WhatsApp ಶೀಘ್ರದಲ್ಲೇ ನಂಬರ್‌ಗಳ ಬದಲಿಗೆ Username ಬಳಸುವ ಹೊಸ ಫೀಚರ್ ಪರಿಚಯಿಸಲಿದೆ!

WhatsApp ಶೀಘ್ರದಲ್ಲೇ ನಂಬರ್‌ಗಳ ಬದಲಿಗೆ Username ಬಳಸುವ ಹೊಸ ಫೀಚರ್ ಪರಿಚಯಿಸಲಿದೆ!
HIGHLIGHTS

WhatsApp ಈ 2024 ವರ್ಷ ಹಲವಾರು ಲೇಟೆಸ್ಟ್ ಅಪ್‍ಡೇಟ್‍ಗಳನ್ನು ತರಲು ಸಜ್ಜಾಗಿದೆ

WhatsApp ಆಂಡ್ರಾಯ್ಡ್ ಮತ್ತು ವೆಬ್ ಬಳಕೆದಾರರು ಅನನ್ಯ ಬಳಕೆದಾರ ಹೆಸರುಗಳನ್ನು (Username) ರಚಿಸಬಹುದು

WhatsApp ಬಳಕೆದಾರರ ಫೋನ್ ನಂಬರ್ಗಳನ್ನು ಬಹಿರಂಗಪಡಿಸದೆ ಬಳಕೆದಾರರ ಕನೆಕ್ಷನ್‌ಗಳನ್ನು ಸಕ್ರಿಯಗೊಳಿಸುತ್ತದೆ

ಹೊಸ ವರ್ಷದಲ್ಲಿ WhatsApp ತಮ್ಮ ಬಳಕೆದಾರರಿಗೆ ಬಹಳ ವಿಶೇಷವಾಗಿರಲಿದೆ. ಪ್ರತಿ ವರ್ಷ ಕಂಪನಿಯು ಹೊಸ ವೈಶಿಷ್ಟ್ಯಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಕಳೆದ ವರ್ಷದಿಂದಲೇ ವಾಟ್ಸಾಪ್ ಮೆಸೇಜಿಂಗ್ ಅಪ್ಲಿಕೇಶನ್‌ಗೆ ಜೀವ ತುಂಬಿದ ಕೆಲವೊಂದು ಪವರ್ಫುಲ್ ಫೀಚರ್ಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈಗ ಹೊಸ 2024 ವರ್ಷದಲ್ಲಿ ಕಂಪನಿಯು ಹಲವಾರು ಲೇಟೆಸ್ಟ್ ಅಪ್‍ಡೇಟ್‍ಗಳನ್ನು ತರಲು ಸಜ್ಜಾಗಿದೆ. ಅದರಲ್ಲೂ AI ಆಧಾರಿತ ಮತ್ತು ಬಳಕೆದಾರರ ಹೆಸರು (Username) ಫೀಚರ್ ಹೆಚ್ಚು ನಿರೀಕ್ಷೆಯಲ್ಲಿವೆ.

Also Read: 200MP ಕ್ಯಾಮೆರಾದ Redmi Note 13 5G Series ಇಂದು ಲಾಂಚ್! ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳೇನು?

What is the use of Username in WhatsApp?

ಇತ್ತೀಚೆಗೆ WhatsApp ಖಾತೆಗಳಿಗಾಗಿ ಬಳಕೆದಾರರ ನಂಬರ್ ಬದಲಿಗೆ ಹೆಸರನ್ನು ಐಡಿಯಾಗಿ ಬಳಸಲು ಪರೀಕ್ಷಿಸಲಾಗುತ್ತಿದೆ. ಇದರಿಂದ ಬಳಕೆದಾರರು ತಮ್ಮ ಫೋನ್ ಸಂಖ್ಯೆಗಳ ಬದಲಿಗೆ ತಮ್ಮ ಬಳಕೆದಾರ ಹೆಸರುಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ. ವೈಶಿಷ್ಟ್ಯವು ಅಭಿವೃದ್ಧಿಯಲ್ಲಿದೆ ಮತ್ತು ಆಯ್ದ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದೆ. ಇದು ಟ್ವಿಟ್ಟರ್‌ನಂತೆ ನಿಖರವಾಗಿ ಕಾರ್ಯನಿರ್ವಹಿಸುತ್ತದೆ. ಈ ವಾಟ್ಸಾಪ್ ಫೀಚರ್ನಲ್ಲೂ ಸಹ @ ಎಂಬ ಹ್ಯಾಂಡಲ್‌ ಚಿನ್ಹೆಯನ್ನು ಮೊದಲು ಬರೆದು ಬಳಕೆದಾರಹೆಸರನ್ನು ಬರೆದು ಬಳಸಬಹುದು ಈ ಮೂಲಕ ಯಾರಿಗೂ ನಿಮ್ಮ ಸಂಖ್ಯೆಯನ್ನು ಹಂಚಿಕೊಳ್ಳುವ ಅಗತ್ಯವಿರುವುದಿಲ್ಲ.

