ಈ 8 ಹೊಸ WhatsApp ಫೀಚರ್‌ಗಳನ್ನು ಬಳಸಿ ಪ್ರೇಮಿಗಳ ದಿನವನ್ನು ನಿಮ್ಮ ಸಂಗಾತಿಗೆ ಮತ್ತಷ್ಟು ಖುಷಿಪಡಿಸಿ.!

ಈ 8 ಹೊಸ WhatsApp ಫೀಚರ್‌ಗಳನ್ನು ಬಳಸಿ ಪ್ರೇಮಿಗಳ ದಿನವನ್ನು ನಿಮ್ಮ ಸಂಗಾತಿಗೆ ಮತ್ತಷ್ಟು ಖುಷಿಪಡಿಸಿ.!
HIGHLIGHTS

ನಿಮ್ಮ ಸಂಗಾತಿಯ ಚಾಟ್ ಅನ್ನು ನಿಮ್ಮ WhatsApp ಲಿಸ್ಟ್‌ನ ಮೇಲೆ ಪಿನ್ ಮಾಡಬಹುದು.

ಮೆಸೇಜ್‌ಗಳಲ್ಲಿ ಎಮೋಜಿಗಳನ್ನು ಕಳುಹಿಸಬಹುದು ಮತ್ತು ನಿಮ್ಮ ಸಂಗಾತಿಗಾಗಿ ವ್ಯಾಲೆಂಟೈನ್ಸ್ ಅನ್ನು ವಿಶೇಷವಾಗಿಸಲು WhatsApp ನಲ್ಲಿ ವಾಯ್ಸ್ ನೋಟ್ಸ್ ಅನ್ನು ಸಹ ಕಳುಹಿಸಬಹುದು.

WhatsApp ಈ ವರ್ಷ ಮೆಸೇಜ್‌ ಕಳುಹಿಸಲು 8 ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡಿದೆ.

ನಿಮ್ಮ ಸಂಗಾತಿಯ ಚಾಟ್ ಅನ್ನು ನಿಮ್ಮ WhatsApp ಲಿಸ್ಟ್‌ನ ಮೇಲೆ ಪಿನ್ ಮಾಡಬಹುದು. ಮೆಸೇಜ್‌ಗಳಲ್ಲಿ ಎಮೋಜಿಗಳನ್ನು ಕಳುಹಿಸಬಹುದು ಮತ್ತು ನಿಮ್ಮ ಸಂಗಾತಿಗಾಗಿ ವ್ಯಾಲೆಂಟೈನ್ಸ್ ಅನ್ನು ವಿಶೇಷವಾಗಿಸಲು WhatsApp ನಲ್ಲಿ ವಾಯ್ಸ್ ನೋಟ್ಸ್ ಅನ್ನು ಸಹ ಕಳುಹಿಸಬಹುದು. ಪ್ರೇಮಿಗಳ ದಿನಕ್ಕೆ ಕೆಲವೇ ದಿನಗಳು ಬಾಕಿಯಿದ್ದು ನಿಮ್ಮ ಪ್ರೀತಿಪಾತ್ರರಿಗೆ ನೀವು ಎಷ್ಟು ಕಾಳಜಿ ವಹಿಸುತ್ತೀರಿ ಎಂಬುದನ್ನು ತೋರಿಸಲು ಇದಕ್ಕಿಂತ ಉತ್ತಮವಾದ ಸಮಯ ಇರಲಾರದು. ಇಂದು ಜನರು ಪ್ರೇಮಿಗಳ ದಿನದಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಡಿಜಿಟಲ್‌ಗೆ ವೇದಿಕೆಗಳನ್ನು ಬಳಸುತ್ತಾರೆ. WhatsApp ಈ ವರ್ಷ ಮೆಸೇಜ್‌ ಕಳುಹಿಸಲು 8 ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡಿದೆ. ನಿಮ್ಮ ಈ ಮಹತ್ವದ ದಿನವನ್ನು ನಿಮ್ಮ ಪ್ರೀತಿ ಪಾತ್ರರರಿಗೆ ವಿಶೇಷವಾಗಿಸಲು ಇವುಗಳು ಸಹಾಯ ಮಾಡುತ್ತದೆ.

ಪ್ರೇಮಿಗಳ ದಿನಕ್ಕೆ WhatsApp ನ ಈ 8 ಹೊಸ ಫೀಚರ್‌ಗಳು:

1. ಪಿನ್ ಚಾಟ್: ಈ ಫೀಚರ್‌ ಅನ್ನು ಬಳಸಿಕೊಂಡು ನಿಮ್ಮ ಸಂಗಾತಿಯ ಚಾಟ್‌ ಅನ್ನು ಮೇಲ್ಭಾಗದಲ್ಲಿ ಪಿನ್ ಮಾಡುವ ಮೂಲಕ ನಿಮ್ಮ WhatsApp ಲಿಸ್ಟ್‌ಗೆ ನೀವು ಆದ್ಯತೆ ನೀಡಬಹುದು. Android ಮೊಬೈಲ್ ಬಳಕೆದಾರರು ಇದನ್ನು ಟ್ಯಾಪ್ ಮಾಡುವುದರಿಂದ ಮತ್ತು ಚಾಟ್ ಮೇಲೆ ಹೋಲ್ಡ್ ಮಾಡುವ ಮೂಲಕ ಪಿನ್ ಚಾಟ್ ಅನ್ನು ಟ್ಯಾಪ್ ಮಾಡಬಹುದು. ಐಫೋನ್ ಬಳಕೆದಾರರು ಪಿನ್ ಮಾಡಲು ಬಯಸುವ ಚಾಟ್‌ನಲ್ಲಿ ಪಿನ್ ಆಯ್ಕೆಯನ್ನು ಟ್ಯಾಪ್ ಮಾಡುವ ಮೊದಲು ಬಲಕ್ಕೆ ಸ್ವೈಪ್ ಮಾಡಬೇಕು.

2. ಎಮೋಜಿ ರಿಯಾಕ್ಷನ್: ಪ್ರೇಮಿಗಳ ದಿನದಂದು ನಿಮ್ಮ ಪ್ರೇಮಿಗೆ ನೀವು ಸಾಕಷ್ಟು ಗಮನ ನೀಡುತ್ತಿಲ್ಲ ಎನ್ನುವ ಸಂಗತಿಯನ್ನು ನಿವಾರಿಸಲು ಸುಲಭವಾದ ವಿಧಾನವೆಂದರೆ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸುವುದು. ಎಮೋಜಿ ರಿಯಾಕ್ಷನ್ ಮೂಲಕ ನಿಮ್ಮ ಸಂಗಾತಿಯ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸಲು WhatsApp ನಿಮಗೆ ಸಹಾಯ ಮಾಡುತ್ತದೆ.

3. ಡಿಜಿಟಲ್ ಅವತಾರ್ಸ: ನಿಮ್ಮ ಡಿಜಿಟಲ್ ಅವತಾರಗಳನ್ನು ಮಾಡಲು WhatsApp ನಿಮಗೆ ಸಹಾಯ ಮಾಡುತ್ತದೆ. ಅವುಗಳನ್ನು ಕಸ್ಟಮೈಸ್ ಮಾಡಬಹುದು ಮತ್ತು ನೀವು ನಿಜವಾಗಿಯೂ ಯಾರೆಂದು ಇವು ಪ್ರತಿನಿಧಿಸುತ್ತವೆ. ನಿಮ್ಮ ಮೆಸೇಜ್‌ಗಳಿಗೆ ಹೆಚ್ಚು ಪರ್ಸನಲ್ ಟಚ್ ನೀಡಲು ಚಾಟ್ ಮಾಡುವಾಗ ನೀವು ಇವುಗಳನ್ನು ಸ್ಟಿಕ್ಕರ್‌ಗಳಾಗಿಯೂ ಬಳಸಬಹುದು.

4. ಸ್ಟೇಟಸ್ ಅಪ್ಡೇಟ್ಸ್: WhatsApp ನಲ್ಲಿ ನಿಮ್ಮ ಸ್ಟೇಟಸ್ ಅಪ್ಡೇಟ್ ಸಹ ಮಾಡಬಹುದು. ಪ್ರೀತಿಪಾತ್ರರಿಗೆ ಪ್ರಣಯ ಪ್ರಸ್ತಾಪ ಒಳಗೊಂಡಿರುವ ಸ್ಟೇಟಸ್ ಅನ್ನು ಈ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ  ನೀವು ಹಂಚಿಕೊಳ್ಳಬಹುದು. ಈ ಫೀಚರ್‌ ಅನ್ನು ಬಳಸುವ ಮೂಲಕ ನೀವು 24 ಗಂಟೆಗಳ ನಂತರ ಕಣ್ಮರೆಯಾಗುವ ಟೆಕ್ಸ್ಟ್, ವೀಡಿಯೊ, ಆಡಿಯೋ ಮತ್ತು GIF ಗಳನ್ನು ಪೋಸ್ಟ್ ಮಾಡಬಹುದು.

5. ವಾಯ್ಸ್ ಮೆಸೇಜ್ಸ್: ಟೈಮ್‌ ಜೋನ್ನಿಂದಾಗಿ ನೀವು ನಿಮ್ಮ ಸಂಗಾತಿಯಿಂದ ದೂರಾಗಿದ್ದೀರಾ? ಚಿಂತಿಸಬೇಡಿ WhatsApp ನ ಮೂಲಕ ನೀವು ವಾಯ್ಸ್ ಮೆಸೇಜ್‌ ಅನ್ನು ಕಳುಹಿಸಬಹುದು ಅಥವಾ ಈ ಫಿಚರ್‌ನ ಮೂಲಕ ಅವರ ವಾಯ್ಸ್‌ ಅನ್ನು ಸಹ ಕೇಳಬಹುದು. ನಿಮ್ಮ ಸಂಗಾತಿ ನಿಮಗೆ ಎಷ್ಟು ಮುಖ್ಯ ಎಂದು ಹೇಳುವ ಮೊದಲು ನಿಮ್ಮ ಆಲೋಚನೆಗಳನ್ನು ಸಂಗ್ರಹಿಸಬೇಕಾದರೆ ನೀವು ವಿರಾಮವನ್ನು ಸಹ ತೆಗೆದುಕೊಂಡು ರೆಕಾರ್ಡ್ ಮಾಡಬಹುದು.

6. ಕಸ್ಟಮ್ ನೋಟಿಫಿಕೇಶನ್ ಟೋನ್: ಈ ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ನೀವು ಕಸ್ಟಮ್ ನೋಟಿಫಿಕೇಶನ್ ಟೋನ್ ಅನ್ನು ಹೊಂದಿಸಬಹುದು. ನೀವು ಮಾಡಬೇಕಾಗಿರುವುದು ಅವರ ಕಾಂಟ್ಯಾಕ್ಟ್ಸ್ ಇನ್ಫೋ ಮೇಲೆ ಕ್ಲಿಕ್ ಮಾಡಿ ನಂತರ ವಾಲ್‌ಪೇಪರ್ ಮತ್ತು ಸೌಂಡ್‌ನಿಂದ ಅಲರ್ಟ್ ಟೋನ್ ಆಯ್ಕೆಮಾಡಿ. ಇದರಿಂದ ಅವರು ಕರೆ ಮಾಡಿದಾಗ ನೀವು ಸೆಲೆಕ್ಟ್ ಮಾಡಿದ ಟೋನ್‌ ಅನ್ನು ಹೇಳಲು ಸಾಧ್ಯವಾಗುತ್ತದೆ.

7. ಲೈವ್ ಲೊಕೇಶನ್: ನೀವು ಮತ್ತು ನಿಮ್ಮ ಪ್ರೇಮಿ ಭೇಟಿಯಾಗಬೇಕಿತ್ತು ಆದರೂ ಪರಸ್ಪರ ಭೇಟಿಯಾಗಲು ಸಾಧ್ಯವಾಗದಿದ್ದರೆ ಅವರನ್ನು ಹುಡುಕುವುದಕ್ಕಾಗಿ ನಿಮಗೆ ಸಹಾಯ ಮಾಡಲು ನಿರ್ದಿಷ್ಟ ಸಮಯದವರೆಗೆ ಅವರೊಂದಿಗೆ ಲೈವ್ ಲೊಕೇಶನ್ ಹಂಚಿಕೊಳ್ಳಲು WhatsApp ನಿಮಗೆ ಅನುಮತಿಸುತ್ತದೆ.

8. ಪೊಲ್ಸ್: ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ಯಾವ ಉಡುಗೊರೆಗಳನ್ನು ಖರೀದಿಸಬೇಕು ಎಂದು ಗೊಂದಲವಾಗಿದ್ಯಾ? ಹಾಗಾದರೆ WhatsApp ನಲ್ಲಿ ನೀವು ಪೊಲ್ಸ್/ಸಮೀಕ್ಷೆಯನ್ನು ನಡೆಸಬುಹುದು ಮತ್ತು ನಿಮ್ಮ ಸ್ನೇಹಿತರ ಅಭಿಪ್ರಾಯಗಳನ್ನು ಸಹ ಕೇಳಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo