digit zero1 awards

WHATSAPP ಮೂಲಕ ನೀವು ನಿಮ್ಮವರನ್ನು ಈ ರೀತಿ ಸದಾ ಟ್ರ್ಯಾಕ್ ಮಾಡಿ ಅವರೊಂದಿಗಿರಬವುದು

WHATSAPP ಮೂಲಕ ನೀವು ನಿಮ್ಮವರನ್ನು ಈ ರೀತಿ ಸದಾ ಟ್ರ್ಯಾಕ್ ಮಾಡಿ ಅವರೊಂದಿಗಿರಬವುದು
HIGHLIGHTS

ನಿಮ್ಮವರ ನಿಖರ ಸ್ಥಳವನ್ನು ರಿಯಲ್ ಸಮಯದಲ್ಲಿ ಟ್ರ್ಯಾಕ್ ಮಾಡಲು ಈ ವಾಟ್ಸಾಪ್ ಫೀಚರ್ ಸಹಕಾರಿ

ವಾಟ್ಸಾಪ್ ಪ್ರತಿ ಬಾರಿ ಒಂದಲ್ಲ ಒಂದು ಹೊಸ ಹೊಸ ಫೀಚರ್ಗಳನ್ನು ತಮ್ಮ ಬಳಕೆದಾರರಿಗೆ ನೀಡಿತ್ತಲೇ ಬರುತ್ತಿದೆ. ಆದರೆ ಈ ಲೇಖನದಲ್ಲಿ ನಾನು ನಿಮಗೆ ತಿಳಿಸುವ ಈ ಸರಳ ಫೀಚರ್ ಹಲವಾರು ಜನರು ಬಳಸದೆ ಬೇರೆ ಆಯ್ಕೆಗಳತ್ತ ಮುಖ ಮಾಡುತ್ತಾರೆ. ಏಕೆಂದರೆ ಇದು ಹಲವಾರು ಜನರಿಗೆ ತಿಳಿದೆಯಿಲ್ಲ. ತಿಳಿದವರು ಕೆಲವೊಮ್ಮೆ ಮುಖ್ಯವಲ್ಲವೆಂದು ತೋರಿಸಿಕೊಳ್ಳುತ್ತಾರೆ. ಆದರೆ ಕೆಲವು ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರ ನಿಖರವಾದ ಸ್ಥಳವನ್ನು ತಿಳಿದುಕೊಳ್ಳುವುದು ಇದು ಬಹಳ ನಿರ್ಣಾಯಕ.

ಈ ಫೀಚರ್ ಅದು ನಿಮ್ಮ ಸಂಗಾತಿಯಾಗಲಿ ನಿಮ್ಮ ಮಕ್ಕಳಾಗಲಿ ಅಥವಾ ಪರಿಚಯಸ್ಥರಾಗಲಿ. ನಿಮ್ಮ ಆತಂಕದ ಪ್ರಕಾರ ಅವರಿರುವ ಸ್ಥಳದ ಬಗ್ಗೆ ನಿಮಗೆ ನಿಖರ ಮಾಹಿತಿ ನೀಡುತ್ತಾದೆ.  ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಅಥವಾ ಬೆಂಕಿಯಿಡಲು ಒಂದು ಮಾರ್ಗವಿದೆ. ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಅನುಮಾನಗಳಿಂದ ದೂರವಿಡಲು ಸಾಧ್ಯವಾಗುತ್ತದೆ. ಏಕೆಂದರೆ ನೀವು ಯಾರೊಬ್ಬರ ನಿಖರವಾದ ಸ್ಥಳವನ್ನು ವಾಟ್ಸಾಪ್ ಬಳಸಿ ತಿಳಿಯಲು ಸಾಧ್ಯವಾಗುತ್ತದೆ.

ನಿಮ್ಮ ಸ್ಥಳವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಅವರನ್ನು ಕೇಳಿಕೊಳ್ಳುವುದು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ, ನಿಮ್ಮ ಪ್ರೀತಿಪಾತ್ರರು ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಇದು ಒಂದು ಉತ್ತಮ ವಿಧಾನವಾಗಿದೆ.

ಹಂತ 1: ವಾಟ್ಸಾಪ್‌ನಲ್ಲಿ ಚಾಟ್ ಅಥವಾ ಗ್ರೂಪ್ ಚಾಟ್ ತೆರೆದು ಮತ್ತು ನಂತರ ಲಗತ್ತು ಫೈಲ್ ಚಿಹ್ನೆಯನ್ನು ಟ್ಯಾಪ್ ಮಾಡಿ.

ಹಂತ 2: ಪ್ರಸ್ತುತಪಡಿಸಿದ ಆಯ್ಕೆಗಳಲ್ಲಿ “ಸ್ಥಳ” ಕ್ಲಿಕ್ ಮಾಡಿ ಮತ್ತು ನಂತರ “ಲೈವ್ ಸ್ಥಳವನ್ನು ಹಂಚಿಕೊಳ್ಳಿ” ಆಯ್ಕೆಮಾಡಿ.

ಹಂತ 3: ಸ್ಥಳವನ್ನು ಹಂಚಿಕೊಳ್ಳಲು ಅವಧಿಯನ್ನು ಆಯ್ಕೆಮಾಡಿ ಮತ್ತು “ಕಳುಹಿಸು” ಟ್ಯಾಪ್ ಮಾಡಿ. ನೀವು 15 ನಿಮಿಷ, 1 ಗಂಟೆ ಅಥವಾ ಎಂಟು ಗಂಟೆಗಳ ಕಾಲ ಸ್ಥಳವನ್ನು ಹಂಚಿಕೊಳ್ಳಬಹುದು.

ನಂತರ ನೀವು ಗೂಗಲ್ ನಕ್ಷೆಗಳನ್ನು ಬಳಸಿಕೊಂಡು ಫೋನ್‌ನ ನಿಖರವಾದ ಸ್ಥಳವನ್ನು ನೋಡುತ್ತೀರಿ. ವಿನಂತಿಯನ್ನು ಗ್ರೂಪ್ ಚಾಟ್‌ಗೆ ಕಳುಹಿಸಿದರೆ, ನಂತರ ಸಂಭಾಷಣೆಯಲ್ಲಿರುವ ಪ್ರತಿಯೊಬ್ಬರೂ ಸ್ಥಾನವನ್ನು ನೋಡಬಹುದು. ಆದಾಗ್ಯೂ ಈ ವಿಧಾನವು ಪರಿಣಾಮಕಾರಿಯಾಗಿ ಕೆಲಸ ಮಾಡಲು ನೀವು ಇತರ ವ್ಯಕ್ತಿಯೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅವರು ಯಾವುದೇ ಸಮಯದಲ್ಲಿ ಸ್ಥಳ ಹಂಚಿಕೆ ವಿನಂತಿಯನ್ನು ನಿರಾಕರಿಸಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo