digit zero1 awards

ಇನ್ಮೇಲೆ ಟಿಕ್’ಟಾಕ್ ಬಳಸುವ ಮಕ್ಕಳ ಸಂಪೂರ್ಣ ಕಂಟ್ರೋಲ್ ಅವರ ಪೋಷಕರ ಕೈಯಲ್ಲಿದೆ

ಇನ್ಮೇಲೆ ಟಿಕ್’ಟಾಕ್ ಬಳಸುವ ಮಕ್ಕಳ ಸಂಪೂರ್ಣ ಕಂಟ್ರೋಲ್ ಅವರ ಪೋಷಕರ ಕೈಯಲ್ಲಿದೆ
HIGHLIGHTS

ಈ ಹೊಸ ಫೀಚರ್ ಬಿಡುವಗೊಳಿಸುವ ಮೂಲಕ TikTok ಮಕ್ಕಳ ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನವರಿಸುವಂತೆ ಮಾಡಿದೆ

ಈಗ ಯಾರ ಫೋನಲ್ಲಿ ತಾನೇ ಈ TikTok ಇಲ್ಲ ಹೇಳಿ ಸುಮಾರು 80% ಜನರು ಈ ಅಪ್ಲಿಕೇಶನ್ ಬಳಸುತ್ತಿದ್ದಾರೆ. ಕೆಲವರು ಶಾರ್ಟ್ ಮಾಡಲು ಬಯಸಿದರೆ ಕೆಲವರು ಆ ವಿಡಿಯೋಗಳನ್ನು ನೋಡಲು ಬಳಸುತ್ತಿದ್ದಾರೆ. ವಿಶ್ವದಾದ್ಯಂತ ಜನಪ್ರಿಯ ಶಾರ್ಟ್ ವಿಡಿಯೋ ಫ್ಲಾಟ್ಫಾರಂ ಆಗಿರುವ ಟಿಕ್‌ಟಾಕ್ ಈಗ ಅದನ್ನು ಬಳಸುವ ಹೆಚ್ಚು ಹದಿಹರೆಯದವರು ಈ ಅಪ್ಲಿಕೇಶನ್ ಅನ್ನು ಹೇಗೆ ಬಳಸುತ್ತಿದ್ದಾರೆ ಎಂಬುದರ ಕುರಿತಾಗಿ ತಮ್ಮ ಪೋಷಕರಿಗೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತಿದೆ. ನೆನ್ನೆ ಬುಧವಾರ ಈ ವೀಡಿಯೊ ಪ್ಲಾಟ್‌ಫಾರ್ಮ್ ಕುಟುಂಬ ಸುರಕ್ಷತಾ ಮೋಡ್ (Family Safety Mode) ಎಂಬ ಹೊಸ ಫೀಚರ್ ಅನ್ನು ಹೊರತಂದಿದೆ. ಇದು ಪೋಷಕರು ತಮ್ಮ ಮಗುವಿನ ಚಟುವಟಿಕೆ ಮತ್ತು ಕಳೆದ ಸಮಯವನ್ನು ಈ ಫೀಚರ್ ಮೂಲಕ ನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಇದು ಈಗಾಗಲೇ ಕೆಲವು ಯುರೋಪಿಯನ್ ದೇಶಗಳಲ್ಲಿ ಲಭ್ಯವಿದೆ. ಭವಿಷ್ಯದಲ್ಲಿ ಅಮೇರಿಕ ಸೇರಿದಂತೆ ಇತರ ಪ್ರದೇಶಗಳಿಗೆ ಉಪಕರಣವು ಬರುತ್ತದೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಲು ಕೋರಿಕೆಗೆ ಕಂಪನಿಯು ತಕ್ಷಣ ಸ್ಪಂದಿಸಲಿಲ್ಲ. ಈ ಹೊಸ ವೈಶಿಷ್ಟ್ಯದೊಂದಿಗೆ ಪೋಷಕರು ಪ್ರತಿದಿನ ತಮ್ಮ ಮಗುವಿಗೆ ಸಮಯದ ಮಿತಿಗಳನ್ನು ನಿರ್ಧರಿಸಬಹುದು. ಅಂದ್ರೆ ಈ ಅಪ್ಲಿಕೇಶನ್ ಒಳಗೆ ಸುಮಾರು 40 ನಿಮಿಷಗಳು, 60 ನಿಮಿಷಗಳು ಮತ್ತು 90 ನಿಮಿಷಗಳನ್ನು ಸೆಟ್ ಮಾಡಬವುದು. 

ಪೋಷಕರು ಇದರ ಮೇರೆಗೆ ನೇರ ಮೆಸೇಜ್ಗಳನ್ನು ಮಿತಿಗೊಳಿಸಬಹುದು ಅಥವಾ ಆಫ್ ಮಾಡಬಹುದು. ಇದರೊಂದಿಗೆ ಅವರಿಗೆ ಸೂಕ್ತವಲ್ಲದ ಕೆಲವು ವಿಷಯವನ್ನು ನಿರ್ಬಂಧಿಸಬಹುದು. ಅಮೇರಿಕಾದಲ್ಲಿ 13 ವರ್ಷದೊಳಗಿನ ಬಳಕೆದಾರರಿಗೆ ಅಪ್ಲಿಕೇಶನ್‌ನ ಸೀಮಿತ ಆವೃತ್ತಿಯನ್ನು ನೀಡುತ್ತದೆ. ಇದು ವೀಡಿಯೊಗಳನ್ನು ಹಂಚಿಕೊಳ್ಳಲು ಅಥವಾ ಕಾಮೆಂಟ್ ಮಾಡಲು ಮತ್ತು ಇತರ ಜನರೊಂದಿಗೆ ಸಂದೇಶ ಕಳುಹಿಸಲು ಅನುಮತಿಸುವುದಿಲ್ಲವಾದರೂ ಮಕ್ಕಳು ಇನ್ನೂ ವಯಸ್ಸಿಗೆ ಸೂಕ್ತವಾದ ಟಿಕ್‌ಟಾಕ್ ವಿಷಯವನ್ನು ವೀಕ್ಷಿಸಬಹುದು. 

ನಿಮಗೆ ತಿಳಿದಿರುವ ಹಾಗೆ ಕಳೆದ ವರ್ಷ ಟಿಕ್‌ಟಾಕ್ ಸ್ಕ್ರೀನ್ ಸಮಯ ನಿರ್ವಹಣಾ ಸಾಧನವನ್ನು ಸೇರಿಸಿದ್ದು ಬಳಕೆದಾರರು ಪ್ರತಿದಿನ ಪ್ಲಾಟ್‌ಫಾರ್ಮ್‌ನಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎಂಬುದಕ್ಕೆ ಸಮಯ ಮಿತಿಗಳನ್ನು ನಿಗದಿಪಡಿಸಲು ಅನುವು ಮಾಡಿಕೊಡುತ್ತದೆ. ಈ ತಿಂಗಳ ಆರಂಭದಲ್ಲಿ ಜನಪ್ರಿಯ ಟಿಕ್‌ಟಾಕ್ ನಕ್ಷತ್ರಗಳೊಂದಿಗೆ ಪಾಲುದಾರಿಕೆ ಹೊಂದಿದ್ದು ಶಾರ್ಟ್ ವೀಡಿಯೊಗಳನ್ನು ತಯಾರಿಸಲು ಬಳಕೆದಾರರು ಪ್ಲಾಟ್‌ಫಾರ್ಮ್ ಅನ್ನು ಎಷ್ಟು ಬಳಸುತ್ತಿದ್ದಾರೆ ಎಂಬುದನ್ನು ಮೇಲ್ವಿಚಾರಣೆ ಮಾಡಲು ಪ್ರೋತ್ಸಾಹಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo