ವಾಟ್ಸಾಪ್ ಸದಾ ತಮ್ಮ ಬಳಕೆದಾರರಿಗೆ ಒಂದಲ್ಲ ಒಂದು ಲೇಟೆಸ್ಟ್ ಫೀಚರ್ಗಳೊಂದಿಗೆ ಹೊಸ ಅನುಭವಗಳನ್ನು ನೀಡಲು ಕಾಯುತ್ತಿರುತ್ತದೆ. ಇದರೊಂದಿಗೆ ಈಗ ವಾಟ್ಸಾಪ್ ಖಾತೆಯನ್ನು ಮತ್ತಷ್ಟು ಸುರಕ್ಷಿತವಾಗಿಡಲು ಇಮೇಲ್ ವೆರಿಫಿಕೇಷನ್ ಫೀಚರ್ ಅನ್ನು ಪರಿಚಯಿಸಿದೆ. ಇದರಿಂದ ಒಮ್ಮೆ ನೀವು ನಿಮ್ಮ E-mail ಐಡಿಯನ್ನು ವಾಟ್ಸಾಪ್ ಖಾತೆಯೊಂದಿಗೆ ಲಿಂಕ್ ಮಾಡುವುದರಿಂದ ಒಂದು ವೇಳೆ ನಿಮ್ಮ ಮೊಬೈಲ್ ಕಳೆದೋದರು ಅಷ್ಟಾಗಿ ಗಾಬರಿಯಾಗುವ ಅಗತ್ಯವಿಲ್ಲ. ಇಂತಹ ಕೆಲವು ಇಂಟ್ರೆಸ್ಟಿಂಗ್ ಕಾರಣಗಳ ಬಗ್ಗೆ ಒಂದಿಷ್ಟ್ರು ಮಾಹಿತಿಯನ್ನು ತಿಳಿಯೋಣ.
Also Read: ಏರ್ಟೆಲ್‌ನಿಂದ Unlimited ಕರೆ ಮತ್ತು 5G ಡೇಟಾದೊಂದಿಗೆ Netflix ಸೇವೆ ನೀಡುವ ಹೊಸ ಪ್ಲಾನ್ ಲಾಂಚ್!
ಸದ್ಯಕ್ಕೆ ನಿಮ್ಮ ಫೋನ್ ಕಳೆದುಹೋದರೆ ಅಥವಾ ಕದ್ದಿದ್ದರೆ ಮತ್ತೊಂದು ಡಿವೈಸ್‌ನಲ್ಲಿ WhatsApp ಖಾತೆಗೆ ಲಾಗಿನ್ ಮಾಡಲು ಅದಕ್ಕೆ ಬೇಕಿರುವ OTP ಕಾರಣದಿಂದಾಗಿ ಬೇರೆ ಯಾವುದೇ ಆಯ್ಕೆಗಳಿಲ್ಲ. ಆದರೆ ವಾಸ್ತವವಾಗಿ ಇದಕ್ಕಾಗಿ ನೀವು ವಾಟ್ಸಾಪ್ ಸಂಖ್ಯೆಯಲ್ಲಿ OTP ಸ್ವೀಕರಿಸಬೇಕು. ನಿಮ್ಮ ಖಾತೆಯಿಂದ ನೀವು ಲಾಕ್ ಔಟ್ ಆಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಪ್ಲ್ಯಾಟ್‌ಫಾರ್ಮ್‌ನಿಂದ ಹೊಸ E-mail ದೃಢೀಕರಣ ಆಯ್ಕೆಯನ್ನು ಒದಗಿಸಲಾಗುತ್ತಿದೆ.
ಇಮೇಲ್ ದೃಢೀಕರಣ ಆಯ್ಕೆಯೊಂದಿಗೆ ಬಳಕೆದಾರರು ತಮ್ಮ ಇಮೇಲ್ ಐಡಿಯನ್ನು ತಮ್ಮ WhatsApp ಖಾತೆಗೆ ಲಿಂಕ್ ಮಾಡಲು ಸಹ ಸಾಧ್ಯವಾಗುತ್ತದೆ. ಈ ರೀತಿಯಾಗಿ ಮೊಬೈಲ್ ಸಂಖ್ಯೆ ಮಾತ್ರ ಲಾಗಿನ್ ವಿಧಾನವಾಗಿರುವುದಿಲ್ಲ. ದೀರ್ಘಕಾಲದವರೆಗೆ ಈ ವೈಶಿಷ್ಟ್ಯವನ್ನು ಪರೀಕ್ಷಿಸಿದ ನಂತರ ಈಗ ಅದರ ವ್ಯಾಪಕ ರೋಲ್ಔಟ್ ಅನ್ನು iOS ಅಪ್ಲಿಕೇಶನ್ನಲ್ಲಿ ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೂ ಈ ಪ್ರಯೋಜನವನ್ನು ನೀಡಲಾಗುವುದು.
ಮೊದಲಿಗೆ ವಾಟ್ಸಾಪ್ ತೆರೆದು >> ನಂತರ ಸೆಟ್ಟಿಂಗ್ ತೆರೆಯಿರಿ >> ಅಕೌಂಟ್ ತೆರೆಯಿರಿ >> ಇಮೇಲ್ ವಿಳಾಸವನ್ನು ಟ್ಯಾಪ್ ಮಾಡಿ >> ನಿಮ್ಮ ಇಮೇಲ್ ಐಡಿ ಟೈಪ್ ಮಾಡಿ. ಇದರ ನಂತರ ನಿಮ್ಮ ಇಮೇಲ್ ಇನ್‌ಬಾಕ್ಸ್‌ಗೆ 6 ಅಂಕಿಯ ವೆರಿಫಿಕೇಷನ್ ಕೋಡ್ ಅನ್ನು ಸ್ವೀಕರಿಸುತ್ತೀರಿ. ಇದರೊಂದಿಗೆ ನಿಮ್ಮ ಸೆಕ್ಯೂರಿಟಿ ಪ್ರಕ್ರಿಯೆಯನ್ನು ಮುಕ್ತಾಯಗೊಳ್ಳುತ್ತದೆ. ಇದು ಹೆಚ್ಚು ಸರಳ ಮತ್ತು ಸುಲಭವಾಗಿದೆ.
ಹೊಸ WhatsApp ವೈಶಿಷ್ಟ್ಯದ ಪರೀಕ್ಷೆಯು ಇಲ್ಲಿಯವರೆಗೆ ಬೀಟಾ ಆವೃತ್ತಿಯಲ್ಲಿ ನಡೆಯುತ್ತಿದೆ. ಇದನ್ನು iOS ನಲ್ಲಿ 23.24.70 ಆವೃತ್ತಿಯ ಭಾಗವಾಗಿ ಮಾಡಲಾಗಿದೆ. ವಾಟ್ಸಾಪ್ ಅಪ್‌ಡೇಟ್‌ಗಳು ಮತ್ತು ಹೊಸ ವೈಶಿಷ್ಟ್ಯಗಳನ್ನು ಮೇಲ್ವಿಚಾರಣೆ ಮಾಡುವ ವೇದಿಕೆಯಾದ WABetaInfo ಈ ಮಾಹಿತಿಯನ್ನು ಬಳಕೆದಾರರಿಗೆ ನೀಡಿದೆ. ಮತ್ತು SMS ಪರಿಶೀಲನೆಯ ಬದಲಿಗೆ ಈಗ ಇಮೇಲ್ ಸಹಾಯದಿಂದ ಲಾಗಿನ್ ಮಾಡಲು ಮತ್ತು ಖಾತೆಯನ್ನು ಪ್ರವೇಶಿಸಲು ಆಯ್ಕೆ ಇರುತ್ತದೆ.
ಇದನ್ನು ಖಾತೆಯ ದೃಢೀಕರಣಕ್ಕಾಗಿ ಮಾತ್ರ ಬಳಸಲಾಗುತ್ತದೆ. WhatsApp ಖಾತೆಗೆ ಲಾಗ್ ಇನ್ ಮಾಡುವಾಗ ಬಳಕೆದಾರರಿಗೆ ಫೋನ್ ಸಂಖ್ಯೆ ಮತ್ತು ಇಮೇಲ್ ಐಡಿಯ ಎರಡು ಆಯ್ಕೆಗಳನ್ನು ನೀಡಲಾಗುತ್ತದೆ. ಈ ಇಮೇಲ್ ಐಡಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡರೆ ಇಮೇಲ್‌ಗೆ OTP ಕಳುಹಿಸಲಾಗುತ್ತದೆ. ಈ ರೀತಿಯಾಗಿ ನೀವು ಫೋನ್ ಸಂಖ್ಯೆಗೆ ಪ್ರವೇಶವನ್ನು ಹೊಂದಿಲ್ಲದಿದ್ದರೂ ಸಹ ನೀವು ಖಾತೆಗೆ ಲಾಗಿನ್ ಮಾಡಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