WhatsApp Redesigned: ವಾಟ್ಸಾಪ್ ಹೊಸ ಡಿಸೈನ್ ಶೀಘ್ರದಲ್ಲೇ ಲಭ್ಯ! ಸ್ಕ್ರೀನ್ ಮೇಲೆ ಈ ರೀತಿ ಸ್ಟೇಟಸ್ ಕಾಣಬಹುದು!

WhatsApp Redesigned: ವಾಟ್ಸಾಪ್ ಹೊಸ ಡಿಸೈನ್ ಶೀಘ್ರದಲ್ಲೇ ಲಭ್ಯ! ಸ್ಕ್ರೀನ್ ಮೇಲೆ ಈ ರೀತಿ ಸ್ಟೇಟಸ್ ಕಾಣಬಹುದು!
HIGHLIGHTS

WhatsApp ಆಂಡ್ರಾಯ್ಡ್ ವಾಟ್ಸಾಪ್‌ಗಾಗಿ ಬೀಟಾ ಚಾನೆಲ್ ಓನರ್ ಟ್ರಾನ್ಸ್‌ಫರ್ ಆಯ್ಕೆಯನ್ನು ಪರಿಚಯಿಸಲಿದೆ.

ವಿಶ್ವದಲ್ಲಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ WhatsApp

ಈ ವರ್ಷ WhatsApp ಲೇಟೆಸ್ಟ್ ಅಪ್ಡೇಟ್ ಮತ್ತು ರಿಡಿಸೈನಿಂಗ್ ಕುರಿತಾದ ಹೆಚ್ಚಿನ ವಿವರಗಳು ಇಲ್ಲಿವೆ.

WhatsApp Redesigned: ವಿಶ್ವದಲ್ಲಿ ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಮತ್ತು ಹೆಚ್ಚು ಬಳಸಿಕೆಯಲ್ಲಿರುವ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ WhatsApp ಈಗ ತಮ್ಮ ಬಳಕೆದಾರರಿಗಾಗಿ ಒಂದೇ ಸ್ಥಳದಲ್ಲಿ ಸ್ಟೇಟಸ್ ಪ್ರೀವ್ಯೂ ಮತ್ತು ಚಾನಲ್‌ಗಾಗಿ ವಾಟ್ಸಾಪ್ ಮರುವಿನ್ಯಾಸಗೊಳಿಸಲಾದ ಸ್ಟೇಟಸ್ ಬಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಹೊಸ ರಿಡಿಸೈನಿಂಗ್ ಅದರ ಬಳಕೆದಾರರಿಗೆ ಪ್ರವೇಶವನ್ನು ಸುಧಾರಿಸುತ್ತದೆ. ಪ್ರಸ್ತುತ ಅಪ್ಲಿಕೇಶನ್‌ನ ಬೀಟಾ ಪರೀಕ್ಷಕರಿಗೆ ಪ್ರವೇಶಿಸಬಹುದಾಗಿದೆ. ಅಲ್ಲದೆ ಈ ಫೀಚರ್ ಶೀಘ್ರದಲ್ಲೇ ಮೊದಲು ಬೀಟಾ ಬಳಕೆದಾದರಿಗೆ ಹೊರಬರುವ ನಿರೀಕ್ಷೆಗಳಿವೆ. ಈ ವರ್ಷ WhatsApp ಲೇಟೆಸ್ಟ್ ಅಪ್ಡೇಟ್ ಮತ್ತು ರಿಡಿಸೈನಿಂಗ್ ಕುರಿತಾದ ಹೆಚ್ಚಿನ ವಿವರಗಳು ಇಲ್ಲಿವೆ.

Also Read: 5G ಡೇಟಾ ಮತ್ತು Unlimited ಕರೆಯೊಂದಿಗೆ ಉಚಿತ Disney+ Hotstar ನೀಡುವ Airtel ಬೆಸ್ಟ್ ಪ್ಲಾನ್‌ಗಳು!

ಲೇಟೆಸ್ಟ್ WhatsApp Redesigned ಸ್ಟೇಟಸ್ ಬಾರ್

WABetaInfo ವರದಿಯ ಪ್ರಕಾರ WhatsApp ಬಳಕೆದಾರರು ಮುಂಬರುವ ಆವೃತ್ತಿಯ ಅಪ್ಲಿಕೇಶನ್‌ನಲ್ಲಿ ಮರುವಿನ್ಯಾಸಗೊಳಿಸಲಾದ ಸ್ಟೇಟಸ್ ಅಪ್ಡೇಟ್ ಟ್ರೇ ಇಂಟರ್ಫೇಸ್ ಅನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ. ಅಪ್‌ಡೇಟ್‌ಗಳ ಟ್ಯಾಬ್‌ನ ಮೇಲ್ಭಾಗದಲ್ಲಿ ಇದ್ದರೂ ಸಹ ಟ್ರೇ ಅನ್ನು ಪ್ರವೇಶಿಸಲು ಸುಲಭವಾಗುತ್ತದೆ ಮತ್ತು ಟ್ಯಾಬ್ ತೆರೆದಾಗ ಹೆಚ್ಚು ಪ್ರಾಮುಖ್ಯವಾಗಿರುತ್ತದೆ. ಬಳಕೆದಾರರು ಶೇರ್ ಮಾಡುವ ಪ್ರತಿ ಸ್ಟೇಟಸ್ ಅಪ್ಡೇಟ್ ಅನ್ನು ಪ್ರತ್ಯೇಕವಾಗಿ ತೆರೆಯಬೇಕಾಗಿಲ್ಲ ಇದು ಮೊದಲನೆಯ ಥಂಬ್‌ನೇಲ್ ಅನ್ನು ವೀಕ್ಷಿಸಲು ಅವರಿಗೆ ಅನುಮತಿಸುತ್ತದೆ.

ಸ್ಟೇಟಸ್ ಅಪ್‌ಡೇಟ್ ಟ್ರೇಗಾಗಿ ಭವಿಷ್ಯದ UI ಮೂಲಕ ಬಳಕೆದಾರರ ಅನುಭವವನ್ನು ಹೆಚ್ಚಿಸಲಾಗುತ್ತದೆ. ಶೇರ್ ಮಾಡಿದ ಅಪ್‌ಡೇಟ್‌ಗಳ ಸುಲಭವಾದ ಥಂಬ್‌ನೇಲ್ ಪ್ರೀವ್ಯೂ ಸ್ಟೇಟಸ್ ಅಪ್ಡೇಟ್ಗಳಿಗಾಗಿ ಹೊಸ ಲೇಔಟ್‌ನಲ್ಲಿ ಪ್ರೊಫೈಲ್ ಇಮೇಜ್‌ನೊಂದಿಗೆ ಬದಲಾಯಿಸಲಾಗಿದೆ. ಇದು ಬಹಳಷ್ಟು ಬಳಕೆದಾರರಿಗೆ ಹಿಂದೆ ಅಸಮಾಧಾನವನ್ನು ಉಂಟುಮಾಡಿತು ಈಗ ಈ ಮಾರ್ಪಾಡಿನ ಪರಿಣಾಮವಾಗಿ ಬಳಕೆದಾರರು ತಮ್ಮ ಬ್ರೌಸಿಂಗ್ ಅನುಭವವನ್ನು ಹೆಚ್ಚಿಸಲಿದೆ. ಭವಿಷ್ಯದ ಟ್ರೇನಲ್ಲಿಯೇ ಸ್ಟೇಟಸ್ ಅಪ್ಡೇಟ್ ದೊಡ್ಡ ಥಂಬ್‌ನೇಲ್ ಅನ್ನು ವೀಕ್ಷಿಸಲು ಅವಕಾಶ ನೀಡುವ ಮೂಲಕ ಗ್ರಾಹಕರ ಚಿಂತೆಗಳನ್ನು ನಿವಾರಿಸಲು WhatsApp ಯೋಜಿಸಿದೆ.

WhatsApp ಚಾನಲ್ ಓನರ್ ಟ್ರಾನ್ಸ್‌ಫರ್ ಅಪ್ಡೇಟ್

WhatsApp ಆಂಡ್ರಾಯ್ಡ್ ವಾಟ್ಸಾಪ್‌ಗಾಗಿ ಬೀಟಾ ಚಾನೆಲ್ ಓನರ್ ಟ್ರಾನ್ಸ್‌ಫರ್ ಆಯ್ಕೆಯನ್ನು ಪರಿಚಯಿಸಲಿದೆ. ಇದು ಪ್ರಸ್ತುತ ಮಾಲೀಕರಿಗೆ ಹೊಸ ಅರ್ಹ ಬಳಕೆದಾರರನ್ನು ಆಯ್ಕೆ ಮಾಡಲು ಮತ್ತು ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ. ಅಂಗೀಕಾರದ ನಂತರ ಹೊಸ ಮಾಲೀಕರು ಸೆಟ್ಟಿಂಗ್‌ಗಳು ಮತ್ತು ಮಾಹಿತಿಯನ್ನು ನಿರ್ವಹಿಸುವುದು, ಚಾನಲ್ ಅನ್ನು ಡಿಲೀಟ್ ಮಾಡುವುದು ಮತ್ತು ಇತರ ಅಡ್ಮಿನ್ ವಜಾ ಮಾಡುವುದು ಸೇರಿದಂತೆ ಸಂಪೂರ್ಣ ಸೂಪರ್ ಅಡ್ಮಿನ್ ರೈಟ್ ಪಡೆಯುತ್ತಾರೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo