WhatsApp Side-by-Side: ಈಗಾಗಲೇ ವಾಟ್ಸಾಪ್ ಹಲವಾರು ಫೀಚರ್ ಪರಿಚಯಿಸಿದ್ದು ಈಗ ವಾಟ್ಸಾಪ್ ಆಂಡ್ರಾಯ್ಡ್ ಮತ್ತು ಟ್ಯಾಬ್ಲೆಟ್ ಬಳಕೆದಾರರಿಗೆ "ಸೈಡ್-ಬೈ-ಸೈಡ್" ಎಂಬ ಹೊಸ ಫೀಚರ್ ಅನ್ನು ಪ್ರಾರಂಭಿಸುತ್ತಿದೆ. ಬಳಕೆದಾರರು ತಮ್ಮ Android ಟ್ಯಾಬ್ಲೆಟ್‌ಗಳಲ್ಲಿ WhatsApp ಚಾಟ್‌ಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಿರುತ್ತಾರೆ. ಏಕಕಾಲದಲ್ಲಿ ಹಲವಾರು ವ್ಯಕ್ತಿಗಳೊಂದಿಗೆ ಚಾಟ್ ಮಾಡುವ ಬಳಕೆದಾರರಿಗೆ ಈ ಹೊಸ ಮೋಡ್ ಸ್ಕ್ರೀನ್ ಅನ್ನು ವಿಭಜಿಸುತ್ತದೆ. ಒಂದೇ ಸಮಯದಲ್ಲಿ ವಿವಿಧ ಚಾಟ್‌ಗಳನ್ನು ನೋಡಿ ಪ್ರತಿಕ್ರಿಯೆ ನೀಡುವ ಬಳಕೆದಾರರಿಗೆ ಈ ಫೀಚರ್ ಉಪಯುಕ್ತವಾಗಿರುತ್ತದೆ.
ಬಳಕೆದಾರರು ತಮ್ಮ ಚಾಟ್‌ಗಳಿಗಾಗಿ ದೊಡ್ಡ ಇಂಟರ್ಫೇಸ್ ಅನ್ನು ಹೊಂದಲು ಬಯಸಿದರೆ ಅವರು ವಾಟ್ಸಾಪ್ ಸೆಟ್ಟಿಂಗ್‌ಗಳ ಮೂಲಕ ಸೈಡ್ ಬೈ ಸೈಡ್ ವೀಕ್ಷಣೆಯನ್ನು ಆಫ್ ಮಾಡಬಹುದು. ವಾಟ್ಸಾಪ್ ಸೆಟ್ಟಿಂಗ್‌ಗಳು > ಚಾಟ್‌ಗಳಿಗೆ ಹೋಗುವ ಮೂಲಕ ನೀವು ಆಯ್ಕೆಯನ್ನು disable ಮಾಡಬಹುದು. ಈ ಅಪ್‌ಗ್ರೇಡ್ Android ಟ್ಯಾಬ್ಲೆಟ್ ಬಳಕೆದಾರರಿಗೆ ಹೆಚ್ಚು ತಡೆರಹಿತ ಚಾಟಿಂಗ್ ಅನುಭವವನ್ನು ನೀಡುತ್ತದೆ ಮತ್ತು ಪ್ರಸ್ತುತ ಇದು ಕೆಲವು ಬೀಟಾ ಬಳಕೆದಾರರಿಗೆ ಲಭ್ಯವಾಗಲಿದ್ದು ಮುಂದಿನ ಕೆಲವು ದಿನಗಳಲ್ಲಿ ಹೆಚ್ಚಿನ ಬಳಕೆದಾರರಿಗೆ ಲಭ್ಯವಾಗಲಿದೆ.
ಈ ಹೊಸ ಫೀಚರ್ ಜೊತೆಗೆ ವಾಟ್ಸಾಪ್ ಅನೇಕ ಡಿವೈಸ್ ಗಳಲ್ಲಿ ತಮ್ಮ ವಾಟ್ಸಾಪ್ ಖಾತೆಗಳನ್ನು ಪ್ರವೇಶಿಸಲು ಬಳಕೆದಾರರಿಗೆ ಅನುವು ಮಾಡಿಕೊಡುವ ಮಲ್ಟಿ-ಡಿವೈಸ್ ಲಾಗಿನ್ ಫೀಚರ್ ಅನ್ನು ಸಹ ಸೇರಿಸಲಾಗಿದೆ. ಜಾಗತಿಕವಾಗಿ ಬಳಕೆದಾರರು ಈಗಾಗಲೇ ಈ ಅಪ್‌ಗ್ರೇಡ್ ಅನ್ನು ಬಳಸಲು ಪ್ರಾರಂಭಿಸಿದ್ದಾರೆ. ಇದು ಬಳಕೆದಾರರ ವಾಟ್ಸಾಪ್ ಖಾತೆಗಳಿಗೆ ಇತರ ನಾಲ್ಕು ಡಿವೈಸ್ ಗಳನ್ನು ಲಿಂಕ್ ಮಾಡಲು ಅವಕಾಶ ಮಾಡಿಕೊಡುತ್ತದೆ.
ವಾಟ್ಸಪ್ ವೈಯಕ್ತಿಕ ಚಾಟ್ ಲಾಕ್ ಫೀಚರ್ ಪರಿಚಯಿಸುವ ನಿರೀಕ್ಷೆಯಿದೆ. ಈ ಫೀಚರ್ ನಿಂದ ಬಳಕೆದಾರರು ತಮ್ಮ ಚಾಟ್‌ಗಳಿಗೆ ಹೆಚ್ಚುವರಿ ಭದ್ರತೆಯನ್ನು ನೀಡಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ನಲ್ಲಿ ತಮ್ಮ WhatsApp ಖಾತೆಯನ್ನು ಏಕಕಾಲದಲ್ಲಿ ಪ್ರತಿಬಿಂಬಿಸಲು ಅನುವು ಮಾಡಿಕೊಡುವ ಕಂಪ್ಯಾನಿಯನ್ ಮೋಡ್ ಅನ್ನು ಸಹ ವಾಟ್ಸಾಪ್ನಿಂದ ನಿರೀಕ್ಷಿಸಲಾಗಿದೆ.
ಹೆಚ್ಚುವರಿಯಾಗಿ ವಾಟ್ಸಾಪ್ ಶೀಘ್ರದಲ್ಲೇ ಬಳಕೆದಾರರಿಗೆ ಫಾರ್ವರ್ಡ್ ಮಾಡಿದ ಮೆಸೇಜ್ ಗಳಿಗೆ ವಿವರಣೆಯನ್ನು ನೀಡುವ ಹೊಸ ಫೀಚರ್ ಅನ್ನು ಪರಿಚಯಿಸುತ್ತಿದೆ. ಈ ಫೀಚರ್ ನಿಂದಾಗಿ ಬಳಕೆದಾರರು ತಮ್ಮ ಕಾಂಟ್ಯಾಕ್ಟ್ಸ್ ಗೆ ಫಾರ್ವರ್ಡ್ ಮಾಡುತ್ತಿರುವ ಮೆಸೇಜ್ ಕುರಿತು ಹೆಚ್ಚುವರಿ ವಿವರಗಳನ್ನು ನೀಡಲು ಸಾಧ್ಯವಾಗುತ್ತದೆ.