ವಾಟ್ಸಪ್ ಈಗ ತನ್ನ ಬಳಕೆದಾರರ ಅನುಭವವನ್ನು ಮತ್ತಷ್ಟು ಇಂಟ್ರೆಸ್ಟಿಂಗ್ ಮಾಡಲು ತನ್ನ ಆಂಡ್ರಾಯ್ಡ್ ಮತ್ತು iOS ಬೀಟಾ ಆವೃತ್ತಿಗಳಲ್ಲಿ ಹೊಸ HD ಫೋಟೋಗಳ ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಈ ಮೂಲಕ ಬಳಕೆದಾರರಿಗೆ ಹೈ-ಡೆಫಿನಿಷನ್ (HD) ಫೋಟೋಗಳನ್ನು ಕಳುಹಿಸಲು ಅವಕಾಶ ಮಾಡಿಕೊಡುತ್ತದೆ. ಈ ಹೊಡ್ಸ ಫೀಚರ್ ಬಳಕೆದಾರರಿಗೆ ಫೋಟೋಗಳನ್ನು ಕಳುಹಿಸುವಾಗ ಉತ್ತಮ-ಗುಣಮಟ್ಟದ ಹೈ-ಡೆಫಿನಿಷನ್ (HD) ಆಯ್ಕೆಯನ್ನು ಆಯ್ಕೆ ಮಾಡಲು ಅನುಮತಿಸುತ್ತದೆ. ಆದರೆ ಇದು WABetaInfo ವರದಿ ಮಾಡಿದಂತೆ ಸದ್ಯಕ್ಕೆ ಈ ಫೀಚರ್ ದೊಡ್ಡ ಸೈಜ್ ಇಮೇಜ್‌ಗಳಿಗೆ ಮಾತ್ರ ಲಭ್ಯವಿದೆ.
ಮೊದಲಿಗೆ ವಾಟ್ಸಾಪ್ ಅಧಿಕೃತ ಖಾತೆಯಾದ WABetaInfo ಇತ್ತೀಚಿನ ವರದಿಯ ಪ್ರಕಾರ iOS ಮತ್ತು Android ಎರಡಕ್ಕೂ WhatsApp ನ ಇತ್ತೀಚಿನ ಬೀಟಾ ಆವೃತ್ತಿಯು ಇತರರಿಗೆ ಫೋಟೋಗಳನ್ನು ಕಳುಹಿಸುವಾಗ ಹೊಸ HD ಫೋಟೋ ಗುಣಮಟ್ಟದ ಆಯ್ಕೆಯನ್ನು ಪರಿಚಯಿಸಿದೆ. ಬಳಕೆದಾರರು ಪ್ಲಾಟ್‌ಫಾರ್ಮ್‌ನಲ್ಲಿ ಚಿತ್ರವನ್ನು ಹಂಚಿಕೊಂಡಾಗ WhatsApp ಸ್ವಯಂಚಾಲಿತವಾಗಿ ಸಂಕುಚಿತಗೊಳಿಸುತ್ತದೆ ಆದರೆ ಹೊಸ ವೈಶಿಷ್ಟ್ಯದೊಂದಿಗೆ ಹೆಚ್ಚಿನ ರೆಸಲ್ಯೂಶನ್‌ನಲ್ಲಿ ಫೋಟೋಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ.
https://twitter.com/WABetaInfo/status/1666221155961692163?ref_src=twsrc%5Etfw
ಸಾಮಾನ್ಯವಾಗಿ ಈ ಹೊಸ ಫೀಚರ್ ಹೇಗೆ ಕಾರ್ಯ ನಿರ್ವಯಿಸುತ್ತದೆ ಎಂದು ನೋಡುವುದಾದದರೆ ನಿಮ್ಮ ಇಮೇಜಿನ ಆಯಾಮಗಳನ್ನು ಪೂರ್ತಿಯಾಗಿ ಸಂರಕ್ಷಿಸಿ ವಿಸ್ತರಿಸಿ ಅದರಲ್ಲಿನ ಲೈಟ್ ಕಡಿಮೆಯಾಗದಂತೆ ಅಸಲಿ ಕ್ವಾಲಿಟಿಯನ್ನು ಅನ್ವಯಿಸಲಾಗುತ್ತದೆ. ಈ ಮೂಲಕ ನಿಮ್ಮ ಪ್ರತಿಯೊಂದು ಫೋಟೋಗಳನ್ನು ಅವುಗಳ ಮೂಲ ರೆಸಲ್ಯೂಶನ್‌ನಲ್ಲಿ ಕಳುಹಿಸಲಾಗುವುದಿಲ್ಲ. ಇಲ್ಲಿ ಗಮನಿಸಬೇಕಾದ ಇನ್ನೊಂದು ವಿಷಯವೆಂದರೆ ನೀವು ಫೋಟೋವನ್ನು ಹಂಚಿಕೊಂಡಾಗ ಡೀಫಾಲ್ಟ್ ಆಯ್ಕೆಯನ್ನು ಯಾವಾಗಲೂ ಸ್ಟ್ಯಾಂಡರ್ಡ್ ಗುಣಮಟ್ಟ ಎಂದು ಹೊಂದಿಸಲಾಗುತ್ತದೆ ಮತ್ತು ಹೆಚ್ಚಿನ ರೆಸಲ್ಯೂಶನ್‌ನಲ್ಲಿ ಚಿತ್ರವನ್ನು ಕಳುಹಿಸಲು ನೀವು HD ಬಟನ್ ಅನ್ನು ಪ್ರತ್ಯೇಕವಾಗಿ ಪ್ರತಿ ಬಾರಿ ಕ್ಲಿಕ್ ಮಾಡಿ ಕಳುಹಿಸಬೇಕಾಗುತ್ತದೆ.
WhatsApp ಕೂಡ ಸಂದೇಶದ ಬಬಲ್‌ಗೆ ಹೊಸ ಟ್ಯಾಗ್ ಅನ್ನು ಸೇರಿಸುತ್ತದೆ ಇದು ವೈಶಿಷ್ಟ್ಯವನ್ನು ಬಳಸಿಕೊಂಡು ಫೋಟೋವನ್ನು ಕಳುಹಿಸಿದಾಗ ಸ್ವೀಕರಿಸುವವರಿಗೆ ಲೆಕ್ಕಾಚಾರ ಮಾಡಲು ಸಹಾಯ ಮಾಡುತ್ತದೆ. ಪ್ರಸ್ತುತ HD ಫೋಟೋಗಳನ್ನು ಕಳುಹಿಸುವ ಸಾಮರ್ಥ್ಯವು ಸಂಭಾಷಣೆಗಳಲ್ಲಿ ಹಂಚಿಕೊಳ್ಳಲಾದ ಚಿತ್ರಗಳಿಗೆ ಸೀಮಿತವಾಗಿದೆ. Android 2.23.12.13 ಗಾಗಿ WhatsApp ಬೀಟಾ ಮತ್ತು iOS 23.11.0.76 ಗಾಗಿ WhatsApp ಬೀಟಾದಲ್ಲಿ ಲಭ್ಯವಿದೆ ಡೆವಲಪರ್‌ಗಳು ಕ್ರಮೇಣ ಹೊಸ ವೈಶಿಷ್ಟ್ಯವನ್ನು ಹೊರತರುತ್ತಿರುವಂತೆ ನಿರೀಕ್ಷಿಸಲಾಗಿದೆ.