ವಾಟ್ಸಾಪ್ ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಆ್ಯಪ್ ಅನ್ನು ನೀವು ಪ್ರವೇಶಿಸಬಹುದಾದ ಹಲವಾರು ಸೈಟ್‌ಗಳಿವೆ. ನಿರ್ದಿಷ್ಟ ಸಮಯದ ನಂತರ ಬಳಕೆದಾರರು ತಮ್ಮ ಮೆಸೇಜ್ ಗಳನ್ನು ಆಟೋಮ್ಯಾಟಿಕ್ ಆಗಿ ಡಿಲೀಟ್ ಮಾಡುವ ಆಯ್ಕೆಯನ್ನು ವಾಟ್ಸಾಪ್ 2020 ರಲ್ಲಿ ಪರಿಚಯಿಸಿತು. ಈ ಫೀಚರ್ ಅನ್ನು ಸುಧಾರಿಸುವ ಸಲುವಾಗಿ ಕಂಪನಿಯು 15 ನಿಮಿಷಗಳಲ್ಲಿ ಈ ಆಯ್ಕೆಗಳನ್ನು ಸೇರಿಸಲು ಯೋಜಿಸಿದೆ ಎಂದು ವರದಿಯಾಗಿದೆ. ಇತ್ತೀಚಿನ ಬೀಟಾ ಅಪ್‌ಡೇಟ್‌ನಲ್ಲಿ ಫೀಚರ್ ಅನ್ನು ಗಮನಿಸಿದ ನಂತರ WABetaInfo ಪ್ರಕಾರ ವಾಟ್ಸಾಪ್ ಡೆಸ್ಕ್‌ಟಾಪ್‌ಗೆ ಮುಂಬರುವ ಅಪ್ಡೇಟ್ನಿಂದ ಡಿಸ್ಅಪೀರ್ ಆಗುವ ಮೆಸೇಜ್ ಗಳು ಕಾಣುವ ಸಮಯವನ್ನು ಸರಿಹೊಂದಿಸುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ವಾಟ್ಸಾಪ್‌ನಲ್ಲಿ ಡಿಸ್ಅಪೀರ್ ಆಗುವ ಮೆಸೇಜ್ ಗಳ ಫೀಚರ್ ನಿರ್ದಿಷ್ಟ ಸಮಯದ ನಂತರ ಆಯ್ದ ಮೆಸೇಜ್ ಗಳನ್ನು ಆಟೋಮ್ಯಾಟಿಕ್ ಆಗಿ ಡಿಲೀಟ್ ಮಾಡುವ ಮೂಲಕ ಬಳಕೆದಾರರು ತಮ್ಮ ಚಾಟಿಂಗ್ಗಳನ್ನು ಮತ್ತಷ್ಟು ರಕ್ಷಿಸಿಕೊಳ್ಳಬಹುದು. ಈ ಫೀಚರ್ ಮೆಸೇಜ್ ಗಳನ್ನು ಸ್ವೀಕರಿಸುವವರ ಡಿವೈಸ್ ಅಥವಾ ವಾಟ್ಸಾಪ್ ಸರ್ವರ್‌ಗಳಲ್ಲಿ ಸೇವ್ ಆಗುವುದಿಲ್ಲ ಎಂದು ಖಚಿತಪಡಿಸುತ್ತದೆ. ಪ್ರಸ್ತುತ ವಾಟ್ಸಾಪ್ನಲ್ಲಿ ಡಿಸ್ಅಪೀರ್ ಆಗುವ ಮೆಸೇಜ್ ಗಳಿಗೆ ಕೇವಲ ಮೂರು ಆಯ್ಕೆಗಳನ್ನು ನೀಡುತ್ತದೆ. ಅವುಗಳೆಂದರೆ 24 ಗಂಟೆಗಳು,7 ದಿನಗಳು ಮತ್ತು 90 ದಿನಗಳಾಗಿವೆ.
ವರದಿಯ ಪ್ರಕಾರ ಈ ಫೀಚರ್‌ಗಾಗಿ ಲಭ್ಯವಿರುವ ಸಮಯದ ಆಯ್ಕೆಗಳನ್ನು ವಿಸ್ತರಿಸಲು ಮೆಸೇಜಿಂಗ್ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ವರದಿಯಲ್ಲಿ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಹೊಸ ಅವಧಿಗಳ ಒಂದು ನೋಟವನ್ನು ತೋರಿಸಲಾಗಿದೆ. ಡಿಸ್ಅಪೀರ್ ಆಗುವ ಮೆಸೇಜಿಂಗ್ ಹೊಸ ಫೀಚರ್‌ನ ಸಮಯವನ್ನು ವಾಟ್ಸಾಪ್ನ ವಿಂಡೋಸ್ ಡೆಸ್ಕ್‌ಟಾಪ್ ಕ್ಲೈಂಟ್‌ನ ಬೀಟಾ ವರ್ಷನ್ ನಿಂದ ತಿಳಿಯಲಾಗಿದೆ. iOS ಮತ್ತು ಆಂಡ್ರಾಯ್ಡ್ ಬೀಟಾ ಬಿಡುಗಡೆಗಳಲ್ಲಿ ಅದೇ ಸಮಯದ ಲಭ್ಯತೆ ಇರುವುದು ಇನ್ನೂ ದೃಢೀಕರಿಸಿಲ್ಲ.
ಡಿಸ್ಅಪೀರ್ ಆಗುವ ಮೆಸೇಜ್ ಗಳಿಗೆ ಲಭ್ಯವಿರುವ ಸಮಯದ ಆಯ್ಕೆಗಳ ವ್ಯಾಪ್ತಿಯನ್ನು ವಾಟ್ಸಾಪ್ ವಿಸ್ತರಿಸಿದರೆ ಬಳಕೆದಾರರು ತಮ್ಮ ಪ್ರೈವೇಟ್ ಚಾಟ್‌ಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಹೊಂದಿರುತ್ತಾರೆ. ಸೂಕ್ಷ್ಮ ಅಥವಾ ಗೌಪ್ಯ ಮಾಹಿತಿಯನ್ನು ಹೊಂದಿರುವ ಮೆಸೇಜ್ ಗಳಿಗೆ ಒಂದು ಗಂಟೆಯ ಅವಧಿಯನ್ನು ಸೇರಿಸುವುದು ವಿಶೇಷವಾಗಿ ಸಹಾಯಕವಾಗಬಹುದು. ಏಕೆಂದರೆ ಅಂತಹ ಮೆಸೇಜ್ ಗಳು ಅಲ್ಪಾವಧಿಯ ನಂತರ ಸರ್ವರ್ ಮತ್ತು ಸ್ವೀಕರಿಸುವವರ ಡಿವೈಸ್‌ನಿಂದ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತದೆ. ಇದು ವಾಟ್ಸಾಪ್ನ ಟೆಕ್ಸ್ಟಿಂಗ್ ಸೇವೆಯ ಗೌಪ್ಯತೆ ಮತ್ತು ಭದ್ರತೆಯನ್ನು ಸುಧಾರಿಸುತ್ತದೆ.