ಜನಪ್ರಿಯ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಕೆಲವು ಬೀಟಾ ಬಳಕೆದಾರರಿಗಾಗಿ ಹೊಸದಾಗಿ ನೀವು ಈಗಾಗಲೇ ಕಳುಹಿಸಿದ ಮೆಸೇಜ್ಗಳನ್ನು ಎಡಿಟ್ ಮಾಡುವ ಹೊಸ ಫೀಚರ್ ಮೇಲೆ ಕಂಪನಿ ಪರೀಕ್ಷಿಸುತ್ತಿದ್ದಾರೆ. ಇದರೊಂದಿಗೆ ವಾಟಿಕ್ಸಪ್ ಈಗ "ಚಾನೆಲ್" ಎಂಬ ಹೊಸ ಫೀಚರ್ ಅನ್ನು ಸಹ ಅಭಿವೃದ್ಧಿಪಡಿಸುತ್ತಿದೆ. ಬಳಕೆದಾರರಿಗೆ ಇದು ಏಕಕಾಲದಲ್ಲಿ ಹಲವಾರು ಮಾಹಿತಿಯನ್ನು ಸ್ವೀಕರಿಸಲು ಅವಕಾಶ ನೀಡುತ್ತದೆ. ಸದ್ಯಕ್ಕೆ WABetaInfo ವರದಿಯ ಪ್ರಕಾರ ವಾಟ್ಸಾಪ್ ತನ್ನ ಆಂಡ್ರಾಯ್ಡ್ ಬೀಟಾ ಪರೀಕ್ಷಕರಿಗೆ ಚಾನಲ್‌ಗಳ ಫೀಚರ್ ಅನ್ನು ಲಭ್ಯವಾಗುವಂತೆ ಮಾಡಲಿದೆ.ಈ ಫೀಚರ್ ಆಂಡ್ರಾಯ್ಡ್ 2.23.10.14 ಚಾಲನೆಯಲ್ಲಿರುವ ಬೀಟಾ ಬಳಕೆದಾರರಿಗಾಗಿ ಮಾತ್ರ ಲಭ್ಯವಿದೆ.
ವರದಿ ಪ್ರಕಾರ ಈ ಚಾನಲ್‌ಗಳ ಫೀಚರ್ ಬಳಕೆದಾರರು ಆಸಕ್ತಿ ಹೊಂದಿರುವ ವಿಷಯಗಳ ಕುರಿತು ಅಪ್ಡೇಟ್‌ಗಳನ್ನು ಪಡೆಯಲು ಅನುಮತಿಸುತ್ತದೆ ಮತ್ತು ಅವರು ಅನುಸರಿಸುವ ಚಾನಲ್‌ಗಳು ಅಪ್ಲಿಕೇಶನ್‌ನ ವಿಶೇಷ ವಿಭಾಗದಲ್ಲಿ ಲಭ್ಯವಿರುತ್ತವೆ. ಬಳಕೆದಾರರು ಚಾನಲ್ ಫೀಚರ್ ಬಳಸುವಾಗ ಅವರ ಗೌಪ್ಯತೆಯನ್ನು ರಕ್ಷಿಸಲಾಗುತ್ತದೆ. ಚಾನಲ್‌ನ ಫಾಲ್ಲೋರ್ಸ್ಗೆ ಬಳಕೆದಾರರ ಹೆಸರು, ಫೋನ್ ಸಂಖ್ಯೆ, ಪ್ರೊಫೈಲ್ ಫೋಟೋ ಅಥವಾ ಅವರ ಬಗೆಗಿನ ಯಾವುದೇ ವೈಯಕ್ತಿಕ ಮಾಹಿತಿಯನ್ನು ನೋಡಲು ಸಾಧ್ಯವಾಗುವುದಿಲ್ಲ.
https://twitter.com/WABetaInfo/status/1657627939561668609?ref_src=twsrc%5Etfw
ವರದಿಗಳ ಪ್ರಕಾರ WhatsApp ನ ಚಾನಲ್‌ಗಳ ಫೀಚರ್ ಬಳಕೆದಾರರಿಗೆ ಅನ್‌ಲಿಮಿಟೆಡ್ ಫಾಲ್ಲೋರ್ಸ್ನೊಂದಿಗೆ ಸಂಪರ್ಕ ಸಾಧಿಸಲು ಮತ್ತು ನಿರ್ದಿಷ್ಟ ಫಾಲ್ಲೋರ್ಸ್ನೊಂದಿಗೆ ಅಪ್ಡೇಟ್‌ಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಆದರೆ ಚಾನಲ್ ಎಷ್ಟು ಚಂದಾದಾರರನ್ನು ಹೊಂದಬಹುದು ಎಂಬುದರ ಮೇಲೆ ಮಿತಿ ಇದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಸದ್ಯದಲ್ಲೆ ಈ ಫೀಚರ್ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆಯಿದೆ.