ಭಾರತ ಸೇರಿ ಜಗತ್ತಿನ ಜನಪ್ರಿಯ ಮತ್ತು ಅತಿ ಹೆಚ್ಚು ಜನರು ಬಳಸುತ್ತಿರುವ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ (WhatsApp) ತಮ್ಮ ಬಳಕೆದಾರರ ಅನುಭವನ್ನು ಮತ್ತಷ್ಟು ಉತ್ತಮಗೊಳಿಸಲು ಒಂದಲ್ಲ ಒಂದು ವಿಶೇಷವಾದ ಫೀಚರ್ ಅಥವಾ ಅಪ್‌ಡೇಟ್‌ಗಳನ್ನು ನೀಡುತ್ತ ಬರುತ್ತಿದೆ. ಈಗ ಮತ್ತೊಂದು ಹೊಸ ಫೀಚರ್ ಈ ಪಟ್ಟಿಗೆ ಸೇರಿಸಲಿದ್ದು ಹೆಚ್ಚಾಗಿ WhatsApp Status ಹಾಕುವವರಿಗಾಗಿ ಡಬಲ್ ಮಜಾ ನೀಡಲು ವಿಶೇಷವಾದ ಫೀಚರ್ ಅನ್ನು ಪರಿಚಯಿಸಿದೆ. WhatsApp ಬಳಕೆದಾರರಿಗೆ ಯಾವುದೇ ಲಿಂಕ್ ಮಾಡಲಾದ ಮೊಬೈಲ್ ಡಿವೈಸ್‌ಗಳಿಂದ ಸ್ಟೇಟಸ್ ಅಪ್ಡೇಟ್ ಮಾಡಲು ವೀಡಿಯೊಗಳು, GIFs, ಮೆಸೇಜ್ ಮತ್ತು ವಾಯ್ಸ್ ಮೆಸೇಜ್‌ಗಳನ್ನು ಆಯ್ಕೆ ಮಾಡಿ ಶೇರ್ ಮಾಡಬಹುದು.
Also Read: OPPO F27 Pro Plus 5G ನೀರಿನಲ್ಲಿ ಬಿದ್ದರು ಏನೂ ಆಗದ ಭಾರತದ ಮೊದಲ IP69 ರೇಟಿಂಗ್ ಸ್ಮಾರ್ಟ್ಫೋನ್ ಬಿಡುಗಡೆ!
ಇನ್ಮೇಲೆ ನಿಮ್ಮ ಲ್ಯಾಪ್ಟಾಪ್ ಅಥವಾ ಡೆಸ್ಕ್‌ಟಾಪ್ ಮೂಲಕ ನಿಮ್ಮ ವಾಟ್ಸಾಪ್ (WhatsApp) ಖಾತೆಯಲ್ಲಿ ನಿಮ್ಮ ಸ್ಟೇಟಸ್ಗಳನ್ನು ಪೋಸ್ಟ್ (WhatsApp Status) ಮಾಡಲು ಅವಕಾಶ ನೀಡುವ ಫೀಚರ್ ಅನ್ನು ಪರಿಚಯಿಸಿದೆ. ಇದರಿಂದ ಕೆಲಸದ ಸಮಯದಲ್ಲಿ ಅಗತ್ಯವಿಲ್ಲದೆ ನಿಮ್ಮ ಫೋನ್‌ನಲ್ಲಿ ಸಮಯವನ್ನು ಹಾಳು ಮಾಡದೇ ನೇರವಾಗಿ ನಿಮ್ಮ ಲ್ಯಾಪ್ಟಾಪ್ ಅಥವಾ ಡೆಸ್ಕ್‌ಟಾಪ್ ಮೂಲಕ ವಾಟ್ಸಾಪ್ ಸ್ಟೇಟಸ್ ಅಪ್ಡೇಟ್ ಅಥವಾ ಪೋಸ್ಟ್ ಮಾಡಬಹುದು. ಈ ಹೊಸ ಅಪ್ಡೇಟ್ ಈಗಾಗಲೇ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಲಭ್ಯವಿದ್ದು ಪ್ರಸ್ತುತ Apple Mac ಬುಕ್ಗಳಿಗೆ ಪರಿಚಯಿಸಿದ್ದು ಇದು Mac ಆವೃತ್ತಿ 24.11.73 ಇತ್ತೀಚಿನ ಬೀಟಾದಲ್ಲಿ ಬಿಡುಗಡೆಯಾಗಿದೆ.
ಇದರ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಈಗಾಗಲೇ ನೀಡಿರುವ WABetaInfo ಸ್ಕ್ರೀನ್‌ಶಾಟ್ ಅನ್ನು ಸಹ ಹಂಚಿಕೊಂಡಿದೆ. ಈ ಫೀಚರ್ ಪ್ರಸ್ತುತ ಕೆಲವು ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಇತರ ಬಳಕೆದಾರರಿಗೆ ಇದನ್ನು ಪರಿಚಯಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ ಇತ್ತೀಚೆಗೆ WhatsApp ಸ್ಟೇಟಸ್‌ನಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಇದರ ಹಿಂದಿನ ಬಳಕೆದಾರರು 30 ಸೆಕೆಂಡುಗಳ ವಾಯ್ಸ್ ಮೆಸೇಜ್ ಪೋಸ್ಟ್ ಮಾಡಬಹುದಾಗಿತ್ತು ಆದರೆ ಈಗ ಇದನ್ನು ವಿಸ್ತರಿಸಿ 1 ನಿಮಿಷದ ವಾಯ್ಸ್ ಮೆಸೇಜ್ ಪೋಸ್ಟ್ ಮಾಡುವ ಸೌಲಭ್ಯವನ್ನು ನೀಡಲಾಗಿದೆ.
ಅಲ್ಲದೆ WhatsApp ಚಾಟ್‌ಗಾಗಿ ಮತ್ತೊಂದು ವೈಶಿಷ್ಟ್ಯವನ್ನು ಪರಿಚಯಿಸಿದೆ. ಹೊಸ ಫೀಚರ್ ಅಡಿಯಲ್ಲಿ ಬಳಕೆದಾರರು ತಮ್ಮ ನೆಚ್ಚಿನ ಚಾಟ್‌ಗಳನ್ನು ಪ್ರತ್ಯೇಕ ವಿಭಾಗದಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿದು ಬಂದಿದೆ. ಈ ಫೀಚರ್ ಅನ್ನು ಪರಿಚಯಿಸಿದ ನಂತರ ಬಳಕೆದಾರರು ಚಾಟ್‌ನಲ್ಲಿ ಪ್ರತ್ಯೇಕ ‘ಮೆಚ್ಚಿನ’ ಚಾಟ್ ಫಿಲ್ಟರ್ ಅನ್ನು ಪಡೆಯುತ್ತಾರೆ. ಈ ವೈಶಿಷ್ಟ್ಯವು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ. ವರದಿಯ ಪ್ರಕಾರ ಗೂಗಲ್ ಪ್ಲೇ ಬೀಟಾ ಪ್ರೋಗ್ರಾಂ ಮೂಲಕ ನೋಂದಾಯಿಸಿದ ಪರೀಕ್ಷಕರಿಗೆ ಇದು ಲಭ್ಯವಿದೆ. ಒಮ್ಮೆ ಇದು ಬೀಟಾದಲ್ಲಿದ್ದರೆ ಈ ಬಳಕೆದಾರರು ಈ ವೈಶಿಷ್ಟ್ಯವನ್ನು ನೋಡಲು ಮತ್ತು ಅದನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ.