ಏನಪ್ಪಾ ಅಂದ್ರೆ TikTok ಬಳಕೆದಾರರು ಅವರವರ ಸೋಶಿಯಲ್ ಮೀಡಿಯಾ ಸೈಟ್ಗಳಲ್ಲಿ #ReturnofTikTok ಮೈಕ್ರೋಸೈಟ್ ಅನ್ನು ಹಂಚಿಕೊಳ್ಳಬೇಕಾಗುತ್ತದೆ.
TikTok ಅಶ್ಲೀಲತೆಯನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಅಪ್ರಾಪ್ತ ವಯಸ್ಕರನ್ನು ಲೈಂಗಿಕ ದುರ್ಬಳಕೆಗೆ ಒಳಪಡಿಸಿದೆ ಎಂದು ದೂರಲಾಗಿತ್ತು.
ಇದರಲ್ಲಿ ನಿಮ್ಮ ಖಾತೆಯ ಪಾಸ್ವರ್ಡ್ ಅನ್ನು ಹೇಗೆ ಬಲಪಡಿಸಬೇಕು ಮತ್ತು ಇನ್ನು ಅನೇಕ ಹೆಚ್ಚುವರಿಯ ಮಾಹಿತಿಯನ್ನು TikTok ಕಲಿಸುತ್ತಿದೆ.
ಭಾರತದಲ್ಲಿನ TikTok ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು iOS ಸ್ಟೋರ್ ವಲಯಗಳಲ್ಲಿ ಡೌನ್ಲೋಡ್ಗಳನ್ನು ನಿಷೇಧಿಸಿತ್ತು ಏಕೆಂದರೆ ತಮಿಳುನಾಡು ರಾಜ್ಯ ನ್ಯಾಯಾಲಯ ಫೆಡರಲ್ ಸರಕಾರವನ್ನು ಹೆಚ್ಚು ಬಳಸಿದ ಕಿರು ವೀಡಿಯೊಗಳ ಅಪ್ಲಿಕೇಶನ್ ಅನ್ನು ನಿಷೇಧಿಸುವಂತೆ ಆದೇಶಿಸಿತು. ಟಿಕ್ಟೊಕ್ ಅಪ್ಲಿಕೇಶನ್ ಇಂದಿನ ಪೀಳಿಗೆಯಲ್ಲಿ ಅಶ್ಲೀಲತೆಯನ್ನು ಪ್ರೋತ್ಸಾಹಿಸುತ್ತಿದೆ ಮತ್ತು ಅಪ್ರಾಪ್ತ ವಯಸ್ಕರನ್ನು ಲೈಂಗಿಕ ದುರ್ಬಳಕೆಗೆ ಒಳಪಡಿಸಿದೆ ಎಂದು ದೂರಲಾಗಿತ್ತು. ಇದರಿಂದಾಗಿ ಈ ಅಪ್ಲಿಕೇಶನ್ ಎರಡೂ ಪ್ರಸಿದ್ಧ ವೇದಿಕೆಗಳಿಂದ ತೆಗೆದುಹಾಕಲಾಗಿತ್ತು. ಆದರೆ ಈಗ ನಿಷೇಧವನ್ನು ಹಿಂದೆ ಪಡೆದು ಮೊದಲಿನಂತೆ ಲಭ್ಯವಿದೆ.
ಇದೇಲ್ಲದರಿಂದ ಜೂಜಿದ ನಂತರ TikTok ತಮ್ಮ ಬಳಕೆದಾರರಿಗೆ ₹1,00,00,000 ರೂಗಳನ್ನು ಗೆಲ್ಲುವ ಸುವರ್ಣವಕಾಶವನ್ನು ನೀಡುತ್ತಿದೆ. ಇಲ್ಲಿ ಮಾಡಬೇಕಾಗಿರುವುದು ಏನಪ್ಪಾ ಅಂದ್ರೆ TikTok ಬಳಕೆದಾರರು ಅವರವರ ಸೋಶಿಯಲ್ ಮೀಡಿಯಾ ಸೈಟ್ಗಳಲ್ಲಿ #ReturnofTikTok ಮೈಕ್ರೋಸೈಟ್ ಅನ್ನು ಹಂಚಿಕೊಳ್ಳಬೇಕಾಗುತ್ತದೆ. ಈ ಮೈಕ್ರೋಸೈಟ್ ಮೂಲಕ ಆಂಡ್ರಾಯ್ಡ್ ಮತ್ತು iSO ಫೋನ್ಗಳಿಗೆ ಇದರದೊಂದು 'ಅಪ್ಲಿಕೇಶನ್ ಡೌನ್ಲೋಡ್' ಲಿಂಕ್ಗಳನ್ನು ಒದಗಿಸುತ್ತದೆ ಅದನ್ನು ಡೌನ್ಲೋಡ್ ಮಾಡಬೇಕಾಗುತ್ತದೆ.
TikTok ಹೇಳುವುದೇನು?
TikTok ಇಂಡಿಯನ್ ಎಂಟರ್ಟೈನ್ಮೆಂಟ್ ಸ್ಟ್ರಾಟಜಿ ಮತ್ತು ಪಾಲುದಾರ ಲೀಡ್ ಸುಮೀದಾಸ್ ರಾಜಗೋಪಾಲ್ "ಭಾರತದಲ್ಲಿ 200 ದಶಲಕ್ಷಕ್ಕೂ ಹೆಚ್ಚಿನ TikTok ಬಳಕೆದಾರರಿಗೆ ಅವರ ಬೆಂಬಲ ಮತ್ತು ಪ್ರೀತಿಯನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು. ಟಿಕ್ಟಾಕ್ನೊಂದಿಗೆ ನಮ್ಮ ಪ್ರಯಾಣವನ್ನು ಮುಂದುವರೆಸಲು ನಾವು ಉತ್ಸುಕರಾಗಿದ್ದೇವೆ. ಇದರಲ್ಲಿ ಅನೇಕ ಬಳಕೆದಾರರು ಸಾಕಷ್ಟು ವಿವಿಧ ಪ್ರಕಾರದಲ್ಲಿ ಬೆಂಬಲವನ್ನು ನೀಡಿದ್ದಾರೆ. ನಮ್ಮ ಬಳಕೆದಾರರ ಸುರಕ್ಷತೆಯನ್ನು ರಕ್ಷಿಸಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.
5 ಮಿಲಿಯನ್ ಬಳಕೆದಾರರು ಪಾಲ್ಗೊಂಡಿದ್ದಾರೆ.
ಇದರ TikTok ರಸಪ್ರಶ್ನೆಯ ಮೊದಲ ಹಂತದಲ್ಲಿ ಸುಮಾರು 5 ಮಿಲಿಯನ್ ಬಳಕೆದಾರರು ಪಾಲ್ಗೊಂಡಿದ್ದಾರೆಂದು TikTok ಕಂಪನಿಯು ವರದಿ ಮಾಡಿದೆ. ಈ ರಸಪ್ರಶ್ನೆಯನ್ನು ಬಳಕೆದಾರರ ಭದ್ರತೆ ಮತ್ತು ಸುರಕ್ಷೆಯ ಮೇರೆಗೆ ನಡೆಸಲಾಯಿತು. ಇದರಲ್ಲಿ ಅನೇಕ ಬಳಕೆದಾರರು ಸಾಕಷ್ಟು ವಿವಿಧ ಪ್ರಕಾರದಲ್ಲಿ ಬೆಂಬಲವನ್ನು ನೀಡಿದ್ದಾರೆ. ಮತ್ತು ಬಳಕೆದಾರರಲ್ಲಿ ಆನ್ಲೈನ್ ಸುರಕ್ಷತೆಯ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಅಲ್ಲದೆ ಈಗಲೂ ಭಾರತ ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿ TikTok ಅಕೌಂಟ್ಗಳ ಭದ್ರತಾ ರಸಪ್ರಶ್ನೆ ಲಭ್ಯವಾಗಿದೆಯೆಂದು ಕಂಪನಿ ಹೇಳಿದೆ. ಅನೇಕ ವಿಧದ ಭದ್ರತಾ ಸಂಬಂಧಿತ ಪ್ರಶ್ನೆಗಳು ಇದರಲ್ಲಿದೆ. ಇದರಲ್ಲಿ ನಿಮ್ಮ ಖಾತೆಯ ಪಾಸ್ವರ್ಡ್ ಅನ್ನು ಹೇಗೆ ಬಲಪಡಿಸಬೇಕು ಮತ್ತು ನಿಮ್ಮ ಖಾತೆಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಮತ್ತು ಇನ್ನು ಅನೇಕ ಹೆಚ್ಚುವರಿಯ ಮಾಹಿತಿಯನ್ನು TikTok ಕಲಿಸುತ್ತಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile