕಡಿತಗೊಳಿಸಲು ಮತ್ತು ಕರೆಗಳನ್ನು ನಿಲ್ಲಿಸಿ ಹೊಸ ಕರೆಗಳನ್ನು ಸ್ವೀಕರಿಸಲು ಅನುಮತಿಸುತ್ತದೆ. ಸದ್ಯಕ್ಕೆ ಈ ಫೀಚರ್ iOS ಗಳಿಗಾಗಿದ್ದು ಆಂಡ್ರಾಯ್ಡ್‌ ಫೋನ್ಗಳಿಗೆ ಅಧಿಕೃತವಾಗಿ ಯಾವಾಗ ರೋಲ್ಔಟ್ ಆಗುತ್ತೆ ಅನ್ನೋ ಮಾಹಿತಿ ಇನ್ನು ನೀಡಿಲ್ಲ.

ನೀವು iOS ಬಳಕೆದಾರರಾಗಿದ್ದರೆ ಮತ್ತು ವಾಟ್ಸಾಪ್ನ ಈ ವೈಶಿಷ್ಟ್ಯವನ್ನು ಬಳಸಲು ಬಯಸಿದರೆ ನೀವು ಮೊದಲು ಆಪ್ಸ್ಟೋರ್ಗೆ ಹೋಗಿ ವಾಟ್ಸಾಪ್ ಅಪ್ಡೇಟ್ಗಾಗಿ ಹುಡುಕಿ. ಸುಮಾರು 85mb ಸೈಜ್ ಆಗಿರುವ ಈ ಅಪ್ಡೇಟ್ Install ಮಾಡಿದ ನಂತರ ನೀವು ವಾಟ್ಸಾಪ್ ಕಾಲ್ ವೈಟಿಂಗ್ ವೈಶಿಷ್ಟ್ಯವನ್ನು ಬಳಸಬಹುದು. ಐಒಎಸ್ಗಾಗಿ ಈ ನವೀಕರಣದಲ್ಲಿ Privacy ಸಹ ಉಲ್ಲೇಖಿಸಲಾಗಿದ್ದು iOS ಬಳಕೆದಾರರು ವಾಟ್ಸಾಪ್ ಸೆಟ್ಟಿಂಗ್‌ಗಳಿಗೆ ಹೋಗಿ ನಿಮ್ಮ ಗ್ರೂಪ್'ಗೆ ಯಾರ್ಯಾರ್ನ ಸೇರಿಸಬೇಕೋ ಯಾರ್ಯಾರ್ನ ಸೇರಿಸಬಾರದು ಎಂಬುದನ್ನು ನಿರ್ಧರಿಸಬಹುದು. ಆದಾಗ್ಯೂ ಆಂಡ್ರಾಯ್ಡ್ ಮತ್ತು ಐಒಎಸ್ಗಾಗಿ ಕಂಪನಿಯು ಕೆಲವು ದಿನಗಳ ಹಿಂದೆ ಈ ವೈಶಿಷ್ಟ್ಯವನ್ನು ಹೊರತಂದಿದೆ.

ಮೆಸೇಜ್ ಡಿಲೀಟ್ ಮಾಡಲು ಹೊಸ ಆಯ್ಕೆ ಬರಬಹುದು:

ಮತ್ತೊಂದೆಡೆಯಲ್ಲಿ WABetaInfo ಅನ್ನು ನಂಬಿದರೆ ಆಂಡ್ರಾಯ್ಡ್ ಬೀಟಾದಲ್ಲಿ ಮೆಸೇಜ್ಗಳನ್ನು ಡಿಲೀಟ್ ಮಾಡಲು ಕಂಪನಿಯು ಹೊಸ ಆಯ್ಕೆಯನ್ನು ಪರೀಕ್ಷಿಸುತ್ತಿದೆ. ಇದೀಗ ಅದು ಪರೀಕ್ಷೆಯ ಆರಂಭಿಕ ಹಂತದಲ್ಲಿದೆ ಆದ್ದರಿಂದ ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಈ ವೈಶಿಷ್ಟ್ಯದ ರೋಲ್ಔಟ್ ನಂತರ ಬಳಕೆದಾರರು ಮೆಸೇಜ್ ಎಷ್ಟು ಮೆಸೇಜ್ ಮತ್ತು ಎಷ್ಟು ಸಮಯದವರೆಗೆ ಡಿಲೀಟ್ ಮಾಡಬವುದು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಮೆಸೇಜ್ ಡಿಲೀಟ್ 1 ಗಂಟೆ, 1 ದಿನ, 1 ವಾರ, 1 ತಿಂಗಳು ಮತ್ತು 1 ವರ್ಷದ ಆಯ್ಕೆಯನ್ನು ನೀಡಬಹುದು. ಇದಕ್ಕಾದ ಅಧಿಕೃತ ಮಾಹಿತಿಗಾಗಿ ನಾವು ನೀವೇಲ್ಲ ಇನ್ನು ಕಾಯಬೇಕಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo