WhatsApp Pinned Message Feature: ಜನಗತ್ತಿನ ಅತಿ ಜನಪ್ರಿಯ ಮತ್ತು ಮೆಟಾ ಮಾಲೀಕತ್ವದ ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ತಮ್ಮ ಲೇಟೆಸ್ಟ್ ಫೀಚರ್ ಪಿನ್ಡ್ ಮೆಸೇಜ್ ಫೀಚರ್ (Pinned Message Feature) ಅನ್ನು ತಮ್ಮ ಬಳಕೆದಾರರಿಗಾಗಿ ಅನಾವರಣಗೊಳಿಸಿದೆ. ಇದೊಂದು ವೈಯಕ್ತಿಕ ಮತ್ತು ಗ್ರೂಪ್ ಚಾಟ್‌ಗಳ ಮೆಸೇಜ್‌ಗಳನ್ನು ಪಿನ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಹೊಸ ಕಾರ್ಯಚಟುವಟಿಕೆಯಲ್ಲಿ ನೀವು ನಿಮ್ಮ ಮುಖ್ಯವಾದ ಸಂದೇಶಗಳನ್ನು ಹೈಲೈಟ್ ಮಾಡಲು ಮತ್ತು ಯಾವುದೇ ಸಮಯದಲ್ಲಿ ಅವುಗಳನ್ನು ಸುಲಭವಾಗಿ ಸಾಮಾನ್ಯಗೊಳಿಸಲು ಅನುಮತಿಸುವ ಮೂಲಕ ಬಳಕೆದಾರರ ಅನುಕೂಲತೆಯನ್ನು ವಾಟ್ಸಾಪ್ ಮತ್ತಷ್ಟು ಹೆಚ್ಚಿಸಿದೆ.
Also Read: JioTV Premium Plans: ಜಿಯೋಟಿವಿಗಾಗಿ Affordable ಪ್ರೀಮಿಯಂ ಪ್ಲಾನ್‌ಗಳ ಬಿಡುಗಡೆ! ಬೆಲೆ ಮತ್ತು ಪ್ರಯೋಜಗಳೇನು?
ಪ್ರಸ್ತುತ ಈ ಫೀಚರ್ ಅನ್ನು ಬಳಕೆದಾರರು ತಮ್ಮ ಆಂಡ್ರಾಯ್ಡ್, ಆಪಲ್ ಮತ್ತು Web/Desktop ಆವೃತ್ತಿಗಳಲ್ಲಿ ಬಳಕೆದಾರರಿಗೆ ಪಿನ್ ಮಾಡಲಾದ ಸಂದೇಶಗಳ ಫೀಚರ್ ಲಭ್ಯವಿದೆ. ಇದು ಪಠ್ಯ, ಪೋಲ್, ಚಿತ್ರಗಳು, ಎಮೋಜಿಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಎಲ್ಲಾ ಸಂದೇಶ ಪ್ರಕಾರಗಳನ್ನು ಬೆಂಬಲಿಸುತ್ತದೆ. ಬಳಕೆದಾರರು ಬಯಸಿದ ಸಂದೇಶದ ಮೇಲೆ ನೇರವಾಗಿ ದೀರ್ಘವಾಗಿ ಒತ್ತಿ ಮತ್ತು ಸಂದರ್ಭ ಮೆನುವಿನಿಂದ ಪಿನ್ ಆಯ್ಕೆ ಮಾಡುವ ಮೂಲಕ ಸಂದೇಶಗಳನ್ನು ಪರಿಣಾಮಕಾರಿಯಾಗಿ ಪಿನ್ ಮಾಡಬಹುದು. ಈ ರೀತಿ ಸದ್ಯಕ್ಕೆ 3 ಚಾಟ್ ಅಥವಾ ಚಟುವಟಿಕೆಗಳನ್ನು ನೀವು ಪಿನ್ ಮಾಡಬಹುದು.
ವಾಟ್ಸಾಪ್ ಬಹು ಅವಧಿಯ ಆಯ್ಕೆಗಳನ್ನು ನೀಡುವ ಮೂಲಕ ಸಂದೇಶಗಳನ್ನು ಪಿನ್ ಮಾಡುವಲ್ಲಿ ನಮ್ಯತೆಯನ್ನು ಖಚಿತಪಡಿಸುತ್ತದೆ. ಆದರೆ ಈ ಮೆಸೇಜ್ ಅನ್ನು ಬಳಕೆದಾರರು ಪ್ರಸ್ತುತ 24 ಗಂಟೆಗಳು, 7 ದಿನಗಳು ಅಥವಾ 30 ದಿನಗಳವರೆಗೆ ನಿಗದಿ ಮಾಡಬಹುದು. ಇದು ಬಳಕೆದಾರರಿಗೆ ಮೆಸೇಜ್ ಎಷ್ಟು ಸಮಯದವರೆಗೆ ಪಿನ್ ಆಗಿರುತ್ತದೆ ಎಂಬುದನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ. ವಿವಿಧ ಅಗತ್ಯಗಳನ್ನು ಪೂರೈಸುತ್ತದೆ. ಪಿನ್ನಿಂಗ್ ಪ್ರಕ್ರಿಯೆಯಲ್ಲಿ ಸರಳವಾದ ಬ್ಯಾನರ್ ಕಾಣಿಸಿಕೊಳ್ಳುತ್ತದೆ. ಬಳಕೆದಾರರು ತಮ್ಮ ಆದ್ಯತೆಯ ಅವಧಿಯನ್ನು ಆಯ್ಕೆ ಮಾಡಲು ಸುಲಭವಾಗುತ್ತದೆ.
ಬಳಕೆದಾರರು ಯಾವುದೇ ರೀತಿಯ ಪಠ್ಯ, ಪೋಲ್, ಎಮೋಜಿ ಮತ್ತು ಇತರೆ ಮೆಸೇಜ್ ಅಥವಾ ಬೇರೆ ಚಟುವಟಿಕೆಗಳನ್ನು ಪಿನ್ ಮಾಡಬಹುದು. ಇದಕ್ಕಾಗಿ ನೀವು ಮೆನುಗೆ ಹೋಗಿ ‘ಪಿನ್’ ಮೇಲೇ ಕ್ಲಿಕ್ ಮಾಡಿ ನಿಮಗಿಷ್ಟ ಬಂದ ಚಟುವಟಿಗಳನ್ನು ಪಿನ್ ಮಾಡಬಹುದು. ಆಪಲ್ ಫೋನ್‌ನಲ್ಲಿ ಪಿನ್ ಮಾಡಲು ಬಯಸುವವವರು ಚಾಟ್‌ನ ಬಲಭಾಗದಲ್ಲಿ ಸ್ವೈಪ್ ಮಾಡಿ ಪಡೆಯಬಹುದು. ಇದರ ಕ್ರಮವಾಗಿ ಆಂಡ್ರಾಯ್ಡ್ ಬಳಕೆದಾದರಿಗೆ ಪಿನ್ ಆಯ್ಕೆಯನ್ನು ನೀಡಲಾಗಿದೆ. ಅಲ್ಲದೆ ಗ್ರೂಪ್ ಅಡ್ಮಿನ್ ಸಹ ತಮ್ಮ ಅಥವಾ ಕೆಲವೊಂದು ಸದಸ್ಯರ ಮೆಸೇಜ್ ಪಿನ್ ಮಾಡಲು ಆಯ್ಕೆ ಮಾಡಬಹುದು. ಆದರೆ ವಾಟ್ಸಾಪ್ ಚಾನೆಲ್‌ಗಳಿಗೆ ಈ ಪಿನ್ ಚಾಟ್ ಫೀಚರ್ ಬರುತ್ತಾ ಇಲ್ವಾ ಎನ್ನೋದು ಇನ್ನೂ ಸ್ಪಷ್ಟವಾಗಿಲ್ಲ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