WhatsApp Silence Calls: ವಾಟ್ಸಾಪ್‌ನಿಂದ ಅಪರಿಚಿತ ಕರೆಗಳಿಗಾಗಿ ಹೊಸ Silence Calls ಫೀಚರ್ ಪರಿಚಯ!

Updated on 20-Jun-2023
HIGHLIGHTS

ಈ ಹೊಸ ವೈಶಿಷ್ಟ್ಯವು WhatsApp ಅನ್ನು ಇನ್ನಷ್ಟು ಖಾಸಗಿಯನ್ನಾಗಿ ಮಾಡುತ್ತದೆ

WhatsApp ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಅಪರಿಚಿತ ಸಂಖ್ಯೆಗಳಿಂದ ಕರೆಗಳನ್ನು ಸೈಲೆಂಟ್ ಮಾಡುತ್ತದೆ.

ವಾಟ್ಸಾಪ್‌ನಲ್ಲಿ ಈ ಅಪರಿಚಿತ ಕರೆ ಸೈಲೆಂಟ್ ಫೀಚರ್ ಬಳಸುವುದು ಹೇಗೆ?

WhatsApp Silence Calls: ಭಾರತದಲ್ಲಿ ಅತಿ ಹೆಚ್ಚಾಗಿ ಬಳಕೆಯಲ್ಲಿರುವ ಜನಪ್ರಿಯ ತ್ವರಿತ ಅಪ್ಲಿಕೇಶನ್ ವಾಟ್ಸಾಪ್ ಈಗ ಕರೆಗಳಿಗಾಗಿ ಹೊಸ ಫೀಚರ್ ಅನ್ನು ಪರಿಚಯಿಸಿದೆ. ಅಂದ್ರೆ ಇನ್ಮೇಲೆ ನಿಮಗೆ ಬರುವ ಅಪರಿಚಿತ ಸಂಖ್ಯೆಗಳ ಸ್ಪ್ಯಾಮ್ ಕರೆಗಳ ಹೆಚ್ಚಳದ ನಡುವೆ ಮೆಟಾ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಬಳಕೆದಾರರಿಗೆ ಅಂತಹ ಕರೆಗಳನ್ನು ಪ್ಲಾಟ್‌ಫಾರ್ಮ್‌ನಲ್ಲಿ ಆಟೋಮ್ಯಾಟಿಕ್ ಮ್ಯೂಟ್ ಮಾಡಲು ಅನುಮತಿಸುತ್ತದೆ. ಈ ಹೊಸ ವೈಶಿಷ್ಟ್ಯವು WhatsApp ಅನ್ನು ಇನ್ನಷ್ಟು ಖಾಸಗಿಯನ್ನಾಗಿ ಮಾಡುತ್ತದೆ ಮತ್ತು ಬಳಕೆದಾರರಿಗೆ ಹೆಚ್ಚಿನ ಕಂಟ್ರೋಲ್ ಪಡೆಯಲು ಅವಕಾಶ ನೀಡುತ್ತದೆ.

ಇನ್ಮೇಲೆ ಅಪರಿಚಿತ WhatsApp ಕರೆ ಸೈಲೆಂಟ್

ಈ ವೈಶಿಷ್ಟ್ಯವು ಸ್ವಲ್ಪ ಸಮಯದವರೆಗೆ ಬೀಟಾ ಪರೀಕ್ಷೆಯಲ್ಲಿದೆ. ಮತ್ತು ಸ್ಟೇಯಬಲ್ ಎಡಿಷನ್ ಈಗ Android ಮತ್ತು iOS ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಲಭ್ಯವಿದೆ. ಪ್ರೈವಸಿ ಸೆಟ್ಟಿಂಗ್‌ಗಳ ಮೆನು ಮೂಲಕ ಸಕ್ರಿಯಗೊಳಿಸಿದಾಗ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಅಪರಿಚಿತ ಸಂಖ್ಯೆಗಳಿಂದ ಕರೆಗಳನ್ನು ಸೈಲೆಂಟ್ ಮಾಡುತ್ತದೆ. ನಿಮ್ಮ ಫೋನ್‌ನಲ್ಲಿ ನೀವು WhatsApp ನ ಇತ್ತೀಚಿನ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಿರುವಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ ಅಥವಾ ಅದನ್ನು Google Play Store ಅಥವಾ Apple App Store ಮೂಲಕ ಅಪ್ಡೇಟ್ ಮಾಡಿಕೊಂಡು ಬಳಸಿ.

https://twitter.com/WABetaInfo/status/1671055515298807808?ref_src=twsrc%5Etfw

ವಾಟ್ಸಾಪ್‌ನಲ್ಲಿ ಈ ಅಪರಿಚಿತ ಕರೆ ಸೈಲೆಂಟ್ ಫೀಚರ್ ಬಳಸುವುದು ಹೇಗೆ?

ಮೊದಲಿಗೆ WhatsApp ತೆರೆಯಿರಿ ಮತ್ತು ನೀವು ಕರೆಯನ್ನು ಸೈಲೆಂಟ್ ಮಾಡಲು ಬಯಸುವ ಚಾಟ್‌ಗೆ ಹೋಗಿ.

ಅವರ ಪ್ರೊಫೈಲ್ ತೆರೆಯಲು ಚಾಟ್‌ನ ಮೇಲ್ಭಾಗದಲ್ಲಿರುವ ಅವರ ಹೆಸರನ್ನು ಟ್ಯಾಪ್ ಮಾಡಿ.

ನಂತರ "ಕಸ್ಟಮ್ ನೋಟಿಫಿಕೇಶನ್" ವಿಭಾಗಕ್ಕೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಅದರ ಮೇಲೆ ಟ್ಯಾಪ್ ಮಾಡಿ.

ನಂತರ "ಕಸ್ಟಮ್ ನೋಟಿಫಿಕೇಶನ್ ಬಳಸಿ" ಆಯ್ಕೆಯನ್ನು ಟಾಗಲ್ ಮಾಡಿ.

ನಂತರ "ಕಾಲ್ ನೋಟಿಫಿಕೇಶನ್" ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು "ಯಾವುದೂ ಇಲ್ಲ" ಆಯ್ಕೆಮಾಡಿ.

ಬದಲಾವಣೆಗಳನ್ನು ಸೇವ್ ಮಾಡಿಡಲು ಸೇವ್ ಮೇಲೆ ಟ್ಯಾಪ್ ಮಾಡಿ ಅಷ್ಟೇ.

ಈ ಹಂತಗಳನ್ನು ಅನುಸರಿಸಿದ ನಂತರ ಆ ನಿರ್ದಿಷ್ಟ ಸಂಪರ್ಕದಿಂದ ಕರೆಗಳಿಗೆ ನೀವು ಇನ್ನು ಮುಂದೆ ಯಾವುದೇ ವಾಯ್ಸ್ ಅಥವಾ ಕಂಪನ ನೋಟಿಫಿಕೇಶನ್ಗಳನ್ನು ಸ್ವೀಕರಿಸುವುದಿಲ್ಲ. ನಿಮ್ಮ ಚಾಟ್ ಪಟ್ಟಿಯಲ್ಲಿ ನೀವು ಇನ್ನೂ ಮಿಸ್ಡ್ ಕಾಲ್ ಅಧಿಸೂಚನೆಗಳನ್ನು ಸ್ವೀಕರಿಸುತ್ತೀರಿ. ಮೆಟಾ ವಾಟ್ಸಾಪ್‌ಗೆ ಪ್ರತಿ ವಾರ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :