WhatsApp ಶೀಘ್ರದಲ್ಲೇ ಸೀಕ್ರೆಟ್ ಕೋಡ್ (Secret Code) ಎಂಬ ಹೊಸ ಫೀಚರ್ ಪರಿಚಯಿಸಲಿದೆ. ನಿಮ್ಮ ಚಾಟಿಂಗ್ ಭದ್ರತೆ ಮತ್ತು ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ವಾಟ್ಸಾಪ್ ಈಗಾಗಲೇ ಚಾಟ್‌ಗಳನ್ನು ಮರೆಮಾಡುವ ಸೌಲಭ್ಯವನ್ನು ಒದಗಿಸುತ್ತದೆ. ಆದರೆ ಈ ಹೊಸ ಫೀಚರ್ ಬಳಕೆದಾರರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ. ನೀವು ನಿಮ್ಮ ಸ್ನೇಹಿತರಲ್ಲಿ ಯಾರಿಗಾದರೂ ಫೋನ್ ನೀಡಿದರೆ ಈ ಫೀಚರ್ ನಿಮಗೆ ತುಂಬಾ ಉಪಯುಕ್ತವಾಗಿರುತ್ತದೆ.
ಹೊಸ ವಾಟ್ಸಾಪ್ ವೈಶಿಷ್ಟ್ಯವು ಬಳಕೆದಾರರು ತಮ್ಮ ಚಾಟ್ ಲಾಕ್‌ಗಾಗಿ ಕಸ್ಟಮ್ ಪಾಸ್‌ವರ್ಡ್ ಅನ್ನು ಹೊಂದಿಸಲು ಅನುಮತಿಸುತ್ತದೆ. ಲಾಕ್ ಆಗಿರುವ ಚಾಟ್‌ಗಳನ್ನು ತಕ್ಷಣವೇ ಹುಡುಕಲು ಈ ಸಿಕ್ರೆಟ್ ಕೋಡ್ ಅನುಮತಿಸುತ್ತದೆ. ಬಳಕೆದಾರರು ಸರ್ಚ್ ಬಾರ್‌ನಲ್ಲಿ ಕೋಡ್ ಅನ್ನು ಟೈಪ್ ಮಾಡಬೇಕು ಮತ್ತು ಲಾಕ್ ಮಾಡಿದ ಚಾಟ್ ಅವರಿಗೆ ಗೋಚರಿಸುತ್ತದೆ. ನಿಮ್ಮ ಇತರ ಡಿವೈಸ್ಗಳಲ್ಲಿಯೂ ಈ ಚಾಟ್‌ಗಳನ್ನು ಪ್ರವೇಶಿಸಬಹುದು.
ಫಿಂಗರ್‌ಪ್ರಿಂಟ್ ಗುರುತಿಸುವಿಕೆ, ಫೇಸ್ ಅನ್‌ಲಾಕ್ ಅಥವಾ ಪಿನ್ ಕೋಡ್ ಬಳಸಿ ಅಪ್ಲಿಕೇಶನ್ ಅನ್ನು ಲಾಕ್ ಮಾಡಲು ವಾಟ್ಸಾಪ್ ಈಗಾಗಲೇ ನಿಮಗೆ ಅನುಮತಿಸುತ್ತದೆ. ಸೀಕ್ರೆಟ್ ಕೋಡ್ ಸೇವೆಯು ಭದ್ರತೆಯನ್ನು ಹೆಚ್ಚಿಸುವುದಲ್ಲದೆ ಲಾಕ್ ಆಗಿರುವ ಚಾಟ್‌ಗಳನ್ನು ಪತ್ತೆಹಚ್ಚುವ ಮತ್ತು ಪ್ರವೇಶಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.
ಚಾಟ್ ಲಾಕ್ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ ಈ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ. ಎಲ್ಲಾ ಡಿವೈಸ್ಗಳೊಂದಿಗೆ ಚಾಟ್ ಲಾಕ್ ಅನ್ನು ಸಂಯೋಜಿಸುವಲ್ಲಿ ಕಂಪನಿಯು ಸಂಪೂರ್ಣವಾಗಿ ಸಕ್ರಿಯವಾಗಿದೆ. ಸಿಕ್ರೆಟ್ ಕೋಡ್ ಇನ್ನೂ ಪರೀಕ್ಷೆಯಲ್ಲಿದೆ ಮತ್ತು ಬೀಟಾ ಆವೃತ್ತಿಯಲ್ಲಿ ಇನ್ನೂ ಲಭ್ಯವಾಗಲಿಲ್ಲ. ಶೀಘ್ರದಲ್ಲೇ ಈ ವೈಶಿಷ್ಟ್ಯವನ್ನು ಬಳಕೆದಾರರಿಗೆ ಪರಿಚಯಿಸಬಹುದು ಎಂದು ನಿರೀಕ್ಷಿಸಲಾಗಿದೆ.
ವಾಟ್ಸಾಪ್ Chat ಲಾಕಿಂಗ್ ವೈಶಿಷ್ಟ್ಯದ ಬಗ್ಗೆ ತಿಳಿದಿಲ್ಲದವರಿಗೆ ಬಳಕೆದಾರರು ತಮ್ಮ ಚಾಟ್‌ಗಳನ್ನು ಸುರಕ್ಷಿತವಾಗಿರಿಸಲು ಇದು ಅನುಮತಿಸುತ್ತದೆ. ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ನೀವು ಚಾಟ್ ಅನ್ನು ತೆರೆಯಬೇಕು. ನಂತರ ಚಾಟ್ ಮಾಹಿತಿಗೆ ಹೋಗಿ. ನಂತರ ನೀವು ಕೆಳಗೆ ಸ್ಕ್ರಾಲ್ ಮಾಡಬೇಕು ಮತ್ತು ಚಾಟ್ ಲಾಕ್ ಆಯ್ಕೆಗೆ ಹೋಗಬೇಕು. ಇಲ್ಲಿಂದ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬಹುದು.