ವಾಟ್ಸಾಪ್‌ ಬಳಕೆದಾರರ ಭದ್ರತೆಗಾಗಿ 3 ಹೊಸ ಫೀಚರ್‌ಗಳ ಪರಿಚಯ! ಯಾವ ಫೀಚರ್ಗಳು ನೀವೇ ನೋಡಿ!

ವಾಟ್ಸಾಪ್‌ ಬಳಕೆದಾರರ ಭದ್ರತೆಗಾಗಿ 3 ಹೊಸ ಫೀಚರ್‌ಗಳ ಪರಿಚಯ! ಯಾವ ಫೀಚರ್ಗಳು ನೀವೇ ನೋಡಿ!
HIGHLIGHTS

ವಾಟ್ಸಾಪ್‌ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಸುಧಾರಿಸುವ ಸಲುವಾಗಿ WhatsApp ವಿವಿಧ ಭದ್ರತಾ ಫೀಚರ್‌ಗಳನ್ನು ಅನಾವರಣಗೊಳಿಸಿದೆ.

ಗ್ರಾಹಕರಿಗೆ ಹೆಚ್ಚಿನ ಗೌಪ್ಯತೆ ಮತ್ತು ಅವರ ಮೆಸೇಜ್ಗಳ ಮೇಲೆ ನಿಯಂತ್ರಣವನ್ನು ನೀಡುವ ಸಲುವಾಗಿ WhatsApp ಈ ಫೀಚರ್‌ಗಳನ್ನು ಅನಾವರಣ

ಇದನ್ನು ಪರಿಶೀಲಿಸುವ ಸಲುವಾಗಿಯೇ WhatsApp ಈ ಫೀಚರ್‌ ಅನ್ನು ಜಾರಿಗೆ ತಂದಿದೆ.

WhatApp News: ವಾಟ್ಸಾಪ್‌ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಸುಧಾರಿಸುವ ಸಲುವಾಗಿ WhatsApp ವಿವಿಧ ಭದ್ರತಾ ಫೀಚರ್‌ಗಳನ್ನು ಅನಾವರಣಗೊಳಿಸಿದೆ. ಗ್ರಾಹಕರಿಗೆ ಹೆಚ್ಚಿನ ಗೌಪ್ಯತೆ ಮತ್ತು ಅವರ ಮೆಸೇಜ್ಗಳ ಮೇಲೆ ನಿಯಂತ್ರಣವನ್ನು ನೀಡುವ ಸಲುವಾಗಿ WhatsApp ಈ ಫೀಚರ್‌ಗಳನ್ನು ಅನಾವರಣಗೊಳಿಸಿದ್ದು ಇದರಲ್ಲಿ ಅಕೌಂಟ್ ಪ್ರೊಟೆಕ್ಟ್, ಡಿವೈಸ್ ವೆರಿಫಿಕೇಷನ್ ಮತ್ತು ಆಟೋಮ್ಯಾಟಿಕ್ ಸೆಕ್ಯೂರಿಟಿ ಕೋಡ್‌ಗಳಂತಹ ಫೀಚರ್‌ಗಳನ್ನು ಪ್ರಕಟಿಸಿದೆ. ಮುಂಬರುವ ತಿಂಗಳಿನಲ್ಲಿ ಈ ಹೊಸ ಫೀಚರ್‌ಗಳನ್ನು ಬಿಡುಗಡೆ ಮಾಡಲಾಗುವುದು.

