ವಾಟ್ಸ್‌ಆಪ್‌ ನಲ್ಲಿ iOS ಬಳಕೆದಾರರಿಗೆ ಮಾತ್ರ ಹೊಸ ಫೀಚರ್ ಪರಿಚಯ! ಯಾವ ಫೀಚರ್ ಇದು ಗೊತ್ತಾ?

Updated on 01-Mar-2023
HIGHLIGHTS

ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್‌ಆಪ್‌ನಲ್ಲಿ iOS ಬಳಕೆದಾರರಿಗೆ ಮಾತ್ರ ಹೊಸ ಫೀಚರ್ ಪರಿಚಯ

ಪ್ರಸ್ತುತ ಪ್ಲಾಟ್‌ಫಾರ್ಮ್‌ನಲ್ಲಿರುವ ಗ್ರೂಪ್‌ಗಳ ವಿಷಯ ಮತ್ತು ವಿವರಣೆಯಲ್ಲಿ ಹೆಚ್ಚಿನ ಪದಗಳನ್ನು ಸೇರಿಸಲಿದೆ.

ಈ ವಾಟ್ಸ್‌ಆಪ್‌ ಫೀಚರ್‌ನೊಂದಿಗೆ ಬಳಕೆದಾರರು ಈಗ ತಮ್ಮ WhatsApp ಗ್ರೂಪ್‌ನ ಹೆಸರನ್ನು ದೊಡ್ಡದಾಗಿ ಇರಿಸಬಹುದು.

ವಾಟ್ಸ್‌ಆಪ್‌ನಲ್ಲಿ iOS ಬಳಕೆದಾರರಿಗೆ ಮಾತ್ರ ಹೊಸ ಫೀಚರ್ ಪರಿಚಯವಾಗಿದ್ದು ಸದ್ಯಕ್ಕೆ ಈ ಫೀಚರ್ ಆಪಲ್  ಫೋನ್‌ಗಳಿಗೆ ಲಭ್ಯವಿದೆ. ನಿಮ್ಮ ಫೋನ್‌ನ ಇಂಟರ್ನೆಟ್‌ ಸಂಪರ್ಕವನ್ನು ವಾಟ್ಸ್‌ಆಪ್‌ಬಳಸಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಸಂದೇಶ ಕಳುಹಿಸಲು ಮತ್ತು ಕರೆ ಮಾಡಲು ಅನುವು ಮಾಡುತ್ತದೆ. ವಾಟ್ಸ್‌ಆಪ್‌ ಬಳಕೆದಾರರಲ್ಲಿ ಜನಪ್ರಿಯವಾಗಲು ವಾಟ್ಸಾಪ್ ಗ್ರೂಪ್ ಕೂಡ ಒಂದು ಮುಖ್ಯ ಕಾರಣವಾಗಿದೆ.  ಈ ಫೀಚರ್ ಈಗಾಗಲೇ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಲಭ್ಯವಿದ್ದು ಮತ್ತು ಕಂಪನಿಯು ಈಗ ಅದನ್ನು iOS ಬೀಟಾ ಬಳಕೆದಾರರಿಗಾಗಿ ಹೊರತರುತ್ತಿದೆ.

WhatsApp ಗ್ರೂಪ್‌ನ ಈ ಹೊಸ ಫೀಚರ್

ವರದಿಯ ಪ್ರಕಾರ iOS ಬೀಟಾ ಬಳಕೆದಾರರು ಈಗ ವಾಟ್ಸಾಪ್ ಗ್ರೂಪ್‌ಗಳಲ್ಲಿ ಗ್ರೂಪ್‌ನ ಹೆಸರು ಮತ್ತು ಅದರ ವಿವರಣೆಯಲ್ಲಿರುವ ಪದಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಈ ಹೊಸ ಫೀಚರ್‌ನೊಂದಿಗೆ ಬಳಕೆದಾರರು ಈಗ ತಮ್ಮ WhatsApp ಗ್ರೂಪ್‌ನ ಹೆಸರನ್ನು ದೊಡ್ಡದಾಗಿ ಇರಿಸಬಹುದು. ಅಲ್ಲದೆ ವಿವರಣೆಯಲ್ಲಿ ಹೆಚ್ಚಿನ ಪದಗಳನ್ನು ಬಳಸುವ ಮೂಲಕ ನೀವು ಹೆಚ್ಚುವರಿ ಮಾಹಿತಿಯನ್ನು ಒದಗಿಸಲು ಸಾಧ್ಯವಾಗುತ್ತದೆ.

