WhatsApp Blocked more than 2 crore accounts in India: ಜನಪ್ರಿಯ ಮತ್ತು ಅತಿ ಹೆಚ್ಚು ಜನರು ಬಳಸುತ್ತಿರುವ ಮೆಟಾ-ಮಾಲೀಕತ್ವದ ಮೆಸೇಜಿಂಗ್ ವಾಟ್ಸಾಪ್ (WhatsApp) ಭಾರತದಲ್ಲಿ ಜನವರಿಯಿಂದ ಮಾರ್ಚ್‌ವರೆಗೆ 2 ಕೋಟಿಗೂ ಅಧಿಕ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಿದೆ. ವಾಟ್ಸಾಪ್ (WhatsApp) ತನ್ನ ಬಳಕೆದಾರರ ಉತ್ತಮ ಅನುಭವಕ್ಕಾಗಿ ಒಂದಿಷ್ಟು ನಿಯಮಗಳು ಮತ್ತು ಷರತ್ತುಗಳನ್ನು ತುಂಬ ಕಟ್ಟುನಿಟ್ಟಾಗಿ ನಿರ್ವಹಿಸುತ್ತಿದೆ. ಭಾರತದಲ್ಲಿ ಈ ವರ್ಷದ 2024 ಜನವರಿಯಿಂದ ಮಾರ್ಚ್‌ವರೆಗೆ ಸುಮಾರು 2 ಕೋಟಿ 23 ಲಕ್ಷಕ್ಕೂ ಅಧಿಕ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಿರುವುದಾಗಿ ವರದಿಯಾಗಿದೆ.
ಈ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ (WhatsApp) ನೀಡುವ ಅಂಕಿ ಅಂಶಗಳನ್ನು ನೋಡುವುದಾದರೆ ಪ್ಲಾಟ್‌ಫಾರ್ಮ್ ಮತ್ತು ಮೆಸೇಜಿಂಗ್ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್ WhatsApp LLC ಭಾರತದಲ್ಲಿ ಜನವರಿ-ಮಾರ್ಚ್ ಅವಧಿಯಲ್ಲಿ 2,23,10,000 ಖಾತೆಗಳನ್ನು ನಿಷೇಧಿಸಿದೆ. ಇದನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಸುಮಾರು ದ್ವಿಗುಣವಾಗಿರುವುದು ಅಚ್ಚರಿ ಮೂಡಿಸುತ್ತದೆ. ಅಂದರೆ ಇದರ ಮೂಲ ನಕಲಿ ಖಾತೆಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಯಾಗಿರುವುದು ನೇರವಾಗಿ ಕಾಣುತ್ತದೆ.
ಅಲ್ಲದೆ ಮಾರ್ಚ್ ತಿಂಗಳೊಂದರಲ್ಲೇ 7,954,000 ಖಾತೆಗಳನ್ನು ನಿಷೇಧಿಸಿದೆ. ಅದರಲ್ಲಿ 1,430,000 ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ. ಈ ಕಾರಣಗಳನ್ನು ಭಾರತ ಸರ್ಕಾರದ 2021 ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಮಾಡಲಾಗಿದ್ದು ಭಾರತದಲ್ಲಿ ಆನ್‌ಲೈನ್ ವಂಚನೆ ಮತ್ತು ಬಳಕೆದಾರರ ಸುರಕ್ಷತೆಯು ದೊಡ್ಡ ಕಾಳಜಿಯಾಗುತ್ತಿದೆ. ಈ ಮೂಲಕ ವಾಟ್ಸಾಪ್ ಖಾತೆಗಳನ್ನು ಏಕೆ ಬ್ಲಾಕ್ ಮಾಡಲಾಗುತ್ತಿದೆ ಎನ್ನುವದನ್ನು ಈ ಕೆಳಗೆ ಪ್ರಮುಖ 3 ಕಾರಣಗಳೊಂದಿಗೆ ತಿಳಿಯೋಣ.
ಸಾಮಾನ್ಯವಾಗಿ ಭಾರತದಲ್ಲಿ ವಾಟ್ಸಾಪ್ ಖಾತೆಗಳು ಬ್ಲಾಕ್ ಆಗಲು ಮೊದಲ ಕಾರಣ ಅಂದ್ರೆ ಅನೇಕ ಭಾರತೀಯ ಬಳಕೆದಾರರು WhatsApp ದೂರು ಪರಿಹಾರ ವ್ಯವಸ್ಥೆಯ ಮೂಲಕ ದೂರುಗಳನ್ನು ಸಲ್ಲಿಸಿದ್ದರು. ಆ ದೂರುಗಳ ಆಧಾರದ ಮೇಲೆ ಕೆಲವು ಖಾತೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದ್ದು ಯಾರೇ ಖಾತೆಗಳನ್ನು ಅತಿ ಹೆಚ್ಚಾಗಿ ರಿಪೋರ್ಟ್ ಮಾಡುವುದರಿಂದ ವಾಟ್ಸಾಪ್ (WhatsApp) ಅಂತಹ ಖಾತೆಗಳನ್ನು ಡಿಲೀಟ್ ಅಥವಾ ಬ್ಯಾನ್ ಮಾಡಲು ನಿರ್ಧರಿಸುತ್ತದೆ.
ವಾಟ್ಸಾಪ್ ಖಾತೆಗಳು ಬ್ಲಾಕ್ ಆಗಲು ಮತ್ತೊಂದು ಕಾರಣವೆಂದರೆ ಕೆಲವು ಖಾತೆಗಳು ಭಾರತೀಯ ಕಾನೂನು ಅಥವಾ ವಾಟ್ಸಾಪ್‌ನ ಸ್ವಂತ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಮುಚ್ಚಲಾಗಿದೆ. ಅಂತಹ ಖಾತೆಗಳನ್ನು ಸೆರೆಹಿಡಿಯಲು WhatsApp ಸ್ವತಃ ವಿಧಾನಗಳನ್ನು ಬಳಸುತ್ತದೆ. ಅಂದ್ರೆ ವಾಟ್ಸಾಪ್ ಹೊಂದಿರುವ ನಿಯಮಗಳನ್ನು ಯಾರು ಉಲ್ಲೇಖಿಸುತ್ತಾರೋ ಅವರ ಖಾತೆಗಳು ಹೇಳದೆ ಕೇಳದೆ ನಿಷೇಧಿಸಲಾಗುತ್ತದೆ.
Also Read: ಭಾರತದಲ್ಲಿ ಸದ್ದಿಲ್ಲದೇ Google Wallet ಲಾಂಚ್! ಯಾರ್ಯಾರಿಗೆ ಸಿಗುತ್ತೆ? ಇದು ಹೇಗೆ ಕೆಲಸ ಮಾಡುತ್ತದೆ ತಿಳಿಯಿರಿ!
ಕೆಲವು ಪ್ರಕರಣಗಳಲ್ಲಿ ಕುಂದುಕೊರತೆ ಮೇಲ್ಮನವಿ ಸಮಿತಿ (GAC – Grievance Appellate Committee) ಕೆಲವು ಖಾತೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ವಾಟ್ಸಾಪ್‌ಗೆ ಆದೇಶಿಸಿತ್ತು ಇದರ ಕಾರಣವಾಗಿಯೂ ಸಹ ಲಕ್ಷಾಂತರ WhatsApp ಖಾತೆಗಳನ್ನು ಈ ಆದೇಶದಡಿಯಲ್ಲಿ ಬ್ಲಾಕ್ ಮಾಡಲಾಗಿದೆ. ಅಲ್ಲದೆ ಈ 2024 ವರ್ಷದ ವಾಟ್ಸಾಪ್ ವರದಿಯನ್ನು ನೋಡಿದರೆ ಅದರಲ್ಲೂ ಕೇವಲ ಜನವರಿ, ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ತಿಂಗಳಲ್ಲಿ ಅತಿ ಹೆಚ್ಚು ಖಾತೆಗಳನ್ನು ಮುಚ್ಚಲಾಗಿದ್ದು ಜನವರಿಯಲ್ಲಿಯೇ ಸುಮಾರು 67 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಲಾಕ್ ಮಾಡಿದ್ದೂ ಇದೆ ವಿಭಾಗದಲ್ಲಿ ಸುಮಾರು 13 ಲಕ್ಷಕ್ಕೂ ಹೆಚ್ಚು ಖಾತೆಗಳು ಬಳಕೆದಾರರು ದೂರು ನೀಡುವ ಮೊದಲೇ ನಿಷ್ಕ್ರಿಯಗೊಳಿಸಲಾಗಿದೆ.
ಈ ಕದನ ಇಲ್ಲಿಗೆ ನಿಲ್ಲದೆ ಮತ್ತೆ WhatsApp ಹೆಚ್ಚಿನ ಖಾತೆಗಳನ್ನು ನಿರ್ಬಂಧಿಸುವುದನ್ನು ಮುಂದುವರೆಸಲಾಗುವುದನ್ನು ತೋರಿಸಿದೆ. ಮುಂಬರಲಿರುವ ಮತ್ತೆ 6 ತಿಂಗಳಲ್ಲಿ ಒಂದಿಷ್ಟು ಲಕ್ಷ ವಾಟ್ಸಾಪ್ ಖಾತೆಗಳನ್ನು ಅದರಲ್ಲೂ ಈ ಮೇಲಿನ 3 ಪ್ರಮುಖ ಕಾರಣಗಳೊಂದಿಗೆ ಬೇರೆ ಗಂಭೀರ ವಿಷಯ ಮತ್ತು ಭಾರತ ಸರ್ಕಾರದ 2021 ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಬ್ಲಾಕ್ ಅಥವಾ ಬ್ಯಾನ್ ಮಾಡುವ ಹಂತದಲ್ಲಿದೆ. ಆದ್ದರಿಂದ ವಾಟ್ಸಾಪ್ ಬಳಕೆದಾರರೇ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಲು ಕೊಂಚ ಹೆಚ್ಚು ಗಮನ ಹರಿಸಿ ಇಲ್ಲ ಸಲ್ಲದ ಮೆಸೇಜ್, ಲಿಂಕ್ ಅಥವಾ ವಿಡಿಯೋಗಳನ್ನು ಇಷ್ಟ ಬಂದಂತೆ ಬಳಸಬೇಡಿ. ಒಮ್ಮೆ ನಿಮ್ಮ ಖಾತೆ ಡಿಲೀಟ್ ಆದ್ರೆ ಮತ್ತೆ ಸಿಗೋದು ಸಿಕಾಪಟ್ಟೆ ಕಷ್ಟ ಅಥವಾ ಸಿಗದೇ ಯೂ ಹೋಗಬಹುದು ಆದ್ದರಿಂದ ಮಾಹಿತಿ ಇಷ್ಟವಾದರೆ ತಿಳಿಯೋದಿಲ್ಲವದರೊಂದಿಗೆ ಹಂಚಿಕೊಳ್ಳಿ.