WhatsApp ಅಕೌಂಟ್ ಪ್ರೊಟೆಕ್ಟ್ ಫೀಚರ್ 

ಬಳಕೆದಾರರು ತಮ್ಮ WhatsApp ಅಕೌಂಟ್ ಅನ್ನು ಹೊಸ ಮೊಬೈಲ್‌ಗೆ ವರ್ಗಾಯಿಸಿದಾಗ ಎರಡು ಬಾರಿ ಪರಿಶೀಲಿಸುವ ಹೊಚ್ಚಹೊಸ ಫೀಚರ್‌ಗಳಲ್ಲಿ ಅಕೌಂಟ್ ಪ್ರೊಟೆಕ್ಟ್ ಕೂಡ ಒಂದು. ಬಳಕೆದಾರರು ಹೆಚ್ಚುವರಿ ಭದ್ರತಾ ಪರಿಶೀಲನೆಗಾಗಿ ಈ ಕ್ರಮವನ್ನು ತೆಗೆದುಕೊಳ್ಳಲು ಬಯಸುತ್ತಾರೆ ಎಂಬುದನ್ನು ಪರಿಶೀಲಿಸಲು WhatsApp ಹಳೆಯ ಮೊಬೈಲ್ ಅನ್ನು ಕೇಳುತ್ತದೆ. ನಿಮ್ಮ ಅಕೌಂಟ್ ಅನ್ನು ಮತ್ತೊಂದು ಮೊಬೈಲ್‌ಗೆ ವರ್ಗಾಯಿಸಲು ಅನಧಿಕೃತ ಪ್ರಯತ್ನವನ್ನು ಮಾಡಿದರೆ ಬಳಕೆದಾರರಿಗೆ ಈ ಫೀಚರ್‌ ಎಚ್ಚರಿಸುತ್ತದೆ.

WhatsApp ಡಿವೈಸ್ ವೆರಿಫಿಕೇಷನ್ ಫೀಚರ್ 

ವಾಟ್ಸಾಪ್‌ನ ಡಿವೈಸ್ ವೆರಿಫಿಕೇಷನ್ ಬಳಕೆದಾರರಿಗೆ ತಿಳಿಯದೆ ತಮ್ಮ ಫೋನ್ ಅನ್ನು ಬಳಸಿ ಅನಗತ್ಯ ಮೆಸೇಜ್ಗಳನ್ನು ಕಳುಹಿಸುವ ಮೊಬೈಲ್ ವೈರಸ್‌ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಬಳಕೆದಾರರ ಅಕೌಂಟ್ ಗಳನ್ನು ದೃಢೀಕರಿಸಲು ಮತ್ತು ಅವರ ಮೊಬೈಲ್‌ ವಶ ಮಾಡಿಕೊಂಡರೆ ಅದನ್ನು ರಕ್ಷಿಸಲು ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಇದನ್ನು ಪರಿಶೀಲಿಸುವ ಸಲುವಾಗಿಯೇ WhatsApp ಈ ಫೀಚರ್‌ ಅನ್ನು ಜಾರಿಗೆ ತಂದಿದೆ.

WhatsApp ಸೆಕ್ಯೂರಿಟಿ ಕೋಡ್ ಫೀಚರ್ 

ಸೆಕ್ಯೂರಿಟಿ ಕೋಡ್ ಪರಿಶೀಲನೆ ಫೀಚರ್ ಯಾವಾಗಲೂ WhatsApp ನ ಹೆಚ್ಚಿನ ಭದ್ರತಾ ಪ್ರಜ್ಞೆಯ ಬಳಕೆದಾರರಿಗಾಗಿ ಮತ್ತು ಅವರು ಸರಿಯಾದ ವ್ಯಕ್ತಿ ಜೊತೆ ಚಾಟ್ ಮಾಡುತ್ತಿದ್ದಾರಾ ಎಂದು ಖಚಿತಪಡಿಸಲು ಅವಕಾಶ ಮಾಡಿಕೊಡುತ್ತದೆ. ಇದು ವಾಟ್ಸಾಪ್ "Key Transparency" ಎಂದು ಕರೆಯಲ್ಪಡುವ ವಿಧಾನವಾಗಿದ್ದು ಬಳಕೆದಾರರು ಸುರಕ್ಷಿತ ಸಂಪರ್ಕದಲ್ಲಿದ್ದಾರಾ ಎಂದು ಆಟೋಮ್ಯಾಟಿಕ್ ಆಗಿ ಪರಿಶೀಲಿಸುತ್ತದೆ. ಈ ಭದ್ರತೆಯನ್ನು ಸುಲಭಗೊಳಿಸಲು ಹಲವಾರು ವಿಧಾನಗಳಿವೆ. ಆದರೆ ಇಲ್ಲಿ ಬಳಕೆದಾರರು ಟೂ-ಸ್ಟೆಪ್  ವೆರಿಫಿಕೇಷನ್ ಮತ್ತು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಫೀಚರ್‌ಗಳನ್ನು ಮಾತ್ರ ಆನ್ ಮಾಡಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo