WhatsApp Edit Feature: ವಾಟ್ಸಾಪ್ ತನ್ನ ಬಳಕೆದಾರರಿಗೆ ಉತ್ತಮ ಸೇವೆಯನ್ನು ಒದಗಿಸಲು ಅಪ್ಲಿಕೇಶನ್ ನಲ್ಲಿ ಹೊಸ ಬದಲಾವಣೆಗಳನ್ನು ಮಾಡುತ್ತಲೇ ಇರುತ್ತದೆ. ಆಡಿಯೋ ಕರೆಗಳು ಮತ್ತು ಮೆಸೇಜ್ ಕಳುಹಿಸುವಿಕೆ ಅನುಭವವನ್ನು ಸುಧಾರಿಸಲು WhatsApp ಹೊಸ ಫೀಚರ್ ಅನ್ನು ಪರಿಚಯಿಸುತ್ತಿದೆ. ಈಗ ನೀವು ಕಳುಹಿಸಿದ ಮೆಸೇಜ್ ಅನ್ನು ಸಹ ಎಡಿಟ್ ಮಾಡಲು ಸಾಧ್ಯವಾಗುತ್ತದೆ. ಈ ಫೀಚರ್ ಯಾವಾಗ ಬರಲಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ವರದಿಯ ಪ್ರಕಾರ ಈ ಫೀಚರ್‌ಗಾಗಿ ಪರೀಕ್ಷೆ ನಡೆಯುತ್ತಿದ್ದು ಶೀಘ್ರದಲ್ಲೇ ಇದು ಬಳಕೆದಾರರಿಗೆ ಲಭ್ಯವಾಗುವುದು.
ವರದಿಗಳ ಪ್ರಕಾರ ವಾಟ್ಸ್‌ಆ್ಯಪ್‌ಗೆ ಇಂತಹ ಲಕ್ಷಾಂತರ ರಿಕ್ವೆಸ್ಟ್‌ಗಳು ಬಂದಿದ್ದು ಅದರಲ್ಲಿ ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವಂತಹ ಒಂದು ಫೀಚರ್ ಅನ್ನು ಹೊರತರುವ ಬೇಡಿಕೆಯಿತ್ತು. ಕಳುಹಿಸಿದ ಟೆಕ್ಸ್ಟ್ ನಲ್ಲಿ ತಪ್ಪು ಪದಗಳು ಅಥವಾ ಮುಜುಗರದ ಮೆಸೇಜ್ಗಳನ್ನು ಸರಿಪಡಿಸುವ ಸೌಲಭ್ಯವಿದೆ. ಜನರ ಬೇಡಿಕೆ ನೋಡಿ ಇದೀಗ ವಾಟ್ಸಾಪ್ ಈ ಸಮಸ್ಯೆಯನ್ನು ಬಗೆಹರಿಸಲು ಕೆಲಸ ಆರಂಭಿಸಿದೆ.
ಈ ಹೊಸ WhatsApp ಫೀಚರ್‌ನಲ್ಲಿ ಮೆಸೇಜ್ ಕಳುಹಿಸಿದ 15 ನಿಮಿಷಗಳವರೆಗೆ ಬಳಕೆದಾರರು ಅದನ್ನು ಎಡಿಟ್ ಮಾಡಲು ಸಾಧ್ಯವಿರುತ್ತದೆ. ಹಲವಾರು ತಿಂಗಳುಗಳ ಕಾಯುವಿಕೆಯ ನಂತರ ಬಳಕೆದಾರರು ಅಂತಿಮವಾಗಿ ಮೆಸೇಜ್ ಬಾಕ್ಸ್‌ನಲ್ಲಿ ಮೆಸೇಜ್ ಅನ್ನು ಆಯ್ಕೆ ಮಾಡಬಹುದು ಮತ್ತು ಎಡಿಟ್ ಮಾಡುವ ಆಯ್ಕೆಯನ್ನು ಆರಿಸಿಕೊಳ್ಳಬಹುದು.
ಮಾಧ್ಯಮ ವರದಿಗಳ ಪ್ರಕಾರ WhatsApp ನ ಟೆಕ್ಸ್ಟ್ ಅನ್ನು ಎಡಿಟ್ ಮಾಡುವ ಫೀಚರ್ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದೆ. ಎಡಿಟ್ ಮಾಡಿದ ನಂತರ ಎಡಿಟ್ ಇನ್ ದಿ ಮೆಸೇಜ್ ಎನ್ನುವ ಲೇಬಲ್ ಸಹ ಹೊಂದಿರುತ್ತದೆ. ಪ್ರಸ್ತುತ ಇದು ಬೀಟಾ ಆವೃತ್ತಿಯಲ್ಲಿ ಲಭ್ಯವಿದ್ದು ಮತ್ತು ಶೀಘ್ರದಲ್ಲೇ ಇತರ ಬಳಕೆದಾರರಿಗೂ ಲಭ್ಯವಾಗಲಿದೆ.