ಇದರರ್ಥ ಕೆಲ ಬಳಕೆದಾರರು ಇನ್ಮುಂದೆ ತಮ್ಮ ಸ್ಮಾರ್ಟ್ಫೋನ್ಗಳಲ್ಲಿ WhatsApp ಅನ್ನು ಬಳಸಲಾಗುವುದಿಲ್ಲ.
ಈ 2019 ವರ್ಷದಲ್ಲಿ ಇನ್ಸ್ಟೆಂಟ್ ಮೆಸೇಜಿಂಗ್ ಅಪ್ಲಿಕೇಶನ್ ಇಂದು WhatsApp ಕೆಲವು ಸ್ಮಾರ್ಟ್ಫೋನ್ಗಳನ್ನು ನಿಲ್ಲಿಸುತ್ತಿದೆ. ಇದರರ್ಥ ಕೆಲವು ಬಳಕೆದಾರರು ಇನ್ನು ಮುಂದೆ ತಮ್ಮ ಸ್ಮಾರ್ಟ್ಫೋನ್ಗಳಲ್ಲಿ WhatsApp ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಈ ಹೊಸ ಫೀಚರ್ಗಳ ಸಾಫ್ಟ್ವೇರ್ ಹೊಸ ಆವೃತ್ತಿಯಲ್ಲಿ (ವರ್ಷನ್) ಮಾತ್ರ ಕೆಲಸ ಮಾಡಲಿವೆ.
ಇದರಿಂದಾಗಿ ಕೆಲವು ಸ್ಮಾರ್ಟ್ಫೋನ್ಗಳು ಈ ವೈಶಿಷ್ಟ್ಯಗಳನ್ನು WhatsApp ಗೆ ಬೆಂಬಲಿಸುವುದಿಲ್ಲವೆಂದು ಕಂಪನಿ ಹೇಳಿದೆ. WhatsApp ಇನ್ನು ಮುಂದೆ ಈ ಫೋನ್ಗಳಲ್ಲಿ ಬೆಂಬಲಿಸುವುದಿಲ್ಲವೆಂದು ಆ ಸ್ಮಾರ್ಟ್ಫೋನ್ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದಲ್ಲದೆ ಕಂಪನಿಯು 2020 ರಲ್ಲಿ ಆಂಡ್ರಾಯ್ಡ್ ಜಿಂಜರ್ಬ್ರೆಡ್ ಮತ್ತು iOS 7 ಅಥವಾ ಕಡಿಮೆ ಆವೃತ್ತಿಗಳಲ್ಲಿ ಕೆಲಸ ಮಾಡುವ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಲ್ಲಿ WhatsApp ಬೆಂಬಲವನ್ನು ನಿಲ್ಲಿಸಲಿದೆ ಎಂದು ಹೇಳಿದೆ.
- Android ವರ್ಷನ್ಗಿಂತ 2.3.3 ಹಳೆಯದು
- ವಿಂಡೋಸ್ ಫೋನ್ 8.0 ಅಥವಾ ಅದಕ್ಕಿಂತ ಹಳೆಯದು
- iPhone 3GS/iOS 6
- Nokia Symbian S60
- ಬ್ಲ್ಯಾಕ್ಬೆರಿ ಸಾಫ್ಟ್ವೇರ್ ಮತ್ತು ಬ್ಲ್ಯಾಕ್ಬೆರಿ 10
- Nokia S40
- ಆಂಡ್ರಾಯ್ಡ್ ವರ್ಷನ್ 2.3.7 ಅಥವಾ ಹಳೆಯದು.
- iOS 7 ಅಥವಾ ಹಳೆಯ ವರ್ಷನ್
ಫೋನ್ಗಳಲ್ಲಿ ಇನ್ಮುಂದೆ ವಾಟ್ಸಾಪ್ ಅಪ್ಲಿಕೇಶನ್ ನಡೆಯುವುದಿಲ್ಲವಾಗಿ ಪಟ್ಟಿ ಮಾಡಿದೆ. ಅಂದ್ರೆ ಒಟ್ಟಾರೆಯಾಗಿ ಸದ್ಯಕ್ಕೆ ಹಳೆಯ ಸಾಫ್ಟ್ವೇರ್ ಅನ್ನು ಬಳಸುವ ಬಳಕೆದಾರರು ಹೊಸ ಆವೃತ್ತಿಗೆ ಅಪ್ಗ್ರೇಡ್ ಮಾಡಬೇಕಾಗುತ್ತದೆ. WhatsApp ಇನ್ನು ಮುಂದೆ ಈ ಫೋನ್ಗಳಲ್ಲಿ ಬೆಂಬಲಿಸುವುದಿಲ್ಲವೆಂದು ಆ ಸ್ಮಾರ್ಟ್ಫೋನ್ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ನ್ಯೂಸ್ಗಳಿಗಾಗಿ ಡಿಜಿಟ್ ಕನ್ನಡ ಫೇಸ್ಬುಕ್ ಪೇಜ್ ಮತ್ತು ಯೂಟ್ಯೂಬ್ ಚಾನಲನ್ನು ಲೈಕ್ ಹಾಗು ಫಾಲೋ ಮಾಡಿ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile