WhatsApp Chat Lock: ವಾಟ್ಸಾಪ್‌ನಲ್ಲಿ ಪಾಸ್‌ವರ್ಡ್ ಅಥವಾ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ನಿರ್ದಿಷ್ಟ ಚಾಟ್‌ಗಳನ್ನು ಲಾಕ್ ಮಾಡಬಹುದು. ಈ ಹೊಸ ಫೀಚರ್‌ನ ಮೂಲಕ ಪ್ರೈವೇಟ್ ಚಾಟ್‌ಗಳನ್ನು ಪ್ರತ್ಯೇಕವಾಗಿ ಫೋಲ್ಡರ್‌ನಲ್ಲಿ ಇರಿಸಿ ನಂತರ ಓದಬಹುದು. ವಾಟ್ಸಾಪ್‌ಗೆ ಬರುವ ನೋಟಿಫಿಕೇಶನ್, ಹೆಸರು ಮತ್ತು ಮೆಸೇಜ್ ಎಲ್ಲವನ್ನು ಮರೆಮಾಡಲಾಗುವುದು. ಮೆಟಾ ವಾಟ್ಸಾಪ್‌ಗೆ ಹೊಸ ಫೀಚರ್ ಅನ್ನು ಪರಿಚಯಿಸಲಿದೆ. ಈ ಫೀಚರ್‌ನ ಮೂಲಕ ವಾಟ್ಸಾಪ್ ಬಳಕೆದಾರರು ಈಗ ಪಾಸ್‌ವರ್ಡ್ ಅಥವಾ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ನಿರ್ದಿಷ್ಟ ಚಾಟ್‌ಗಳನ್ನು ಲಾಕ್ ಮಾಡಬಹುದು.
ಇದರಲ್ಲಿ ಪ್ರೈವೇಟ್ ಚಾಟ್‌ಗಳನ್ನು ಪ್ರತ್ಯೇಕವಾಗಿ ಫೋಲ್ಡರ್‌ನಲ್ಲಿ ಇರಿಸಬಹುದು ಮತ್ತು ಪರಿಶೀಲನೆಯ ನಂತರ ಮಾತ್ರ ಆ ಚಾಟ್ ಅನ್ನು ಓದಬಹುದು. ಇದರಲ್ಲಿ ನೋಟಿಫಿಕೇಶನ್, ಹೆಸರು ಮತ್ತು ಮೆಸೇಜ್ ಅನ್ನು ಮರೆಮಾಡಲಾಗುವುದು. ಆಂಡ್ರಾಯ್ಡ್ ಮತ್ತು iOS ಎರಡರಲ್ಲೂ ಬಯೋಮೆಟ್ರಿಕ್ಸ್ ಅಥವಾ PIN ಕೋಡ್ ಅನ್ನು ಬಳಸಿಕೊಂಡು ಸಂಪೂರ್ಣ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಲಾಕ್ ಮಾಡಬಹುದು. ಆದರೆ ಈ ಹೊಸ ಫೀಚರ್ ನಿರ್ದಿಷ್ಟ ಚಾಟ್‌ಗಳನ್ನು ರಕ್ಷಿಸಲು ಬಳಕೆದಾರರಿಗೆ ಮತ್ತಷ್ಟು ಸಹಾಯ ಮಾಡುತ್ತದೆ.
ಯಾರಾದರೂ ನಿಮ್ಮ ಫೋನ್ ಅನ್ನು ಬಳಸಿದರೆ ಚಾಟ್-ಲಾಕ್ ಮಾಡಿದ ಮೆಸೇಜ್‌ಗಳು ಖಾಸಗಿಯಾಗಿಯೇ ಉಳಿಯುತ್ತವೆ. ವಾಟ್ಸಾಪ್ ಈಗಾಗಲೇ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್, ಎನ್‌ಕ್ರಿಪ್ಟ್ ಮಾಡಿದ ಚಾಟ್ ಬ್ಯಾಕಪ್, ಡಿಸ್ಅಪೀಯರಿಂಗ್ ಮೆಸೇಜ್‌ಗಳು, ಸ್ಕ್ರೀನ್‌ಶಾಟ್ ಬ್ಲಾಕಿಂಗ್ ಮತ್ತು ನಮ್ಮ ಲಾಸ್ಟ್ ಸೀನ್ ಹಾಗೂ ಸ್ಟೇಟಸ್‌ಗಳನ್ನು ಅನ್ನು ಯಾರು ನೋಡಬಹುದು ಎನ್ನುವಂತಹ ಹಲವಾರು ಸೆಕ್ಯೂರಿಟಿ ಮತ್ತು ಪ್ರೈವಸಿ-ಸೆಂಟ್ರಿಕ್ ಫೀಚರ್‌ಗಳನ್ನು ಹೊಂದಿದೆ. ಇತ್ತೀಚಿನ ಅಪ್ಡೇಟ್‌ನೊಂದಿಗೆ ಮೆಟಾ ವಾಟ್ಸಾಪ್ ಪ್ರೈವಸಿ ಮತ್ತು ಸೆಕ್ಯೂರಿಟಿ ಫೀಚರ್‌ಗಳನ್ನು ಈಗ ಇನ್ನಷ್ಟು ಸುಧಾರಿಸಿದೆ.
ಆಂಡ್ರಾಯ್ಡ್ ಮತ್ತು iOS ಮೊಬೈಲ್‌ಗಾಗಿ WhatsApp ನ ಇತ್ತೀಚಿನ ವರ್ಷನ್ ಅನ್ನು ಡೌನ್‌ಲೋಡ್ ಮಾಡಿ.
ನೀವು ಲಾಕ್ ಮಾಡಲು ಬಯಸುವ ನಿರ್ದಿಷ್ಟ ಚಾಟ್‌ಗೆ ಹೋಗಿ, ಬಳಕೆದಾರರ ಪ್ರೊಫೈಲ್ ಇಮೇಜ್ ಅನ್ನು ಕ್ಲಿಕ್ ಮಾಡಿ.
ಡಿಸ್ಅಪೀಯರಿಂಗ್ ಮೆಸೇಜ್ ಮೆನುವಿನ ಕೆಳಗೆ ನೀವು "ಚಾಟ್ ಲಾಕ್" ಎಂಬ ಹೊಸ ಆಯ್ಕೆಯನ್ನು ನೋಡುತ್ತೀರಿ.
ಚಾಟ್ ಲಾಕ್ ಅನ್ನು ಆನ್ ಮಾಡಿ ಮತ್ತು ನಿಮ್ಮ ಫೋನ್‌ನ ಪಾಸ್‌ವರ್ಡ್ ಅಥವಾ ಬಯೋಮೆಟ್ರಿಕ್ ಮೂಲಕ ದೃಢೀಕರಿಸಿ.
ವಾಟ್ಸಾಪ್‌ನಲ್ಲಿ ಈ ಹೊಸ ಲಾಕ್ ಆಗಿರುವ ಎಲ್ಲಾ ಚಾಟ್‌ಗಳನ್ನು ನೋಡಲು ಹೋಂ ಪೇಜ್ ಕೆಳಗೆ ಸ್ವೈಪ್ ಮಾಡಿ.