WhatsApp Message Pin: ಇನ್ಮೇಲೆ ವಾಟ್ಸಾಪ್‌ನಲ್ಲಿ ಒಂದಕ್ಕಿಂತ ಅಧಿಕ ಮೆಸೇಜ್‌ಗಳನ್ನು ಪಿನ್ 📌 ಮಾಡಬಹುದು!

WhatsApp Message Pin: ಇನ್ಮೇಲೆ ವಾಟ್ಸಾಪ್‌ನಲ್ಲಿ ಒಂದಕ್ಕಿಂತ ಅಧಿಕ ಮೆಸೇಜ್‌ಗಳನ್ನು ಪಿನ್ 📌 ಮಾಡಬಹುದು!
HIGHLIGHTS

ವಾಟ್ಸಾಪ್‌ನಲ್ಲಿ (WhatsApp) ಇನ್ಮೇಲೆ ಒಂದಕ್ಕಿಂತ ಅಧಿಕ ಮೆಸೇಜ್‌ಗಳನ್ನು ಪಿನ್ 📌 ಮಾಡಬಹುದು ಹೇಗೆ ಎಂಬುದನ್ನು ತಿಳಿಯಿರಿ.

ವಾಟ್ಸಾಪ್‌ನಲ್ಲಿ (WhatsApp) ನಿರಂತರವಾಗಿ ಹೊಸ ವೈಶಿಷ್ಟ್ಯಗಳನ್ನು ತರುತ್ತಿದೆ ಇದರಿಂದ ನೀವು ಸುಲಭವಾಗಿ ಚಾಟ್ ಮಾಡಬಹುದು.

ಪ್ರಮುಖ ವಾಟ್ಸಾಪ್‌ನಲ್ಲಿ (WhatsApp) ಮೆಸೇಜ್‌ಗಳನ್ನು ಗ್ರೂಪ್ ಅಥವಾ ವೈಯಕ್ತಿಕ ಚಾಟ್‌ನ ಮೇಲ್ಭಾಗಕ್ಕೆ ಪಿನ್ ಮಾಡಬಹುದು.

WhatsApp Message Pin Feature: ಜನಪ್ರಿಯ ಅಪ್ಲಿಕೇಶನ್ ವಾಟ್ಸಾಪ್‌ನಲ್ಲಿ (WhatsApp) ಇನ್ಮೇಲೆ ಒಂದಕ್ಕಿಂತ ಅಧಿಕ ಮೆಸೇಜ್‌ಗಳನ್ನು ಪಿನ್ 📌 ಮಾಡಬಹುದು ಹೇಗೆ ಎಂಬುದನ್ನು ತಿಳಿಯಿರಿ. WhatsApp ನಿರಂತರವಾಗಿ ಹೊಸ ವೈಶಿಷ್ಟ್ಯಗಳನ್ನು ತರುತ್ತಿದೆ ಇದರಿಂದ ನೀವು ಸುಲಭವಾಗಿ ಚಾಟ್ ಮಾಡಬಹುದು. ನೀವು ಈಗ ಒಂದಕ್ಕಿಂತ ಹೆಚ್ಚು ಪ್ರಮುಖ ಮೆಸೇಜ್‌ಗಳನ್ನು ಗ್ರೂಪ್ ಅಥವಾ ವೈಯಕ್ತಿಕ ಚಾಟ್‌ನ ಮೇಲ್ಭಾಗಕ್ಕೆ ಪಿನ್ ಮಾಡಬಹುದು. ಮೊದಲು ನೀವು ಕೇವಲ ಒಂದು ಮೆಸೇಜ್‌ಗಳನ್ನು ಮಾತ್ರ ಪಿನ್ ಮಾಡಬಹುದು ಆದರೆ ಈಗ ನೀವು ಮೂರು ಮೆಸೇಜ್‌ಗಳನ್ನು ಪಿನ್ ಮಾಡಬಹುದು. ಇದರೊಂದಿಗೆ ನೀವು ಯಾವಾಗ ಬೇಕಾದರೂ ಸುಲಭವಾಗಿ ಹುಡುಕಬಹುದು.

ಈಗ ಬಹು ಮೆಸೇಜ್‌ ಪಿನ್ (WhatsApp Message Pin) ಮಾಡಲು ಸಾಧ್ಯ

WhatsApp ನಿರಂತರವಾಗಿ ಹೊಸ ವೈಶಿಷ್ಟ್ಯಗಳನ್ನು ತರುತ್ತಿದೆ ಇದರಿಂದ ನೀವು ಸುಲಭವಾಗಿ ಚಾಟ್ ಮಾಡಬಹುದು. ಈ ಹೊಸ ವೈಶಿಷ್ಟ್ಯಗಳಲ್ಲಿ ಒಂದು ಏಕಕಾಲದಲ್ಲಿ ಅನೇಕ ಮೆಸೇಜ್‌ಗಳನ್ನು ಪಿನ್ ಮಾಡುವುದು! ಮೊದಲು ನೀವು ಚಾಟ್‌ನ ಮೇಲ್ಭಾಗಕ್ಕೆ ಕೇವಲ ಒಂದು ಮೆಸೇಜ್‌ಗಳನ್ನು ಮಾತ್ರ ಪಿನ್ ಮಾಡಬಹುದು. ಆದರೆ ಈಗ ನೀವು ಮೂರು ಮೆಸೇಜ್‌ಗಳನ್ನು ಪಿನ್ ಮಾಡಬಹುದು. ಕಂಪನಿಯು ಕಳೆದ ವರ್ಷದಿಂದ ಈ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ ಮತ್ತು ಈಗ ನೀವು ಆಂಡ್ರಾಯ್ಡ್ ಐಫೋನ್ ಬಳಸುತ್ತೀರಾ ಅಥವಾ ವೆಬ್‌ನಿಂದ ವಾಟ್ಸಾಪ್ ಬಳಸುತ್ತಿರಲಿ ಎಲ್ಲರಿಗೂ ಲಭ್ಯವಾಗಿದೆ.

Now WhatsApp users can pin more messages in each chat
Now WhatsApp users can pin more messages in each chat

WhatsApp ಚಾಟ್‌ನಲ್ಲಿನ ಮೆಸೇಜ್‌ಗಳನ್ನು ಪಿನ್ (Pin) ಮಾಡುವುದು ಹೇಗೆ?

ಮೊದಲಿಗೆ ಈ ಫೀಚರ್ ಬಳಸಲು ನಿಮ್ಮ ವಾಟ್ಸಾಪ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕು. ಇದರ ನಂತರ ನೀವು ಪಿನ್ ಮಾಡಲು ಬಯಸುವ ಮೆಸೇಜ್ ಅನ್ನು ಒತ್ತಿ ಹಿಡಿದುಕೊಳ್ಳಿ. ನಂತರ ನಿಮಗೆ 3 ಚುಕ್ಕೆಗಳೊಂದಿಗೆ ಮೆನುಗೆ ಹೋಗಿ ಮತ್ತು “ಪಿನ್” ಆಯ್ಕೆಮಾಡಿ. ಇದರ ನಂತರ ಈ ಮೆಸೇಜ್ ಎಷ್ಟು ಸಮಯದವರೆಗೆ (24 ಗಂಟೆಗಳು, 7 ದಿನಗಳು ಅಥವಾ 30 ದಿನಗಳು) ಪಿನ್ ಆಗಿರುಸುವಿರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ ಅಷ್ಟೇ. ನೀವು ಯಾವುದೇ ಮೆಸೇಜ್‌ಗಳನ್ನು “ಸ್ಟಾರ್” ಮಾಡಬಹುದು ಎಂಬುದನ್ನು ಸಹ ನೆನಪಿಡಿ. ಇದರೊಂದಿಗೆ ನೀವು ಅದನ್ನು ನಂತರ ಸುಲಭವಾಗಿ ಕಂಡುಹಿಡಿಯಬಹುದು. ನೀವು ಯಾವುದೇ ಸಂಖ್ಯೆಯ ಮೆಸೇಜ್‌ಗಳಿಗೆ ನಕ್ಷತ್ರ ಹಾಕಬಹುದು.

Now WhatsApp users can pin more messages in each chat
Now WhatsApp users can pin more messages in each chat

WhatsApp ಚಾಟ್‌ನಲ್ಲಿನ ಮೆಸೇಜ್‌ಗಳನ್ನು ಅನ್ ಪಿನ್ (UnPin) ಮಾಡುವುದು ಹೇಗೆ?

ವಾಟ್ಸಾಪ್ ಮೆಸೇಜ್ ಅನ್ನು ಪಿನ್ ಮಾಡಿದ ನಂತರ ಮತ್ತೆ WhatsApp ಚಾಟ್‌ನಲ್ಲಿನ ಮೆಸೇಜ್‌ಗಳನ್ನು ಅನ್ ಪಿನ್ (UnPin) ಮಾಡುವುದು ಮುಖ್ಯವಾಗಿರುತ್ತದೆ. ಇದಕ್ಕಾಗಿ ನೀವು ಪಿನ್ ಮಾಡಿದ ಮೆಸೇಜ್ ಅನ್ನು ಒತ್ತಿ ಹಿಡಿದುಕೊಳ್ಳಿ. ನಂತರ 3 ಚುಕ್ಕೆಗಳ ಮೆನುಗೆ ಹೋಗಿ ಮತ್ತು ಅನ್ ಪಿನ್ (UnPin) ಆಯ್ಕೆಮಾಡಿ ಅಷ್ಟೇ. ನೀವು ಬಯಸಿದರೆ ನೀವು ಯಾವುದೇ ಚಾಟ್‌ನಲ್ಲಿ ಮೂರು ಮೆಸೇಜ್‌ಗಳನ್ನು ಪಿನ್ ಮಾಡಬಹುದು ಅದು ವೈಯಕ್ತಿಕ ಚಾಟ್ ಅಥವಾ ಗ್ರೂಪ್ ಚಾಟ್ ಆಗಿರಬಹುದು. ಒಮ್ಮೆ ಪಿನ್ ಮಾಡಿದ ನಂತರ ಮೆಸೇಜ್‌ಗಳ ಮೇಲ್ಭಾಗದಲ್ಲಿ 24 ಗಂಟೆಗಳು, 7 ದಿನಗಳು ಅಥವಾ 30 ದಿನಗಳವರೆಗೆ ಗೋಚರಿಸುತ್ತದೆಯೇ ಎಂಬುದನ್ನು ನೀವು ಆಯ್ಕೆ ಮಾಡಬಹುದು.

Also Read: Redmi Note 13 Pro+ ವಿಶ್ವದ ಚಾಂಪಿಯನ್ಸ್ ಎಡಿಷನ್ ಭಾರತದಲ್ಲಿ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo