WhatsApp News: ದೇಶದಲ್ಲಿ ಇತ್ತೀಚಿನ ವರದಿಯ ಪ್ರಕಾರ ಫೆಬ್ರವರಿ 2023 ರಲ್ಲಿ 45 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು ವಾಟ್ಸಾಪ್ ಬ್ಯಾನ್ ಮಾಡಿದೆ. ವಾಟ್ಸಾಪ್ ಪ್ರತಿ ತಿಂಗಳು ಬಳಕೆದಾರರ ಸುರಕ್ಷತೆಯ ವರದಿಯನ್ನು ಪ್ರಕಟಿಸುತ್ತದೆ. ವರದಿಯು ಬಳಕೆದಾರರ ದೂರುಗಳು, ಮುಂಬರುವ ತಿಂಗಳಲ್ಲಿ ಪ್ಲಾಟ್‌ಫಾರ್ಮ್ ಬ್ಯಾನ್ ಮಾಡುವ ಖಾತೆಗಳ ಸಂಖ್ಯೆ ಮತ್ತು ಇತರ ಮಾಹಿತಿಯನ್ನು ವಿವರಿಸುತ್ತದೆ. ಬಳಕೆದಾರರ ಸುರಕ್ಷತೆಯ ಕುರಿತು ಮೆಟಾ ಒಡೆತನದ ಪ್ಲಾಟ್‌ಫಾರ್ಮ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಪ್ರಕಾರ ಫೆಬ್ರವರಿ 2023 ರಲ್ಲಿ 45 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು WhatsApp ಬ್ಯಾನ್ ಮಾಡಿದೆ.
ಮಾಹಿತಿ ತಂತ್ರಜ್ಞಾನ (Intermediary Guidelines and Digital Media Ethics Code) ನಿಯಮಗಳು 2021 ರ ನಿಯಮ 4(1)(d) ಗೆ ಅನುಸಾರವಾಗಿ WhatsApp ಭಾರತೀಯ ಬಳಕೆದಾರರ ಖಾತೆಗಳನ್ನು ಬ್ಯಾನ್ ಮಾಡಿದೆ. ಮೆಟಾದ ಇತ್ತೀಚಿನ ವರದಿಯ ಪ್ರಕಾರ ಜನವರಿ 1 ಮತ್ತು ಫೆಬ್ರವರಿ 28, 2023 ರ ನಡುವೆ 4,597,400 ಭಾರತೀಯ ಬಳಕೆದಾರರನ್ನು ಬ್ಯಾನ್ ಮಾಡಲಾಗಿದೆ. ಭಾರತದಲ್ಲಿ ಬಳಕೆದಾರರಿಂದ ಬಂದ ದೂರುಗಳಿಗೆ ಪ್ರತಿಕ್ರಿಯೆಯಾಗಿ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ. ಭಾರತೀಯ ಕಾನೂನು ಅಥವಾ WhatsApp ಸೇವಾ ನಿಯಮಗಳ ಉಲ್ಲಂಘನೆಗಾಗಿ ಅದರ ತಡೆಗಟ್ಟುವಿಕೆ ಮತ್ತು ಪತ್ತೆ ವಿಧಾನಗಳನ್ನು ಬಳಸಿಕೊಂಡು WhatsApp ಈ ಖಾತೆಗಳ ವಿರುದ್ಧ ಕ್ರಮ ಕೈಗೊಂಡಿದೆ.
ವರದಿಯ ಪ್ರಕಾರ 4,597,400 ಬ್ಯಾನ್ ಆದ ಖಾತೆಗಳಲ್ಲಿ ಸರಿಸುಮಾರು 1,298,000 ಖಾತೆಗಳನ್ನು ಬಳಕೆದಾರರ ಯಾವುದೇ ದೂರುಗಳಿಲ್ಲದಿದ್ದರೂ WhatsApp ನಿಂದ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಲಾಗಿದೆ. WhatsApp ತನ್ನ ತಿಂಗಳ ವರದಿಯಲ್ಲಿ 2,804 ದೂರುಗಳ ವರದಿಗಳನ್ನು ಪಡೆದುಕೊಂಡಿದೆ ಎಂದು ಬಹಿರಂಗಪಡಿಸಿದೆ. ಅದರಲ್ಲಿ 12,548 ಖಾತೆಯ ಬ್ಯಾನ್ಗಾಗಿ ಮರು ವಿನಂತಿಗಳನ್ನು ಮಾಡಲಾಗಿದೆ. ಆದರೆ WhatsApp ಇವುಗಳಲ್ಲಿ 495 ವಿರುದ್ಧ ಕ್ರಮ ತೆಗೆದುಕೊಂಡಿತು.
ಇನ್ನು 14 ಸುರಕ್ಷತೆಗೆ ಸಂಬಂಧಿಸಿದ ವರದಿಗಳನ್ನು ಸ್ವೀಕರಿಸಿದೆ ಮತ್ತು ಅದರಲ್ಲಿ 2 ಖಾತೆಗಳ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗಿದೆ. WhatsApp ಜನವರಿಗಿಂತ ಎರಡು ಪಟ್ಟು ಹೆಚ್ಚು ಬಳಕೆದಾರರನ್ನು ಫೆಬ್ರವರಿಯಲ್ಲಿ ಬ್ಯಾನ್ ಮಾಡಿದೆ. ಆರಂಭದಲ್ಲಿ WhatsApp ಜನವರಿಯಲ್ಲಿ 2,918,000 ಖಾತೆಗಳನ್ನು ಬ್ಯಾನ್ ಮಾಡಿದೆ. ಆದರೆ ಫೆಬ್ರವರಿಯಲ್ಲಿ 16,79,400 ಹೆಚ್ಚಿನ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ.