WhatsApp Audio Chat: ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ನಲ್ಲಿ ಬಳಕೆದಾರರು ನಿರಂತರವಾಗಿ ಹೊಸ ಫೀಚರ್‌ಗಳನ್ನು ಪಡೆಯುತ್ತಿದ್ದಾರೆ. ಇದನ್ನು ಎಲ್ಲರಿಗೂ ಪರಿಚಯ ಮಾಡುವ ಮೊದಲು ಬೀಟಾ ಆವೃತ್ತಿಗಳಲ್ಲಿ ಪರೀಕ್ಷಿಸಲಾಗುತ್ತದೆ ಮೆಟಾ-ಮಾಲೀಕತ್ವದ ಅಪ್ಲಿಕೇಶನ್ ಈಗ ಆಡಿಯೋ ಚಾಟ್ಸ್ ಎಂಬ ಹೊಸ ಫೀಚರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಚಾಟಿಂಗ್ ಅನುಭವವನ್ನು ಎಂದಿಗಿಂತಲೂ ಸುಲಭ ಮತ್ತು ಹೆಚ್ಚು ಆನಂದದಾಯಕವಾಗಿಸುತ್ತದೆ. ಆಂಡ್ರಾಯ್ಡ್ ಅಪ್ಲಿಕೇಶನ್‌ನ ಬೀಟಾ ಆವೃತ್ತಿಯ ಬಳಕೆದಾರರಿಗೆ ಈ ಫೀಚರ್ ಅನ್ನು ನೀಡಲಾಗಿದೆ.
WABetalnfo ಪ್ರಕಾರ WhatsApp ಅಪ್ಲಿಕೇಶನ್‌ನ ಚಾಟ್ ಹೆಡರ್‌ನಲ್ಲಿ ಹೊಸ ವೇವ್‌ಫಾರ್ಮ್ ಐಕಾನ್ ಅನ್ನು ಸೇರಿಸಲಾಗಿದೆ. ಈಗ ಮೆಸೇಜ್ ಟೈಪ್ ಮಾಡುವ ಅಗತ್ಯವಿಲ್ಲ. ಬಳಕೆದಾರರು ಈ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಆಡಿಯೊ ಚಾಟ್‌ಗಳನ್ನು ಸುಲಭವಾಗಿ ಆಯ್ಕೆ ಮಾಡಬಹುದು.ಇದರ ಹೊರತಾಗಿ WhatsApp ಕರೆಯಲ್ಲಿರುವಾಗ ಕೆಂಪು ಬಟನ್ ಅನ್ನು ಒತ್ತುವ ಮೂಲಕ ಬಳಕೆದಾರರು ಕರೆಗಳನ್ನು ಕೊನೆಗೊಳಿಸುವ ಸುಲಭವಾದ ಆಯ್ಕೆಯನ್ನು ಸಹ ಪಡೆಯುತ್ತಾರೆ.
ಹೊಸ ವೇವ್‌ಫಾರ್ಮ್ ಐಕಾನ್‌ನಿಂದಾಗಿ ರಿಯಲ್ ಟೈಮ್ ಆಡಿಯೊ ವಿಶುವಲೈಸೆಷನ್ ಸಮಯದಲ್ಲಿ ಅದರ ಪ್ರಯೋಜನವು ಲಭ್ಯವಿರುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಚಾಟ್ ಹೆಡರ್‌ನ ಮೇಲಿರುವ ಈ ಸ್ಥಳವನ್ನು ಆಡಿಯೊ ವೇವ್‌ಫಾರ್ಮ್ ಗಳನ್ನು ತೋರಿಸಲು ಮೀಸಲಿಡಬಹುದು ಎಂದು ವರದಿ ಹೇಳುತ್ತದೆ. ಅಂದರೆ ಕನಿಷ್ಠ ಇಂಟರ್‌ಫೇಸ್‌ನಲ್ಲಿ ಬಳಕೆದಾರರು ಆಡಿಯೊ ಮೆಸೇಜ್ ಅನ್ನು ಪ್ಲೇ ಮಾಡುವಾಗ ಆಡಿಯೊ ವೇವ್‌ಫಾರ್ಮ್‌ಗಳನ್ನು ನೋಡುವುದನ್ನು ಮುಂದುವರಿಸುತ್ತಾರೆ. ಅವರು ಚಾಟ್ ವಿಂಡೋವನ್ನು ಮುಚ್ಚಿದಾಗ ಆಡಿಯೊ ಮೀಟರ್ ಕಾಣಿಸುತ್ತದೆ.
ಈ ಫೀಚರ್ ಅಭಿವೃದ್ಧಿ ಹಂತದಲ್ಲಿರುವುದರಿಂದ ಅದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಕಾಯಬೇಕಾಗುತ್ತದೆ. ಈ ಅಪ್ಲಿಕೇಶನ್ ಹೆಚ್ಚುವರಿ ಫೀಚರ್‌ಗಳನ್ನು ಒಳಗೊಂಡಿರುತ್ತದೆ. WhatsApp ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಗ್ರೂಪ್ ಅಡ್ಮಿನ್ಸ್ ದೊಡ್ಡ ಗ್ರೂಪ್ ವೀಡಿಯೊ ಕರೆಗಳನ್ನು ಹೋಸ್ಟ್ ಮಾಡುವ ಆಯ್ಕೆಯನ್ನು ಈ ಹೊಸ ಫೀಚರ್‌ನಲ್ಲಿ ಪಡೆಯುತ್ತಾರೆ. ಇದರೊಂದಿಗೆ 8 ಜನರು ವೀಡಿಯೊ ಕರೆಗಳಿಗೆ ಸೇರಬಹುದು ಮತ್ತು 32 ಜನರು ಆಡಿಯೊ ಕರೆಗಳಿಗೆ ಸೇರಬಹುದು. ಅಲ್ಲದೆ WhatsApp ಮತ್ತೊಂದು ಹೊಸ ಫೀಚರ್ ಹೊಂದಿದ್ದು ಬಳಕೆದಾರರು ಒಂದೇ ಖಾತೆಗೆ ಹಲವಾರು ಡಿವೈಸ್‌ಗಳನ್ನು ಲಿಂಕ್ ಮಾಡುವ ಆಯ್ಕೆ ಸಹ ಸೇರಿಸಲಾಗಿದೆ.