WhatsApp ಗ್ರೂಪ್‌ನ ಹೆಸರು ಎಷ್ಟು ಉದ್ದವಿರಸಬಹುದು?

ಶೀಘ್ರದಲ್ಲೇ iOS ಬೀಟಾ ಬಳಕೆದಾರರು WhatsApp ಗ್ರೂಪ್‌ನ ವಿಷಯವನ್ನು 100 ಅಕ್ಷರಗಳ ಒಳಗೆ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದಾಗಿ ಗ್ರೂಪ್ ಅಡ್ಮಿನ್‌ಗಳಿಗೆ ತಮ್ಮ ಗ್ರೂಪ್‌ಗಳನ್ನು ಹೆಸರಿಸುವಾಗ ಹಿಂದೆಂದಿಗಿಂತಲೂ ಹೆಚ್ಚಿನ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಹೆಚ್ಚಿದ ಪದ ಮಿತಿಯು WhatsApp ಗ್ರೂಪ್‌ನ ಉದ್ದೇಶಗಳನ್ನು ಗುರುತಿಸಲು ಸರಳಗೊಳಿಸುತ್ತದೆ. ವಿಷಯಕ್ಕೆ ಸಂಬಂಧಿಸಿದಂತೆ WhatsApp ತನ್ನ ಗ್ರೂಪ್‌ನ ವಿವರಣೆಯನ್ನು ಹೆಚ್ಚು ವಿಸ್ತರಿಸಲಿದೆ. 512 ಅಕ್ಷರಗಳ ಬದಲಿಗೆ ಬಳಕೆದಾರರು ಈಗ ತಮ್ಮ ಗ್ರೂಪ್‌ ಅನ್ನು ವಿವರಿಸಲು 2048 ಅಕ್ಷರಗಳನ್ನು ಹೊಂದಿರುತ್ತಾರೆ. ಗ್ರೂಪ್ ಅಡ್ಮಿನ್‌ಗಳು ಇದನ್ನು ಬಳಸಿಕೊಂಡು ತಮ್ಮ ಗ್ರೂಪ್‌ನ ವಿವರಣೆಯನ್ನು ಬರೆಯಲು ತುಂಬಾ ಸುಲಭವಾಗುತ್ತದೆ.

ಹೊಸ WhatsApp ಫೀಚರ್‌ ಅನ್ನು ಹೇಗೆ ಪಡೆಯುವುದು

ಈ ವರದಿಯ ಪ್ರಕಾರ iOS ಬಳಕೆದಾರರು ಟೆಸ್ಟ್ ಫ್ಲೈಟ್ ಅಪ್ಲಿಕೇಶನ್ ಮೂಲಕ WhatsApp ನ ಇತ್ತೀಚಿನ ಬೀಟಾ ಅಪ್‌ಗ್ರೇಡ್ ಅನ್ನು ಇನ್‌ಸ್ಟಾಲ್‌ ಮಾಡಬೇಕಾಗುತ್ತದೆ. ಇದರ ನಂತರ WhatsApp ನ ಎಲ್ಲಾ ಬೀಟಾ ಬಳಕೆದಾರರು ಈ ಹೊಸ ಅಪ್ಡೇಟ್ಗೆ ಪ್ರವೇಶವನ್ನು ಹೊಂದಿರುತ್ತಾರೆ. WhatsApp ನ Android ಬೀಟಾ ಬಳಕೆದಾರರು ಈಗಾಗಲೇ ಈ ಹೊಸ ಫೀಚರ್‌ನ ಪ್ರವೇಶವನ್ನು ಹೊಂದಿದ್ದಾರೆ. Android ಮತ್ತು Apple ಬಳಕೆದಾರರನ್ನು ಪರೀಕ್ಷಿಸಿದ ನಂತರ ಈ ಫೀಚರ್‌ ಎಲ್ಲಾ ಬಳಕೆದಾರರಿಗೆ ಲಭ್ಯವಿರುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :