ಪ್ರಸ್ತುತ ವಾಟ್ಸಾಪ್ ತಮ್ಮ ಬಳಕೆದಾರರಿಗೆ ಸೈಡ್ ಬೈ ಸೈಡ್ ಚಾಟ್, ಕೀಪ್ ಇನ್ ಚಾಟ್, ಚಾಟ್ ಲಾಕ್ ಮತ್ತು ಗೂಗಲ್ ಡ್ರೈವ್ ಇಲ್ಲದೆ ಚಾಟ್‌ಗಳ ವರ್ಗಾವಣೆ ಮಾಡುವುದು ಹೀಗೆ ಹಲವಾರು ಹೊಸ ಫೀಚರ್ ಒಳಗೊಂಡಿದೆ. ಆದರೆ ಇವುಗಳಲ್ಲಿ ಹೆಚ್ಚಿನವು ವಾಟ್ಸಾಪ್‌ನ ಆಂಡ್ರಾಯ್ಡ್ ಫೋನ್‌ಗಳಿಗೆ ಸಂಬಂಧಿಸಿದ್ದಾಗಿವೆ. ಪ್ರಸ್ತುತ WhatsApp ವೆಬ್ ಬೀಟಾಗೆ ಹೊಸ ಫೀಚರ್ ಅನ್ನು ತರುತ್ತಿದೆ. ಇದು ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು ಇದೀಗ ಕೆಲವೇ ಸಂಖ್ಯೆಯ ವಾಟ್ಸಾಪ್‌ನ ಬೀಟಾ ಬಳಕೆದಾರರು ಮಾತ್ರ ಈ ಫೀಚರ್ ಅನ್ನು ಬಳಸುತ್ತಿದ್ದಾರೆ.
ಈ ಫೀಚರ್ ಬಳಸಿಕೊಂಡು ಈಗಾಗಲೇ ಯಾರಿಗಾದರೂ ಕಳುಹಿಸಿರುವ ಯಾವುದೇ WhatsApp ಮೆಸೇಜ್ ಅನ್ನು ನೀವು ಬದಲಾಯಿಸಬಹುದು. ಈ ಮೆಸೇಜ್ ಎಡಿಟಿಂಗ್ ಫೀಚರ್ ಸೀಮಿತ ಅವಧಿಗೆ ಮಾತ್ರ ಸಾಧ್ಯವಾಗಿರುತ್ತದೆ. ಮೊದಲು 'Delete for Everyone' ಆಯ್ಕೆಯು ಸೀಮಿತ ಸಮಯಕ್ಕೆ ಮಾತ್ರ ಲಭ್ಯವಿತ್ತು. ವಾಟ್ಸಾಪ್‌ನ ವೆಬ್‌ನ ಬೀಟಾ ಆವೃತ್ತಿಯಲ್ಲಿ ಮುಂದಿನ 5 ನಿಮಿಷಗಳ ಅವಧಿಯಲ್ಲಿ ಮೆಸೇಜ್‌ಗಳನ್ನು ಪ್ರಸ್ತುತ ಹಲವಾರು ಬಾರಿ ಎಡಿಟ್ ಮಾಡಬಹುದು.
ಸದ್ಯಕ್ಕೆ ಇದು ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗುತ್ತದೆ. ಇದು ಕೇವಲ 5 ಬಾರಿ ಎಡಿಟ್ ಮಾಡುವ ಮಿತಿಯೊಂದಿಗೆ ಮೆಸೇಜ್ ಕಳುಹಿಸಿದ ನಂತರ ಟೆಕ್ಸ್ಟ್ಗಳನ್ನು 15 ನಿಮಿಷಗಳಲ್ಲಿ ಎಡಿಟ್ ಮಾಡುವ ಮಿತಿಯನ್ನು ಒಳಗೊಂಡಿರುವ iOS 16 ರ ಬಿಡುಗಡೆಯನ್ನು ನೆನೆಪಿಸುತ್ತದೆ. ವದಂತಿಗಳ ಪ್ರಕಾರ ಈ ಫೀಚರ್ ಅನ್ನು ಶೀಘ್ರದಲ್ಲೇ ಆಂಡ್ರಾಯ್ಡ್ ಮತ್ತು iOS ವಾಟ್ಸಾಪ್ ಬೀಟಾ ಬಳಕೆದಾರರು ಬಳಸಬುಹುದು.
ಅಲ್ಲದೆ ಒಮ್ಮೆ ನೀವು ಮೆಸೇಜ್ ಅನ್ನು ಎಡಿಟ್ ಮಾಡಿದ ನಂತರ ಸ್ವೀಕರಿಸುವವರು ಅದರ ನೋಟಿಫಿಕೇಶನ್ ಅನ್ನು ಸಹ ಪಡೆಯುತ್ತಾರೆ. ಇದರ ಪರೀಕ್ಷೆಯು ನಡೆಯುತ್ತಿದ್ದು ಇದು ಯಶಸ್ವಿಯಾಗಿ ಪೂರ್ಣಗೊಂಡ ನಂತರ ಈ ಫೀಚರ್‌ನ ಪ್ರಯೋಜನಗಳು ಮತ್ತು ನ್ಯೂನತೆಗಳನ್ನು ಪರಿಗಣಿಸಿದ ಮೇಲೆ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಆದ್ದರಿಂದ ನೀವು ಫೀಚರ್ ಬಳಸಲು ಇನ್ನು ಸಮಯ ಬೇಕಾಗುತ್ತದೆ.