WhatsApp Username

ವೀಡಿಯೊ ಕರೆಯಲ್ಲಿ ಮ್ಯೂಸಿಕ್ ಶೇರಿಂಗ್

ವಾಟ್ಸಾಪ್‌ ಮತ್ತೊಂದು ಅದ್ಭುತ ಮತ್ತು ಬೆಸ್ಟ್ ಫೀಚರ್ ಚರ್ಚೆಯಲ್ಲಿರುವುದೆಂದರೆ ನೀವು ವೀಡಿಯೊ ಕರೆಯಲ್ಲಿರುವ ಸಮಯದಲ್ಲಿ ಮ್ಯೂಸಿಕ್ ಆಡಿಯೊವನ್ನು ಶೇರ್ ಮಾಡುವ ಆಯ್ಕೆಯನ್ನು ಹೊಂದಬಹುದು. ಅಂದ್ರೆ ವಿಡಿಯೋದೊಂದಿಗೆ ಆಡಿಯೋ ಮನರಂಜನೆ ಅಲ್ಲದೆ ಇದರಲ್ಲಿ ಸ್ಕ್ರೀನ್ ಶೇರಿಂಗ್ ಫೀಚರ್ ಕೂಡ ಇರಲಿದೆ. ಇದರ ವಿಶೇಷವೆಂದರೆ ಬಳಕೆದಾರರು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಿನಿಮಾ ಅಥವಾ ವಿಡಿಯೋಗಳನ್ನು ಆನಂದಿಸಲು ಸಾಧ್ಯವಾಗುತ್ತದೆ.

WhatsApp Username Feature

AI ಜೊತೆಗೆ ಚಾಟಿಂಗ್ ಸಾಧ್ಯ

ವಾಟ್ಸಾಪ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಅನ್ನು ರನ್ ಮಾಡಬಹುದಾದ ವೈಶಿಷ್ಟ್ಯದಲ್ಲಿ WhatsApp ಕಾರ್ಯನಿರ್ವಹಿಸುತ್ತಿದೆ. ಇದರ ಸಹಾಯದಿಂದ ಬಳಕೆದಾರರು ಚಾಟ್‌ಬಾಟ್‌ನೊಂದಿಗೆ ಚಾಟ್ ಮಾಡಲು ಸಾಧ್ಯವಾಗುತ್ತದೆ. ಅದರ ಸಹಾಯದಿಂದ ಬಳಕೆದಾರರು ಗ್ರಾಹಕ ಬೆಂಬಲವನ್ನು ಸಹ ಪಡೆಯುತ್ತಾರೆ. ಇದು ಹೊಸ ಸಾಧ್ಯತೆಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.

WhatsApp ಗ್ರೂಪ್‌ಗೆ ಹೊಸ ಫೀಚರ್‌ಗಳು

ವಾಟ್ಸಾಪ್ ಗ್ರೂಪ್‌ನಲ್ಲಿಯೂ ಹಲವು ದೊಡ್ಡ ಬದಲಾವಣೆಗಳು ಆಗಲಿವೆ. 2024 ರಲ್ಲಿ ಗ್ರೂಪ್ ಚಾಟ್‌ಗಳಿಗೆ ಇಂತಹ ಹಲವು ಹೊಸ ಅಪ್‌ಡೇಟ್‌ಗಳು ಬರಲಿವೆ. ಇದರಲ್ಲಿ ಗ್ರೂಪ್ ಪೋಲ್, ಸರ್ಚ್ ಆಯ್ಕೆ, ಗ್ರೂಪ್ ಈವೆಂಟ್ ಅನ್ನು ನಿಗದಿಪಡಿಸುವ ಆಯ್ಕೆಯೂ ಇರುತ್ತದೆ. ಈ ವೈಶಿಷ್ಟ್ಯದ ಲಾಂಚ್ ಟೈಮ್‌ಲೈನ್ ಅನ್ನು ವಾಟ್ಸಾಪ್ ಇನ್ನೂ ಬಿಡುಗಡೆ ಮಾಡಿಲ್ಲ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo