ಭಾರಿ ನಿರೀಕ್ಷೆಗಳ ನಂತರ ಈಗ ಆಂಡ್ರಾಯ್ಡ್ ಬಳಕೆದಾರರಿಗೆ ವಾಟ್ಸಾಪ್ ಅಂತಿಮವಾಗಿ ಒಳ್ಳೆಯ ಸುದ್ದಿಯನ್ನು ನೀಡಿದೆ. ಫೆಬ್ರವರಿ 2014 ರಲ್ಲಿ ಮೆಟಾ ಪ್ಲಾಟ್‌ಫಾರ್ಮ್ ಅನ್ನು ಸ್ವಾಧೀನಪಡಿಸಿಕೊಂಡಾಗಿನಿಂದ ಈ ಮೆಸೇಜಿಂಗ್ ಅಪ್ಲಿಕೇಶನ್‌ಗೆ ಹೊಸ-ಹೊಸ ಫೀಚರ್ಗಳನ್ನು ಸೇರಿಸುತ್ತಲೆಯಿದೆ. ಈಗ WhatsApp ತನ್ನ ಮುಂಬರುವ ಹೊಸ ಅಪ್‌ಡೇಟ್‌ನಲ್ಲಿ ಬಾಟಮ್ ನ್ಯಾವಿಗೇಶನ್ ಬಾರ್ ಆಯ್ಕೆ ನೀಡಲು ಸಜ್ಜಾಗಿದೆ. ವಾಟ್ಸಾಪ್‌ನ ಆವೃತ್ತಿ 2.23.8.4 ರ ಗೂಗಲ್ ಪ್ಲೇ ಬೀಟಾ ಪ್ರೋಗ್ರಾಂ ಮೂಲಕ ಈ ಆಯ್ಕೆ ಹೊರಹೊಮ್ಮಿಸಿದೆ.
Wabetainfo.com ವರದಿ ಮಾಡಿರುವ ಹೊಸ ಬೀಟಾ ಆವೃತ್ತಿಯ ವಿವರಗಳ ಪ್ರಕಾರ Android ನಲ್ಲಿ ಕೆಲವು UI ಬದಲಾವಣೆಯ ಅಗತ್ಯವನ್ನು WhatsApp ಬಹಿರಂಗಪಡಿಸಿದೆ. ಹೊಸದಾಗಿ ಸೇರ್ಪಡೆಗೆ ಸಿದ್ಧವಾಗಿರುವ ಬಾಟಮ್ ನ್ಯಾವಿಗೇಷನ್ ಬಾರ್ ವಾಟ್ಸಾಪ್ ನ iOS ಆವೃತ್ತಿಯಂತೆಯೇ ಕಾಣುತ್ತದೆ. ಇದು ಆಂಡ್ರಾಯ್ಡ್ ನಿಂದ iOS ಗೆ ಬದಲಾಯಿಸುವವರಿಗೆ ಬಳಕೆಯ ಅನುಭವವನ್ನು ಒಂದೇ ರೀತಿಯಲ್ಲಿ ನೀಡುತ್ತದೆ.
Android ಮೊಬೈಲ್‌ಗಳ ಬಳಕೆದಾರರಿಗೆ ಈ ಹೊಸ ವಿನ್ಯಾಸವು ತುಂಬಾ ಸಹಾಯಕವಾಗಿದೆ. ಏಕೆಂದರೆ ಇದು ಅಪ್ಲಿಕೇಶನ್‌ನ ಬ್ರೌಸಿಂಗ್ ಅನ್ನು ಸರಳಗೊಳಿಸುತ್ತದೆ. WhatsApp ಗೆ ಹೊಸದಾಗಿ ಸೇರುವ ಈ ಬಾಟಮ್ ನ್ಯಾವಿಗೇಶನ್ ಬಾರ್ ಆಯ್ಕೆಯು ವಾಟ್ಸಾಪ್‌ನ ಕೆಳಭಾಗದಲ್ಲಿ ಕಾಣಿಸಿಕೊಳ್ಳಲಿದೆ. ಈ ನ್ಯಾವಿಗೇಶನ್ ಬಾರ್ ಚಾಟ್ಸ್, ಕಮ್ಯೂನಿಟಿ, ಸ್ಟೇಟಸ್ ಮತ್ತು ಕರೆ ಆಯ್ಕೆಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ.
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ಬಳಕೆದಾರ ನಡುವೆ ಹಲವಾರು ಅಪ್ಡೇಟ್ ಗಳು ಮತ್ತು ಹೊಂದಾಣಿಕೆಗಳ ನಂತರ WhatsApp ಹೊಸದಾಗಿ ಕಾಣುತ್ತದೆ ಎಂದು ಬಳಕೆದಾರರು ಭಾವಿಸುತ್ತಾರೆ. ಇದರ ಪರಿಣಾಮವಾಗಿ ಅನೇಕ ಬಳಕೆದಾರರು ಹೆಚ್ಚು ಸಮಕಾಲೀನ ನೋಟಕ್ಕಾಗಿ ಹಲವಾರು ವಿನಂತಿಗಳನ್ನು ಮಾಡಿದ್ದಾರೆ. ಹೊಸ ಅಪ್‌ಡೇಟ್‌ನೊಂದಿಗೆ ಬಳಕೆದಾರರು ದೀರ್ಘಕಾಲ ವಿನಂತಿಸಿದ್ದನ್ನು ಒದಗಿಸಲು WhatsApp ಆಯ್ಕೆ ಮಾಡಿದೆ.
ಇತ್ತೀಚಿನ ಬೀಟಾ ಆವೃತ್ತಿ 2.23.8.4 ಪ್ರಕಾರ WhatsApp ಪ್ರಸ್ತುತ Android ಬಳಕೆದಾರರಿಗೆ ಹೊಸ ವಿನ್ಯಾಸದೊಂದಿಗೆ ಬಾಟಮ್ ನ್ಯಾವಿಗೇಷನ್ ಬಾರ್ ಅನ್ನು ನೀಡುತ್ತಿದೆ. ಈ ಬಗ್ಗೆ WABetaInfo ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದು ಬಳಕೆದಾರರಲ್ಲಿ ಅಚ್ಚರಿ ಮೂಡಿಸಿದೆ. ಈ ಹೊಸ ಬಾಟಮ್ ನ್ಯಾವಿಗೇಶನ್ ಬಾರ್ ಈಗ ಅಪ್ಲಿಕೇಶನ್‌ನ ವಿವಿಧ ವಿಭಾಗಗಳನ್ನ ಸುಲಭವಾಗಿ ಪ್ರವೇಶಿಸಲು ಸಹಾಯಕವಾಗಿದೆ.