TikTok ಈ ಕಾರಣಕ್ಕಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ 1 ಸ್ಟಾರ್ ರೇಟಿಂಗ್ ಪಡೆಯುತ್ತಿದೆ

TikTok ಈ ಕಾರಣಕ್ಕಾಗಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ 1 ಸ್ಟಾರ್ ರೇಟಿಂಗ್ ಪಡೆಯುತ್ತಿದೆ
HIGHLIGHTS

ಭಾರತದಲ್ಲಿ #bantiktok ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದು TikTok ಅನ್ನು ನಿಷೇಧಿಸುವಂತೆ ಒತ್ತಾಯಿಸಲಾಗಿದೆ.

TikTok ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಇದೀಗ ಭಾರತದಲ್ಲಿ ಭಾರಿ ಟೀಕೆಗಳನ್ನು ಎದುರಿಸುತ್ತಿದೆ.

ಜನಪ್ರಿಯ TikTok ಶಾರ್ಟ್ ವೀಡಿಯೊ ಶೇರಿಂಗ್ ಅಪ್ಲಿಕೇಶನ್ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಖ್ಯಾತಿ ಮತ್ತು ಅಪಖ್ಯಾತಿಯನ್ನು ಗಳಿಸಿದೆ. ಭಾರತದಲ್ಲಿ ಕಳೆದ ವರ್ಷ ಹಲವಾರು ರಾಜ್ಯ ಸರ್ಕಾರಗಳು ಸೇರಿದಂತೆ ಸಂಘ ಸಂಸ್ಥೆಗಳು ಇದರ ವಿರುದ್ಧವಾಗಿ ನಿಷೇಧ ಏರಿದ್ದವು. ಅದೇ ಮಾದರಿಯಲ್ಲಿ ಟಿಕ್‌ಟಾಕ್ ಮತ್ತೇ ಈಗ ಹೆಚ್ಚು ಹಿನ್ನಡೆಯನ್ನು ಎದುರಿಸುತ್ತಿವುದ್ದರಿಂದ ಆಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದರ ರೇಟಿಂಗ್ ಸಹ 4.5 ರಿಂದ ಕೇಳಗಿಳಿದು 1.2 ಸ್ಟಾರ್‌ಗೆ ಬರಲು ಕಾರಣವಾಯಿತು. ಮತ್ತು ದೇಶದಲ್ಲಿ ಪುನಃ ನಿಷೇಧವನ್ನು ಉಂಟುಮಾಡಿದ್ದು ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ಭಾರತದಲ್ಲಿನ ಬಳಕೆದಾರರು ಕಳೆದ ಕೆಲವು ದಿನಗಳಿಂದ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈ ಜನಪ್ರಿಯ TikTok ಶಾರ್ಟ್ ವೀಡಿಯೊ ಶೇರಿಂಗ್  ಅಪ್ಲಿಕೇಶನ್‌ಗೆ 1-ಸ್ಟಾರ್ ರೇಟಿಂಗ್ ನೀಡುತ್ತಿದ್ದಾರೆ ಇದರಿಂದಾಗಿ ಅಪ್ಲಿಕೇಶನ್‌ನ ಪ್ರಸ್ತುತ ರೇಟಿಂಗ್ ಆಪ್ ಸ್ಟೋರ್‌ನಲ್ಲಿ 4.5 ರಿಂದ 1.2 ಕ್ಕೆ ಇಳಿದಿದೆ. ಮೊದಲ ಅಂಶವೆಂದರೆ ಈ 1 ಸ್ಟಾರ್ ರೇಟಿಂಗ್ ಅನ್ನು #bantiktok ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಮಾಡುತ್ತಿದ್ದು ಭಾರತದಲ್ಲಿ ಮತ್ತೊಮ್ಮೆ ಈ ಅಪ್ಲಿಕೇಶನ್ ಅನ್ನು ನಿಷೇಧಿಸುವಂತೆ ಒತ್ತಾಯಿಸಲಾಗಿದೆ. ಈ ಅಪ್ಲಿಕೇಶನ್ ಇನ್ನೂ ಆಪಲ್ ಫೋನ್ಗಳ ಆಪ್ ಸ್ಟೋರ್‌ನಲ್ಲಿ 4.8 ರೇಟಿಂಗ್ ಹೊಂದಿದೆ ಈ ಮೂಲಕ iOS ಬಳಕೆದಾರರ ಮೂಲ ಆಂಡ್ರಾಯ್ಡ್‌ಗಿಂತ ಕಡಿಮೆಯಾಗಿರುವುದು ತಿಳಿಯಬವುದು.

TikTok

ಈ ಇಡೀ ಚರ್ಚೆಗಳ ಬಗ್ಗೆ ನಿಮಗೆ ಒಂದು ಕಲ್ಪನೆಯನ್ನು ನೀಡಲು ಜನಪ್ರಿಯ ಯೂಟ್ಯೂಬರ್ ಕ್ಯಾರಿಮಿನಾಟಿ YouTube vs TikTok' ಬ್ಯಾಟಲ್ ಹಿನ್ನೆಲೆಯಲ್ಲಿ ಜನಪ್ರಿಯ ಟಿಕ್ ಟೋಕರ್ ಅಮರ್ ಸಿದ್ದಿಕಿ ಅವರನ್ನು ಎಣಗಿಸುವ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದಾಗ ಅದು ಪ್ರಾರಂಭವಾಯಿತು. ಈ ವೀಡಿಯೊ ವೀಕ್ಷಕರಿಂದ ಲಕ್ಷಾಂತರ ವೀಕ್ಷಣೆಗಳು ಮತ್ತು ಬೆಂಬಲಗಳನ್ನು ಸಂಗ್ರಹಿಸಿದೆ ಆದಾಗ್ಯೂ ಸೇವಾ ನಿಯಮಗಳನ್ನು ಪಾಲಿಸದ ಕಾರಣ ಈ ವೀಡಿಯೊವನ್ನು ಸದ್ಯಕ್ಕೆ ಶೇರಿಂಗ್ ವೇದಿಕೆಯಿಂದ ತೆಗೆದುಹಾಕಲಾಗಿದೆ.

ಇದನ್ನು ಅನುಸರಿಸಿ TikTok ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕಳಪೆ ರೇಟಿಂಗ್ ಪಡೆಯಲು ಪ್ರಾರಂಭಿಸಿತು ಮತ್ತು ಕ್ಯಾರಿಮಿನಾಟಿಯನ್ನು ಬೆಂಬಲಿಸುವ ಮೂಲಕ ಟ್ವಿಟರ್ ಟ್ರೆಂಡ್‌ಗಳು ಎಳೆತವನ್ನು ಪಡೆಯಲು ಪ್ರಾರಂಭಿಸಿದವು. ಮತ್ತೊಂದು ಟಿಕ್‌ಟೋಕರ್ ಫೈಸಲ್ ಸಿದ್ದಿಕಿ ಆಸಿಡ್ ದಾಳಿಯನ್ನು ಅನುಮೋದಿಸುವ ಟಿಕ್‌ಟಾಕ್ ವೀಡಿಯೊವನ್ನು ಪೋಸ್ಟ್ ಮಾಡಿದಾಗ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು ಇದು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೆಚ್ಚು ಕಳಪೆ ರೇಟಿಂಗ್ ಮತ್ತು ಅಪ್ಲಿಕೇಶನ್‌ನ ನಿಷೇಧದ ಬೇಡಿಕೆಗೆ ಕಾರಣವಾಯಿತು.

ಟಿಕ್‌ಟಾಕ್ ಭಾರತದಲ್ಲಿ ವಿವಾದಗಳಿಂದ ಆವೃತವಾಗಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಆ್ಯಪ್ ದೇಶದಲ್ಲಿ ಅವಹೇಳನಕಾರಿ ಮತ್ತು ಆಕ್ರಮಣಕಾರಿ ವಿಷಯವನ್ನು ಉತ್ತೇಜಿಸುತ್ತಿರುವುದು ಕಂಡುಬಂದಿದೆ. ಇದನ್ನು ಪೋಸ್ಟ್ ಮಾಡಿ ಟಿಕ್‌ಟಾಕ್ ಸುಮಾರು 6 ಮಿಲಿಯನ್ ವೀಡಿಯೊಗಳನ್ನು ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಿದೆ. ಆದರೂ ಇದನ್ನು ಗೂಗಲ್ ಪ್ಲೇ ಮತ್ತು ಆಪ್ ಸ್ಟೋರ್‌ನಿಂದ ತೆಗೆದುಹಾಕಲಾಗಿದೆ. ತಾತ್ಕಾಲಿಕವಾಗಿ ನಿಷೇಧಿಸಿದ ನಂತರ ಮದರಾಸ್ ನ್ಯಾಯಾಲಯವು ಟಿಕ್ಟಾಕ್ ನಿಷೇಧವನ್ನು ತೆಗೆದುಹಾಕಿತು ಮತ್ತು ಅದು ಅಂತಿಮವಾಗಿ ಎರಡೂ ಆಪ್ ಸ್ಟೋರ್‌ಗಳಿಗೆ ಮರಳಿತು. ಈಗ ಪುನಃ ಆ TikTok ಬ್ಯಾನ್ ಆಗುತ್ತಾ ಇಲ್ವಾ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲವಾದರು ಇದರ ಎಲ್ಲಾ ಮಾಹಿತಿಯನ್ನು ಸಮಯಕ್ಕೆ ತಕ್ಕಂತೆ ನಿಮಗೆ ಡಿಜಿಟ್ ಕನ್ನಡದಲ್ಲಿ ನೀಡುತ್ತಿರುತ್ತೇವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo