ಜಗತ್ತಿನ ಜನಪ್ರಿಯ ತ್ವರಿತ ಮೆಸೇಜಿಂಗ್ ಪ್ಲಾಟ್ಫಾರ್ಮ್ WhatsApp ಆಗಾಗ್ಗೆ ಹೊಸ ಫೀಚರ್ಗಳನ್ನು ಸೇರಿಸಲು ಹೆಸರುವಾಸಿಯಾಗಿದೆ. ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ವಾಟ್ಸಾಪ್ ಚಾನೆಲ್‌ಗಳ ಫೀಚರ್ ಲೇಟೆಸ್ಟ್ ಅಪ್‌ಡೇಟ್‌ಗಳಲ್ಲಿ ಆಟೋಮೆಟಿಕ್ ಆಲ್ಬಮ್ ಕ್ರಿಯೇಷನ್ (Automatic Album Creation) ಎಂಬ ಹೊಸ ಫೀಚರ್ ತರಲು ಕಂಪನಿ ಸಜ್ಜಾಗಿದೆ. ಅಡ್ಮಿನ್‌ಗಳು ತಮ್ಮ ನಿರ್ದಿಷ್ಟ ಚಾನಲ್‌ಗಳಲ್ಲಿ ಮಲ್ಟಿಪಲ್ ಇಮೇಜ್ ಮತ್ತು ವೀಡಿಯೊಗಳನ್ನು ಶೇರ್ ಮಾಡಿಕೊಂಡಾಗ ಈ ವಾಟ್ಸಾಪ್ ಆಟೋಮೆಟಿಕ್ ಆಲ್ಬಮ್ ಕ್ರಿಯೇಷನ್ ಫೀಚರ್ ಕಾರ್ಯನಿರ್ವಹಿಸುತ್ತದೆ.
Also Read: 84 ದಿನಗಳ ವ್ಯಾಲಿಡಿಟಿಯೊಂದಿಗೆ Unlimited ಕರೆ ಮತ್ತು ಪ್ರತಿದಿನ 2GB ನೀಡುವ Jio, Airtel ಮತ್ತು Vi ಯೋಜನೆಗಳು
ವಾಟ್ಸಾಪ್ ತಮ್ಮ ಬಳಕೆದಾರರ ಅನುಭವವನ್ನು ಸುಧಾರಿಸಲು ಒಂದಲ್ಲ ಒಂದು ಹೊಸ ಫೀಚರ್ಗಳನ್ನು ನೀಡುತ್ತಲೇ ಇರುತ್ತದೆ. ಈಗ ಮೆಟಾ-ಮಾಲೀಕತ್ವದ ಈ ಅಪ್ಲಿಕೇಶನ್ ವಾಟ್ಸಾಪ್ ಚಾನಲ್‌ಗಳಿಗಾಗಿ ಆಟೋಮೆಟಿಕ್ ಆಲ್ಬಮ್ ಕ್ರಿಯೇಷನ್ ಫೀಚರ್ ರೂಪದಲ್ಲಿ ಮತ್ತೊಂದು ಬದಲಾವಣೆಯನ್ನು ಪರಿಚಯಿಸುತ್ತಿದೆ. WABetaInfo ಗಮನಿಸಿದ ಈ ನಿರ್ದಿಷ್ಟ ಬದಲಾವಣೆಯು ಇತ್ತೀಚಿನ WhatsApp ಬೀಟಾದಲ್ಲಿ Android ಆವೃತ್ತಿ 2.23.26.16 ಅಪ್‌ಡೇಟ್‌ನಲ್ಲಿದೆ. ಚಾನಲ್ ನಿರ್ವಾಹಕರು ತಮ್ಮ ನಿರ್ದಿಷ್ಟ ಚಾನಲ್‌ಗಳಲ್ಲಿ ಬಹು ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಾಗ ಫೀಚರ್ ಕಾರ್ಯನಿರ್ವಹಿಸುತ್ತದೆ.
ಈ ಫೀಚರ್ ಈಗಾಗಲೇ ಚಾಟ್ ಮತ್ತು ಗ್ರೂಪ್ಗಳಿಗೆ ಲಭ್ಯವಿತ್ತು ಆದರೆ ಈಗ ಇದು ಚಾನಲ್ಗಳಲ್ಲೂ ಲಭ್ಯವಿದೆ ಎನ್ನುವುದು ವಿಶೇಷ. ವಾಟ್ಸಾಪ್ ಈಗ ಸ್ವಯಂಚಾಲಿತವಾಗಿ ಅವುಗಳನ್ನು ಒಂದೇ ಆಲ್ಬಮ್ ಆಗಿ ಸಂಘಟಿಸುತ್ತದೆ. ಎಲ್ಲಾ ಮೀಡಿಯಾ ಫೈಲ್‌ಗಳನ್ನು ಪ್ರವೇಶಿಸಲು ಚಾನಲ್ ಸದಸ್ಯರು ಅದನ್ನು ಸುಲಭವಾಗಿ ಟ್ಯಾಪ್ ಮಾಡಬಹುದು. ಈ ಅಪ್‌ಡೇಟ್‌ನೊಂದಿಗೆ ಫೈಲ್‌ಗಳಲ್ಲಿನ ಮೀಡಿಯಾ ಈಗ ಹೆಚ್ಚು ಸ್ಪಷ್ಟ ಮತ್ತು ಸುಲಭವಾಗಲಿದೆ. ಇದು ಪರ್ಸನಲ್ ಚಾಟ್‌ಗಳು ಅಥವಾ ಗ್ರೂಪ್‌ಗಳಂತೆಯೇ ಕಾರ್ಯನಿರ್ವಹಿಸುತ್ತದೆ. ವಾಟ್ಸಾಪ್ ಈಗ ಸ್ವಯಂಚಾಲಿತವಾಗಿ ಅವುಗಳನ್ನು ಒಂದೇ ಆಲ್ಬಮ್ ಆಗಿ ಸಂಘಟಿಸುತ್ತದೆ.
ಗೂಗಲ್ ಪ್ಲೇ ಸ್ಟೋರ್ ಮೂಲಕ ಹೊಸದಾಗಿ ಡೌನ್ಲೋಡ್ ಮಾಡುವ ಮತ್ತು ಹೊಸ ಅಪ್ಡೇಟ್ ಪಡೆದಿರುವ ಕೆಲ ಆಂಡ್ರಾಯ್ಡ್ ವಾಟ್ಸಾಪ್ ಬೀಟಾ ಬಳಕೆದಾರರಿಗೆ ಮಾತ್ರ ಪ್ರಸ್ತುತ ಈ ಫೀಚರ್ ಲಭ್ಯವಿದೆ. ಅಲ್ಲದೆ ಈ ಫೀಚರ್ ಇನ್ನೂ ಬೀಟಾದ ಇತ್ತೀಚಿನ ಅಪ್‌ಡೇಟ್‌ಗಳಲ್ಲಿ ಲಭ್ಯವಿದ್ದು ಚಾನಲ್‌ಗಳಲ್ಲಿ ಅನುಕ್ರಮ ಫೋಟೋಗಳು ಮತ್ತು ವೀಡಿಯೊಗಳನ್ನು ಸ್ವಯಂಚಾಲಿತವಾಗಿ ಗ್ರೂಪ್ ಮಾಡುವ ಫೀಚರ್ ಲಭ್ಯವಿದೆ. ಅಲ್ಲದೆ
ವರದಿಯ ಪ್ರಕಾರ ಇದು ಮುಂಬರುವ ದಿನಗಳಲ್ಲಿ ಎಲ್ಲ ಜನಸಾಮಾನ್ಯರಿಗೆ ಹೊರತರಲಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